ಬೆಳಗಾವಿ
ಟಿಪ್ಪು ಜಯಂತಿ ಆಚರಣೆಯನ್ನು ನಮ್ಮ ರಾಜ್ಯದಲ್ಲಿ ಆಚರಣೆ ಮಾಡದೆ ಬೇರೆ ಎಲ್ಲಿ ಆಚರಣೆ ಮಾಡಬೇಕು ? ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಜಯಮಾಲ ಪ್ರಶ್ನಿಸಿದರು.
ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದರು.
ಬ್ರಿಟಿಷ್ ರ ವಿರುದ್ದ ಹೋರಾಟ ಮಾಡಿದ ಮಹಾನ್ ವ್ಯಕ್ತಿಯ ಜಯಂತಿಯನ್ನು ಆಚರಣೆ ಮಾಡಲು ಕೆಲವರು ವಿರೋಧ ಮಾಡುತ್ತಿದ್ದಾರೆ. ಚರಿತ್ರೆಯಲ್ಲಿ ರಾಜ್ಯ ಬಾರ ಮಾಡುವಾಗವ ಕೆಲವರ ಹತ್ಯೆಮಾಡಿ ಮಾಡಿದ್ದಾರೆ.
ಇದೊಂದು ಚರ್ಚೆಯಾಗುವುದುದಾದರೆ ಎಲ್ಲರೂ ಕೂಡಿ ಚಿಂತನೆ ನಡೆಸಬೇಕು. ಚಿಕ್ಕ ವಯಸ್ಸಿನಿಂದಲೂ ಟಿಪ್ಪುವಿನ ಇತಿಹಾಸ ಓದಿಕೊಂಡು ಬೆಳೆದಿದ್ದೇವೆ.
ರಾಜಕೀಯ ವಿರೋಧದಿಂದ ಪರೋಕ್ಷವಾಗಿ ಬಿಜೆಪಿ ಮುಖಂಡರು ಗೊಂದಲ ಸೃಷ್ಠಿ ಮಾಡುವುದು ಸರಿಯಲ್ಲ ಎಂದು ಹರಿಹಾಯ್ದರು.
ಬೆಳಗಾವಿ ಚಳಿಗಾಲದ ಅಧಿವೇಶದಲ್ಲಿ ಉತ್ತರ ಕರ್ನಾಟಕ – ದಕ್ಷಿಣ ಕರ್ನಾಟಕ ಎಂಬ ಬೇಧ ಇಲ್ಲ. ಉತ್ತರ ಕರ್ನಾಟಕ ನಮ್ಮ ಹೃದಯ ಇದ್ದಂತೆ. ಹಿಂದಿನ ಸರಕಾರ ಹಾಗೂ ಸಮ್ಮಿಶ್ರ ಸರಕಾರ ಈ ಭಾಗಗಕ್ಕೆ ಅನ್ಯಾಯ ಮಾಡಿಲ್ಲ. ಸಾಕಷ್ಟು ಅನುದಾನವನ್ನು ಉತ್ತರ ಕರ್ನಾಟಕದ ನೀಡಲಾಗಿದೆ.
ಶಬರಿಮಲೈ ಮಹಿಳಾ ಪ್ರವೇಶದ ಕುರಿತು ನಾನು ಏಳು ವರ್ಷದಿಂದ ಹೋರಾಟ ನಡೆಸಿದ್ದೇನೆ. ನ್ಯಾಯಾಲಯದ ತೀರ್ಪು ಮಹಿಳೆಯರ ಪರವಾಗಿ ಬರುತ್ತದೆ ಎಂದು ಭಾವಿಸಿದ್ದೇನೆ.