ಬೆಳಗಾವಿ- ಬೆಳಗಾವಿಯ ಗುತ್ತಿಗೆದಾರ,ಸಂತೋಷ ಪಾಟೀಲ, ಅವರಿಂದ 40% ಕಮೀಷನ್ ಕೇಳಿದ ಆರೋಪ ಎದುರಿಸಿ,ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ,ಕೆ.ಎಸ್ ಈಶ್ವರಪ್ಪನವರಿಗೆ ಕ್ಲೀನ್ ಚೀಟ್ ಸಿಕ್ಕಿದೆ.
ಮಾಜಿ ಸಚಿವ ಕೆ.ಎಸ್ ಈಶ್ವರಪ್ಪನವರು 40 % ಕಮೀಷನ್ ಕೇಳಿದ್ದಾರೆ ಎಂದು ಆರೋಪಿಸಿ ಡೆತ್ ನೋಟ್ ಬರೆದಿಟ್ಟು,ಗುತ್ತಿಗೆದಾರ ಸಂತೋಷ ಪಾಟೀಲ ಉಡುಪಿಯ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ಹಿನ್ನಲೆಯಲ್ಲಿ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದ ತನಿಖೆ ಮಾಡಿದ. ಉಡುಪಿ ಟೌನ್ ಪೋಲೀಸರು,ಸಂತೋಷ ಪಾಟೀಲ ಈಶ್ವರಪ್ಪನವರ ಆಪ್ತರ ಜೊತೆ ಸಂಪರ್ಕ ಮಾಡಿದ ಬಗ್ಗೆ, 40 % ಕಮೀಷನ್ ಕೇಳಿದ ಬಗ್ಗೆ ಸಾಕ್ಷಾಧಾರಗಳ ಕೊರತೆ ಇದೆ ಎಂದು ಬಿ.ರಿಪೋರ್ಟ್ ಸಲ್ಲಿಸಿದ್ದಾರೆ.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಈಶ್ವರಪ್ಪ ನವರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಎಲ್ಲರ ಆಶೀರ್ವಾದದಿಂದ ಆರೋಪದಿಂದ ಮುಕ್ತನಾಗಿದ್ದೇನೆ,ಇದು ಚೌಡೇಶ್ವರಿ ದೇವಿಯ ಕೃಪೆ ಎಂದು ಈಶ್ವರಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.