ಬೆಳಗಾವಿ- ಕಾಕತಿ ಹೊರ ವಲಯದಲ್ಲಿ ಅಪ್ರಾಪ್ತ ಬಾಲಕಿಯ ಅಮಾನುಶವಾಗಿ ಅತ್ಯಾಚಾರ ನಡೆಸಿದ ನಾಲ್ಕು ಜನ ರೇಪಿಸ್ಟಗಳಿಗೆ ಹಿಂಡಲಗಾ ಕಾರಾಗೃಹದ ಕೈದಿಗಳು ಚನ್ನಾಗಿ ಧುಲಾಯಿ ಮಾಡಿದ ಘಟನೆ ನಡೆದಿದೆ
ಕಾಕತಿ ಅತ್ಯಾಚಾರ ಪ್ರಕರಣದಲ್ಲಿ ಪೋಲೀಸರು ನಾಲ್ಕುಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರು ಪಡಿಸಿ ಪೋಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದರು ಶನಿವಾರ ಕಸ್ಟಡಿಯ ಅವಧಿ ಮುಗಿದು ನಾಲ್ಕು ಜನ ಆರೋಪಿಗಳನ್ನು ಹಿಂಡಲಗಾ ಕಾರಾಗೃಹಕ್ಕೆ ರವಾನಿಸಲಾಗಿತ್ತು
ರೇಪಿಸ್ಟಗಳು ಜೈಲಿಗೆ ಬಂದಿರುವ ಸುದ್ಧಿ ಜೈಲಿನಲ್ಲಿ ಹರಡುತ್ತದ್ದಂತೆಯೇ ಕೈದಿಗಳೆಲ್ಲ ಸೇರಿಕೊಂಡು ರೇಪುಸ್ಟಗಳಿಗೆ ಚನ್ನಾಗಿ ಥಳಿಸಿದ್ದಾರೆ ರೇಪಿಸ್ಟಗಳಿಂದ ಜೈಲಿನ ಟಾಯಲೆಟ್ ಹಾಗು ಬಾತ್ ರೂಮ್ ಸ್ವಚ್ಛ ಮಾಡಿಸಿ ಶಿಕ್ಷೆ ನೀಡಿದ ಘಟನೆ ಜೈಲಿನಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ
ಜೈಲಿಗೆ ಹೋದ ರೇಪಿಸ್ಟಗಳು ಕೈದಿಗಳ ಆಕ್ರೋಶಕ್ಕೆ ಗುರಿಯಾಗಿ ಶಿಕ್ಷೆ ಅನುಭವಿಸಿದ್ದಾರೆ ಎನ್ನಲಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ