ಗೋವಾ ಮತ್ತೆ ಕ್ಯಾತೆ ತೆಗೆದಿದೆ. ಕಳಸಾ ಬಂಡೂರಿ ಮಹಾದಾಯಿ ಕುರಿತು ತೀರ್ಪು ಹೊರಬಿದ್ದರೂ ಈ ನಾಲೆಗಳಿಂದ ನೀರು ಹೊರಬಂದಿಲ್ಲ.ತಡೆಗೋಡೆ ತೆರವು ಆಗಿಲ್ಲ ಆದ್ರೂ ಕೇಂದ್ರದ ಪ್ರವಾಹ ಸಮೀತಿ ಕಳಸಾ ಬಂಡೂರಿ ಜಲಾಯನ ಪ್ರದೇಶಗಳಿಗೆ ಭೇಟಿ ನೀಡಲಿದೆ.. ನೀರಿನ ವಿಚಾರವಾಗಿ ಗೋವಾ ಕರ್ನಾಟಕದ ಜೊತೆಗೆ ಚೆಲ್ಲಾಟವಾಡಿದ್ರೆ ಇಲ್ಲಿ ಕರ್ನಾಟಕದಲ್ಲಿ ಸಿಎಂ ಡಿಸಿಂ ಸ್ಥಾನಕ್ಕೆ ಕಚ್ಚಾಟ ನಡೆದಿದೆ.
ಬೆಳಗಾವಿಉತ್ತರ ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಯಾದ ಮಹದಾಯಿ ಯೋಜನೆಗೆ ಗೋವಾ ಮತ್ತೆ ಕ್ಯಾತೆ ತೆಗೆದಿದ್ದು, ಗೋವಾ ಒತ್ತಡದ ಹಿನ್ನೆಲೆಯಲ್ಲಿ ಕೇಂದ್ರ ಪ್ರವಾಹ ಸಮಿತಿಯು ಮಹದಾಯಿ ನದಿ ಜಲಾನಯನ ಪ್ರದೇಶಗಳಲ್ಲಿ ಪರಿಶೀಲನೆ ಕಾರ್ಯ ಕೈಗೊಂಡಿದೆ. ಗೋವಾ ನಡೆ ಕನ್ನಡಪರ ಸಂಘಟನೆಗಳನ್ನು ಕೆರಳಿಸುವಂತೆ ಮಾಡಿದೆ.
ಮಹದಾಯಿ ಜಲಾನಯನ ಪ್ರದೇಶದ ವ್ಯಾಪ್ತಿಯು ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರ ಈ ಮೂರೂ ರಾಜ್ಯಗಳಲ್ಲಿದೆ. ಈಗಾಗಲೇ ಪ್ರವಾಹ ಸಮಿತಿಯು ಗೋವಾರಾಜ್ಯದಲ್ಲಿನ ಜಲಾನಯನ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜು. 7 ರಂದು ಖಾನಾಪುರ ತಾಲೂಕಿನ ಕಣಕುಂಬಿ ಬಳಿಯ ಕಳಸಾ- ಬಂಡೂರಿ ನಾಲಾ ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಲಿದೆ.
ಆದರೆ, ಕಳಸಾ- ಬಂಡೂರಿ ನಾಲೆಯಲ್ಲಿ ನೀರೇ ಹರಿಯುತ್ತಿಲ್ಲ. ಪ್ರವಾಹ ಸಮಿತಿ ನೀರಿಲ್ಲದ ನಾಲಾಗಳಿಗೆ ಭೇಟಿ ನೀಡಲಿದೆ.ಸದಾ ಒಂದಿಲ್ಲೊಂದು ನೆವ ಮುಂದೆಮಾಡಿಕೊಂಡು ಮಹದಾಯಿ ಯೋಜನೆಗೆ ಅಡ್ಡಿಪಡಿಸುತ್ತ ಬಂದಿರುವ ಗೋವಾ ಸರ್ಕಾರ ಇದೀಗ ಮತ್ತೆ ಕುತಂತ್ರ ಮಾಡಿದೆ. ಕರ್ನಾಟಕ ಮಹದಾಯಿನೀರನ್ನು ತಿರುಗಿಸಿದರೆ ಕರ್ನಾಟಕ ಮತ್ತು ಗೋವಾ ಗಡಿಯಲ್ಲಿರುವ ದಟ್ಟವಾಗಿರುವ ಅರಣ್ಯ ಪ್ರದೇಶದಲ್ಲಿನ ವನ್ಯಜೀವಿ ಸಂಕುಲ, ಸಸ್ಯಸಂಕುಲಗಳ ಮೇಲೆ ವ್ಯತೀರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ. ಹಾಗಾಗಿ, ಮಹದಾಯಿ ಯೋಜನೆಕೈಬಿಡಬೇಕೆಂಬ ಮೊಂಡವಾದವನ್ನು ಗೋವಾ ಮಂಡಿಸುತ್ತಿದೆ. ಮಹದಾಯಿವಿಚಾರದಲ್ಲಿ ಗೋವಾದ ನಡೆ ಕನ್ನಡ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.
ಮಹದಾಯಿ ನೀರಾವರಿ ಯೋಜನೆಗೆ ಗೋವಾ ಸರ್ಕಾರ ಅಡ್ಡಿಪಡಿಸುವ ಕುತಂತ್ರ ಮಾಡುತ್ತಿದೆ.
ಗೋವಾ ಈಗ ಕೇಂದ್ರದ ಪ್ರವಾಹ ಸಮಿತಿಯ ಮೇಲೆಒತ್ತಡ ಹೇರುತ್ತಿದೆ. ಕರ್ನಾಟಕ ಸರ್ಕಾರ ಮಹದಾಯಿವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಅಲ್ಲದೇ,ಗೋವಾ ಕುತಂತ್ರವನ್ನು ಎದುರಿಸಲು ಎಲ್ಲಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ರಾಜ್ಯಸರ್ಕಾರವನ್ನು ಆಗ್ರಹಿಸಿದ್ದಾರೆ.