ಬೆಳಗಾವಿ:27:ಕರ್ನಾಟಕನಾಮಕರಣದಐವತ್ತು ವರ್ಷಗಳ ವರ್ಷಾಚರಣೆಸಂದರ್ಭದಲ್ಲಿ ರಾಜ್ಯಾದ್ಯಂತ ನಡೆಯುವನುಡಿ ನಮನದ ಗೀತ ಗಾಯನದಲ್ಲಿಖ್ಯಾತ ಕವಿ ಡಿ.ಎಸ್.ಕರ್ಕಿಯವರ”ಹಚ್ಚೇವು ಕನ್ನಡದ ದೀಪ” ಹಾಡನ್ನೂ ಸಹಸೇರಿಸಬೇಕೆಂದು ಬೆಳಗಾವಿ ಜಿಲ್ಲೆಯಸಾಹಿತಿಗಳು ಇಂದು ಜಿಲ್ಲಾಧಿಕಾರಿಗಳಮೂಲಕ ಮುಖ್ಯಮಂತ್ರಿ,ಉಪಮುಖ್ಯಮಂತ್ರಿಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಸಚಿವರಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರಕಾರ ಇತ್ತೀಚೆಗೆ ಹೊರಡಿಸಿದ ಸುತ್ತೋಲೆಯಲ್ಲಿ ಹುಯಿಲಗೋಳನಾರಾಯಣರಾಯರ ” ಉದಯವಾಗಲಿ
ನಮ್ಮ ಚೆಲುವು ಕನ್ನಡ ನಾಡು”,ಕುವೆಂಪು
ಅವರ ” ಎಲ್ಲಾದರೂ ಇರು,ಎಂತಾದರೂ
ಇರು”,ದ.ರಾ.ಬೇಂದ್ರೆಯವರ ” ಒಂದೇ
ಒಂದೇ ಕರ್ನಾಟಕ ಒಂದೇ”,ಸಿದ್ದಯ್ಯ
ಪುರಾಣಿಕರ “ಹೊತ್ತಿತೊ ಹೊತ್ತಿತು
ಕನ್ನಡದ ದೀಪ” ಹಾಗೂ ಚೆನ್ನವೀರ ಕಣವಿ
ಅವರ “ಹೆಸರಾಯಿತು ಕರ್ನಾಟಕ
ಉಸಿರಾಗಲಿ ಕನ್ನಡ” ಹಾಡುಗಳನ್ನು
ಸೇರಿಸಿದೆ.ಇವುಗಳ ಜೊತೆಗೆ
ಕರ್ಕಿ ಅವರ ಹಚ್ಚೇವು ಕನ್ನಡದ ದೀಪ
ಹಾಡನ್ನೂ ಸಹ ಸೇರಿಸಬೇಕೆಂದು
ಸಾಹಿತಿಗಳು ಹಾಗೂ ಕವಿಗಳು ಆಗ್ರಹಿಸಿ
ಮನವಿ ಸಲ್ಲಿಸಿದ್ದಾರೆ.
ಈ ಮನವಿಗೆ ಹಿರಿಯ ಸಾಹಿತಿ,ಕವಿಸರಜೂ ಕಾಟ್ಕರ್,ಬಿ.ಎಸ್.ಗವಿಮಠಸೇರಿದಂತೆ 15 ಕ್ಕೂ ಅಧಿಕ ಗಣ್ಯರು ಸಹಿ ಹಾಕಿದ್ದಾರೆ. ಇಂದು ಮನವಿ ಸಲ್ಲಿಸುವ
ಸಂದರ್ಭದಲ್ಲಿ ಸ.ರಾ.ಸುಳಕೂಡೆ,
ಪಿ.ಬಿ.ಕೆಂಪನ್ನವರ,ಎಸ್.ಡಿ.ಕರ್ಕಿ,ಬಸವರಾಜ ಗಾರ್ಗಿ ಹಾಗೂಅಶೋಕಚಂದರಗಿ ಉಪಸ್ಥಿತರಿದ್ದರು.