ಬೆಳಗಾವಿ -ನಿಖಿಲ್ ಎಲ್ಲಿದ್ದೀಯಪ್ಪ ಚಿತ್ರದಲ್ಲಿ ನಟನೆ ಮಾಡಲು ನಾನು ರೆಡಿ ಎಂದು ಬೆಳಗಾವಿಯಲ್ಲಿ ಬಿಜೆಪಿ ಮಾಜಿ ಎಂಎಲ್ಸಿ ನಟಿ ತಾರಾ ಹೇಳಿದ್ದಾರೆ
ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ನನಗೆ ಪಾತ್ರ ಚೆನ್ನಾಗಿ ಅನ್ಸದ್ರೆ ಕಥಾಹಂದರ ಇಷ್ಟ ಆದ್ರೆ ಖಂಡಿತವಾಗಿ ನಾನು ಅಭಿನಯಿಸುತ್ತೇನೆ ಎಂದು ತಾರಾ ಹೇಳಿದ್ದಾರೆ
ಚಿತ್ರದ ನಿರ್ದೇಶಕರು ಕಥೆ ಹಂದರ ಹೇಗೆ ಕಟ್ಟಿದ್ದಾರೆ ಎಂಬುದು ಮುಖ್ಯ.ಒಳ್ಳೆಯ ನಿರ್ದೇಶಕ, ಕಥೆ ಮತ್ತು ಸಂಭಾವ್ಯ ಸಿಕ್ಕರೆ ಚಿತ್ರ ಮಾಡ್ತೇನಿ.ಈ ಸಿನೇಮಾ ಮಾಡಬಾರದು ಅಂತೆನಿಲ್ಲ ಒಳ್ಳೆ ಸಿನೇಮಾ ಆಗಿರಬೇಕು.
ನಿಖಿಲ್ ಎಲ್ಲಿದೀಯಪ್ಪ ಎಂಬ ಟೈಟಲ್ ಇದ್ರೂ ತೊಂದರೆ ಇಲ್ಲ.ಚಿತ್ರಕ್ಕೆ ನಿಖಿಲ್ ನಾಯಕ ನಟನಾದರು ನಟನೆ ಮಾಡಲು ಸಿದ್ದ.
ಬೆಳಗಾವಿಯಲ್ಲಿ ಮಾಜಿ ಎಂಎಲ್ಸಿ ನಟಿ ತಾರಾ ಹೇಳಿದ್ದಾರೆ
ಸಿನೇಮಾ ನಟರ ಕುರಿತು ಸಿಎಂ ಹೇಳಿಕೆ ವಿಚಾರ. ಸಿಎಂ ಅವರು ವೈಯಕ್ತಿಕವಾಗಿ ಮಾತನಾಡಬಾರದು. ಮಂಡ್ಯದಲ್ಲಿ ಬಿಜೆಪಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಸಂಪೂರ್ಣ ಬೆಂಬಲ ನೀಡಿದೆ.ರಾಜ್ಯದಲ್ಲಿ ಅಷ್ಟೇ ಅಲ್ಲ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅಲೆ ಇದೆ.ಬಲಿಷ್ಠ ಭಾರತಕ್ಕಾಗಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದುಜನ ಬಯಸಿದ್ದಾರೆ.ಬೆಳಗಾವಿ ಯಲ್ಲೂ ಮೋದಿ ಅಲೆ ಇದ್ದು ಇಲ್ಲಿ ಸುರೇಶ ಅಂಗಡಿ ಅವರ ಗೆಲುವು ಖಚಿತ ಎಂದು ಚಿತ್ರನಟಿ ತಾರಾ ಹೇಳಿದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ