Breaking News

ವ್ಹಾರೆ..ವ್ಹಾ..ಅಭಿಮಾನ ಅಂದ್ರೆ ಹಿಂಗಿರಬೇಕ್ರೀ..

ನಿಪ್ಪಾಣಿ ನಗರಸಭೆ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡ ಕನ್ನಡದ ಅಭಿಮಾನಿ

ಬೆಳಗಾವಿ- ನಿಪ್ಪಾಣಿ ನಗರಸಭೆಯ ಅಧ್ಯಕ್ಷ ವಿಲಾಸ ಗಾಡಿವಡ್ಡರ್ ಅವರ ಸರ್ಕಾರಿ ವಾಹನದ ಮೇಲೆ ಮರಾಠಿ ಫಲಕ ಇರುವದನ್ನು ಗಮನಿಸಿದ ಕನ್ನಡದ ಅಭಿಮಾನಿ ಕಸ್ತೂರಿ ಭಾವಿ ನಿಪ್ಪಾಣಿ ನಗರ ಸಭೆಯ ಅಧ್ಯಕ್ಷರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ
ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ನಗರೋತ್ಥಾನ ಸಭೆಯಲ್ಲಿ ಭಾಗವಹಿಸಲು ಬೆಳಗಾವಿಗೆ ಬಂದ ನಿಪ್ಪಾಣಿ ನಗರ ಸಭೆಯ ಅದ್ಯಕ್ಷರ ಸರ್ಕಾರಿ ವಾಹನದ ಮೇಲೆ ನಿಪ್ಪಾಣಿ ನಗರಸಭೆ ಎಂದು ಮರಾಠಿ ಭಾಷೆಯಲ್ಲಿ ಬರೆಯಲಾಗಿತ್ತು
ಇದನ್ನು ಗಮನಿಸಿದ ಕಸ್ರೂರಿ ಬಾವಿ ಮರಾಠಿ ಫಲಕವನ್ನು ಕಿತ್ತೆಸೆದು ಇಲ್ಲಿಯ ಅನ್ನ ಗಾಳಿ ಸೇವೆಸಿ ಕರ್ನಾಟಕ ಸರ್ಕಾರದ ವಾಹನದ ಮೇಲೆ ಮರಾಠಿ ಫಲಕ ಹಾಕಿದ್ದೇಕೆ ಎಂದು ನಗರಸಭೆಯ ಅದ್ಯಕ್ಷ ವಿಲಾಸ ಗಾಡಿವಡ್ಡರ್ ಅವರನ್ನು ಕಸ್ತೂರಿ ಬಾವಿ ತರಾಟೆಗೆ ತೆಗೆದುಕೊಂಡರು
ಕಸ್ತೂರಿ ಬಾವಿಯ ಕನ್ನಡಾಭಿಮಾನದ ಆಕ್ರೋಶದ ಎದುರು ತೆಪ್ಪಗಾದ ಗಾಡಿವಡ್ಡರ್ ಕನ್ನಡದಲ್ಲಿ ಫಲಕ ಹಾಕುವದಾಗಿ ಹೇಳಿ ಅಲ್ಲಿಂದ ಕಾಲ್ಕಿತ್ತರು
ಕಸ್ತೂರಿ ಭಾವಿ ಅವರ ಕನ್ನಡಾಭಿಮಾನದ ಬಗ್ಗೆ ಇಲ್ಲಿ ನೆರೆದ ಜನ ವ್ಹಾ..ರೆ ವ್ಹಾ ಗಂಡ ಮಗಳ ಎಂದು ಮೆಚ್ವುಗೆ ವ್ಯಕ್ತ ಪಡಿಸಿದ್ರು

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *