ಬೆಳಗಾವಿ- ನಾಡ ನೋಡಬೇಂದ್ರ ಮೈಸೂರು ಹೋಗಬೇಕಪ್ಪ. ಕನ್ನಡದ ಹಬ್ಬ ನೋಡಬೇಕಂದ್ರ ಬೆಳಗಾವಿಗೆ ಬರಲೇಬೆಕಪ್ಪ ಎನ್ನುವ ವೈಭವ ಬೆಳಗಾವಿಯಲ್ಲಿ ನಮಗೆ ನೋಡಲು ಸಿಗುತ್ತದೆ ಬೆಳಗಾವಿಯ ರಾಜ್ಯೋತ್ಸವ ವಿಶೇಷ ಮತ್ತು ಅನೇಕ ಅದ್ಧೂರಿಗಳಿಗೆ ಸಾಕ್ಷಿಯಾಗಿದೆ
ರಾಜ್ಯೋತ್ಸವ ಆಚರಿಸಲು ಕನ್ನಡದ ನೆಲ ಬೆಳಗಾವಿ ಸಜ್ಜಾಗುತ್ತಿದೆ ಜಿಲ್ಲಾಡಳಿತ ನಗರದ ವೃತ್ತಗಳನ್ನು ಅಲಂಕಾರ ಮಾಡುವದರ ಜೊತೆಗೆ ದೊಡ್ಡ ದೊಡ್ಡ ಸ್ವಾಗತ ಕಮಾನುಗಳನ್ನು ಹಾಕುವ ಮೂಲಕ ರಾಜ್ಯೋತ್ಸವಕ್ಕೆ ಬರುವ ಲಕ್ಷಾಂತರ ಕನ್ನಡಿಗರನ್ನು ಹೃದಯತುಂಬಿ ಸ್ವಾಗತಿಸುತ್ತಿದೆ
ಬೆಳಗಾವಿ ಜಿಲ್ಲಾ ಹೊಟೇಲ್ ಮಾಲೀಕರ ಸಂಘ ರಾಜ್ಯೋತ್ಸವದ ದಿನ ಬುಂದಿ ಲಾಡುಗಳನ್ನು ಹಂಚಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು ರಾಜ್ಯೋತ್ಸವದ ದಿನ ಗ್ರಾಹಕರಿಗೆ ಶೇ 20 ರಷ್ಟು ರಿಯಾಯತಿ ನೀಡಲು ಘೋಷಿಸಿದೆ
ಜಿಲ್ಲಾಡಳಿತ ರಾಜ್ಯೋತ್ಸವದ ದಿನ ಸರ್ದಾರ್ ಮೈದಾನದಲ್ಲಿ ಲಕ್ಷಾಂತರ ಕನ್ನಡಿಗರಿಗೆ ಸಿಹಿ ತಿಂಡಿಯ ಜೊತೆ ಉಟದ ವ್ಯೆವಸ್ಥೆ ಮಾಡುತ್ತಿರುವದು ವಿಶೇಷವಾಗಿದೆ
ಕನ್ನಡಪರ ಸಂಘಟನೆಗಳು ನಗರದಲ್ಲಿ ಕನ್ನಡ ಬಾವುಟ ಹಾರಿಸುವದರ ಜೊತೆಗೆ ನಗರವನ್ನು ಕನ್ನಡಮಯ ಮಾಡಲು ಎಲ್ಲ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕನ್ನಡ ಧ್ವಜಗಳನ್ನು ಖರೀಧಿ ಮಾಡಲು ಜನ ಮುಗಿಬಿದ್ದಿದ್ದಾರೆ
ಬೆಳಗಾವಿಯ ನೆಲ ಕನ್ನಡ ಕನ್ನಡ ಎಂದು ಮಂತ್ರ ಜಪಿಸುವ ವಾತಾವರಣ ಗಡಿನಾಡು ಗುಡಿ ಬೆಳಗಾವಿಯಲ್ಲಿ ನಿರ್ಮಾಣವಾಗಿದೆ
Check Also
ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??
ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …