Breaking News

ರಮೇಶ ಜಾರಕಿಹೊಳಿ, ಫಿರೋಜ್ ಸೇಠ ರಾಜಿನಾಮೆಗೆ ಕನ್ನಡ ಸಂಘಟನೆಗಳ ಒತ್ತಾಯ

ರಮೇಶ ಜಾರಕಿಹೊಳಿ ರಾಜಿನಾಮೆಗೆ ಕನ್ನಡ ನಾಯಕರ ಆಗ್ರಹ
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಜಿಲ್ಲಾ ಮಂತ್ರಿಗಳ ನಿರ್ಲಕ್ಷ್ಯದಿಂದ ಕನ್ನಡಿಗರಿಗೆ ಅವಮಾನವಾಗಿದ್ದು ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ರಾಜಿನಾಮೆ ನೀಡಬೇಕೆಂದು ಕನ್ನಡ ಸಂಘಟನೆಗಳ ನಾಯಕರು ಒತ್ತಾಯುಸಿದ್ದಾರೆ
ನಗರದ ಕನ್ನಡ ಸಂಘಟನೆಗಳ ನಾಯಕರು ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು ಮಾಜಿ ಮಹಾಪೌರ ಸಿದ್ಧನಗೌಡ ಪಾಟೀಲ ಮಾತನಾಡಿ ಬೆಳಗಾವಿ ಇತಿಹಾಸದಲ್ಲಿಯೇ ಎಂದು ಕಂಡರಿಯದ ರಾಜಕೀಯ ಕಿತ್ತಾಟಕ್ಜೆ ಕನ್ನಡದ ಹಿತಾಸಕ್ತಿ ಬಲಿಯಾಗಿದೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಶರಕಿಹೊಳಿ ಸ್ವಾರ್ಥ ರಾಜಕಾರಣ ಮಾಡಿದ್ದಾರೆ ಶಾಸಕ ಫಿರೋಜ್ ಸೇಠ ಕೆಲವು ಕನ್ನಡದ ನಗರ ಸೇವಕರನ್ನು ಗೃಹ ಬಂಧನದಲ್ಲಿಟ್ಟು ಕನ್ನಡದ ಗುಂಪನ್ನು ಒಡೆದು ಕನ್ನಡ ನಗರ ಸೇವಕರಿಗೆ ಅವಮಾನ ಮಾಡಿದ್ದು ರಮೇಶ ಜಾರಕಿಹೊಳಿ ಮತ್ತು ಶಾಸಕ ಫಿರೋಜ್ ಸೇಠ ಅವರು ರಾಜಿನಾಮೆ ನೀಡಬೇಕೆಂದು ಸಿದ್ಧನಗೌಡ ಪಾಟೀಲ ಒತ್ತಾಯಿಸಿದರು
ರಾಘವೇಂದ್ರ ಜೋಶಿ ಮಾತನಾಡಿ ಜಾರಕಿಹೊಳಿ ಸಹೋದರರ ರಾಜಕೀಯ ಕಿತ್ತಾಟದಲ್ಲಿ ಕನ್ನಡಿಗರಿಗೆ ಅವಮಾನವಾಗಿದೆ ಇಂತಹ ಅವಮಾನ ಸಹಿಸಲು ಸಾಧ್ಯವಾಗಿಲ್ಲ ಸರ್ಕಾರ ಕೂಡಲೇ ಜಿಲ್ಲಾ ಮಂತ್ರಿ ಹಾಗು ಫಿರೋಜ್ ಸೇಠ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು

ಮುಂದಿನ ಪಾಲಿಕೆ ಚುನಾವಣೆಯಲ್ಲಿ ಎಲ್ಲ ರಾಷ್ಟ್ರೀಯ ಪಕ್ಚಗಳು ಪಕ್ಷ ಆಧಾರಿತ ಚುನಾವಣೆ ನಡೆಸಲಿ ಎಂದು ಒತ್ತಾಯಿಸಿದರು
ಅಶೋಕ ಚಂದರಗಿ,ದೀಪಕ ಗುಡಗನಟ್ಟಿ,ಮೈನೋದ್ದೀನ ಮಕಾನದಾರ ಸಲೀಂ ಖತೀಬ,ಕಸ್ರೂರಿ ಭಾವಿ

Check Also

ರಾತ್ರಿ ಮಠದಲ್ಲಿ ಲೇಡಿ……..ಗ್ರಾಮಸ್ಥರಿಂದ ಮುತ್ತಿಗೆ ಮಠದಿಂದ ಸ್ವಾಮೀಜಿ ಉಚ್ಛಾಟನೆ

ಮೂಡಲಗಿ : ತಾಲೂಕಿನ ಶಿವಾಪೂರ(ಹ) ಗ್ರಾಮದ ಅಡವಿ ಸಿದ್ದೇಶ್ವರ ಮಠದ ಅಡವಿಸಿದ್ದರಾಮ ಸ್ವಾಮೀಜಿಯ ಅಕ್ರಮ ಸಂಭಂದದ ಆರೋಪದ ಹಿನ್ನಲೆ ಇಡೀ …

Leave a Reply

Your email address will not be published. Required fields are marked *