ಬೆಳಗಾವಿ- ಮುಖ್ಯಮಂತ್ರಿ ಸಿದ್ರಾಮಯ್ಯ ಬೆಳಗಾವಿ ಜಿಲ್ಲೆಯ ವಿಭಜನೆಗೆ ಮುನ್ಸೂಚನೆ ನೀಡಿರುವ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲಿಯ ವಿವಿಧ ಕನ್ನಡಪರ ಸಂಘಟನೆಗಳು
ಬೆಳಗಾವಿ ಜಿಲ್ಲಾ ವಿಭಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ
ಬೆಳಗಾವಿಯಲ್ಲಿ ಕನ್ನಡಪರ ಸಂಘಟನೆಗಳಿಂದ ಜಂಟಿ ಸುದ್ದಿಗೋಷ್ಠಿ ನಡೆಯಿತು ಮಾಜೆ ಮೇಯರ್ ಸಿದ್ದನಗೌಡ ಪಾಟೀಲ ಮಾತನಾಡಿ
ಸಿಎಂ ಸಿದ್ದರಾಮಯ್ಯ ಜಿಲ್ಲಾ ವಿಭಜನೆ ಹೇಳಿಕೆಯನ್ನು ಖಂಡಿಸಿದರು ಬೆಳಗಾವಿ, ಗೋಕಾಕ ಮತ್ತು ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗೆ ಹುನ್ನಾರ ನಡೆದಿದ್ದು ಇದು ನಾಡದ್ರೋಹಿ ಎಂಇಎಸಗೆ ವರದಾನವಾಗಲಿದೆ ಜಿಲ್ಲೆ ವಿಭಜಿಸಿದ್ರೆ ಬೆಳಗಾವಿಯಲ್ಲಿ ಎಂಇಎಸ ಪ್ರಭಾವ ಹೊಂದಲಿದೆ ಶಾಸಕರು, ಬೆಳಗಾವಿ ಮಹಾನಗರ ಪಾಲಿಕೆ, ತಾಲೂಕು ಪಂಚಾಯತ, ಜಿಲ್ಲಾ ಪಂಚಾಯತ ಹಾಗೂ ಗ್ರಾಮ ಪಂಚಾಯತನಲ್ಲಿ ಎಂಇಎಸ ಸದಸ್ಯ ಬಲ ಹೆಚ್ಚಾಗಲಿದೆ ಇದು ಬೆಳಗಾವಿ ಗಡಿ ವಿವಾದದಲ್ಲಿ ಕನ್ನಡಿಗರಿಗೆ ಹಿನ್ನಡೆಯಾಗಲಿದೆ ಎಂದು ಸಿದ್ಧನಗೌಡ ಪಾಟೀಲ್ ಕಳವಳ ವ್ಯೆಕ್ತಪಡಿಸಿದರು
ಗಡಿ ವಿಚಾರ ಸುಪ್ರೀಂ ಕೋರ್ಟನಲ್ಲಿ ಇತ್ಯರ್ಥ ಆಗುವವರೆಗೂ ಬೆಳಗಾವಿ ಜಿಲ್ಲಾ ವಿಭಜನೆ ಬೇಡ ಎಂದು ಮಾಜಿ ಮಹಾಪೌರ ಸಿದ್ಧನಗೌಡ ಪಾಟೀಲ ಒತ್ತಾಯಿಸಿದ್ರು ಸುಪ್ರೀಂ ಕೋರ್ಟಿನಲ್ಲಿ ಗಡಿ ವಿವಾದ ಇತ್ಯರ್ಥವಾದ ಬಳಿಕ ಮಾಡಲಿ ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದರು
ನಾಡು ನುಡಿಗೆ ಧಕ್ಕೆ ಆಗದಂತೆ ಸಿಎಂ ಕ್ರಮಕೈಗೊಳ್ಳಬೇಕು. ಸಿಎಂ ಜಿಲ್ಲೆಯ ಎಲ್ಲ ಕನ್ನಡಪರ ಸಂಘಟನೆಗಳೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿ ಎಂದು ಅಶೋಕ ಚಂದರಗಿ ಆಗ್ರಹಪಡಿಸಿದರು
ಕರವೇ ಜಿಲ್ಲಾಧ್ಯಕ್ಷ ಮಹಾದೇವ ತಳವಾರ ದೀಪಕ ಗುಡಗನಟ್ಟಿ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು