Breaking News

ಕನ್ನಡಿಗರ ಮುಖವಾಣಿ ಕನ್ನಡಮ್ಮ ದಿನಪತ್ರಿಕೆಗೆ ಪ್ರಶಸ್ತಿಯ ಗೌರವ

ಬೆಳಗಾವಿ- ಕನ್ನಡಿಗರ ಮುಖವಾಣಿ, ಕನ್ನಡಿಗರ ಹೃದಯದಿಂದ ಹೊರಹೊಮ್ಮಿದ ಜನಮನದ ಧ್ವನಿ, ಬೆಳಗಾವಿಯ ಕನ್ನಡಮ್ಮ ದಿನಪತ್ರಿಕೆಗೆ ನಾಡೋಜ ಪಾಟೀಲ ಪುಟ್ಟಪ್ಪ ಪ್ರಶಸ್ತಿ ಲಭಿಸಿದೆ.

ಬೆಳಗಾವಿಯ ಕನ್ನಡಪರ ಹೋರಾಟದ ಇತಿಹಾಸದ ರೂವಾರಿ ದಿ.ಮಹಾದೇವ ಟೋಪಣ್ಣವರ ಅವರು ಆರಂಭಿಸಿದ ಕನ್ನಡಮ್ಮ ದಿನಪತ್ರಿಕೆ ರಾಜ್ಯಮಟ್ಟದಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.ಪತ್ರಿಕಾರಂಗದ ಮೂಲಕ ಕನ್ನಡದ ಆಂದೋಲನ ಮಾಡಿರುವ ಕನ್ನಡಮ್ಮ ದಿನಪತ್ರಿಕೆ ಕನ್ನಡಿಗರ ಅಭಿಮಾನದ ಪತ್ರಿಕೆಯಾಗಿ ಗೌರವಿಸಲ್ಪಡುತ್ತಿದೆ.

ಪತ್ರಿಕಾ ಲೋಕದ ವಿಶ್ವವಿದ್ಯಾಲಯ ಎಂದೇ ಖ್ಯಾತಿ ಪಡೆದಿರುವ ಕನ್ನಡಮ್ಮ ದಿನಪತ್ರಿಕೆ ಪ್ರದೇಶಿಕ ಪತ್ರಿಕೆಯಾಗಿ ಇವತ್ತಿಗೂ ಹೊರಬರುತ್ತಿದೆ.ಸಾವಿರಾರು ವರದಿಗಾರರನ್ನು ಪತ್ರಿಕಾ ರಂಗದ ದಿಗ್ಗಜರನ್ನು ಈ ನಾಡಿಗೆ ನೀಡಿರುವ ನಮ್ಮೆಲ್ಲರ ಹೆಮ್ಮೆಯ ಮಾತೃಸಂಸ್ಥೆ ಕನ್ನಡಮ್ಮ ದಿನಪತ್ರಿಕೆಗೆ ನಾಡೋಜ ಪಾಟೀಲ ಪುಟ್ಟಪ್ಪ ಪ್ರಶಸ್ತಿ ಲಭಿಸಿರುವದು ಪ್ರತಿಯೊಬ್ಬ ಕನ್ನಡಿಗ ಅಭಿಮಾನ ಪಡುವ ಸಂಗತಿಯಾಗಿದೆ.

ಮಹಾದೇವ ಟೋಪಣ್ಣವರು ಅಗಲಿದ ಬಳಿಕ ನಾಡೋಜ ಪಾಟೀಲ ಪುಟ್ಟಪ್ಪನವರು ಬೆಳಗಾವಿಯ ಗಣಪತಿ ಬೀದಿಯಲ್ಲಿದ್ದ ಕನ್ನಡಮ್ಮ ದಿನಪತ್ರಿಕೆಯ ಕಚೇರಿಗೆ ಬಂದಾಗ ನಾನು ಪತ್ರಿಕಾ ರಂಗಕ್ಕೆ ಕಾಲಿಟ್ಟ ಸಮಯ ಅದು, ಪಾಟೀಲ ಪುಟ್ಟಪ್ಪನವರಿಗೆ ಕನ್ನಡಮ್ಮ ದಿನಪತ್ರಿಕೆಯ ಬಗ್ಗೆ ಅಪಾರ ಅಭಿಮಾನವಿತ್ತು ಈಗ ಅವರ ಹೆಸರಿನಲ್ಲಿ ಧಾರವಾಡದ ವಿದ್ಯಾವರ್ದಕ ಸಂಘ ಕೊಡುವ . ಪಾಟೀಲ ಪ್ರಶಸ್ತಿ ಲಭಿಸಿರುವದು ಸಂತಸದ ಸಂಗತಿಯಾಗಿದೆ.

ನಾಳೆ ಶನಿವಾರ ದಿನಾಂಕ,20 ರಂದು ಧಾರವಾಡದ ಕರ್ನಾಟಕದ ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ಸಂಜೆ 5-30 ಗಂಟೆಗೆ ನಡೆಯಲಿದೆ.ಕನ್ನಡಮ್ಮ ದಿನಪತ್ರಿಕೆಯ ಸಂಪಾದಕರಾದ ರಾಜೀವ ಟೋಪಣ್ಣವರ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ, ಅರವಿಂದ ಬೆಲ್ಲದ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *