ಬೆಳಗಾವಿ-ಗಡಿ ಜಿಲ್ಲೆ ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ ತೀವ್ರಗೊಂಡಿದೆ. ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಕರಾಳ ದಿನ ಆಚರಣೆ ಮಾಡಿ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಇಂದು ದುಷ್ಕರ್ಮಿಗಳು ಕನ್ನಡ ಶಾಲೆಯೊಂದಕ್ಕೆ ದ್ವಂಸಗೊಳಿಸಿದ್ದಾರೆ. ಕನ್ನಡ ಶಾಲೆ ಧ್ವಂಸ ಪ್ರಕರಣ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಹಿಗೇ ಸುಟ್ಟು ಭಸ್ಮವಾದ ದಾಖಲೆಗಳು, ಚೆಪ್ಪಾಪಿಲ್ಲಿಯಾದ ಶಾಲೆಯ ಡೆಸ್ಕಗಳು. ಇದು ಬೆಳಗಾವಿ ನಗರದ ಶಹಾಪುರದ ಭಾರತ ನಗರದ ಕನ್ನಡ ಶಾಲೆ ನಂ.೧೭. ನಿನ್ನೆ ತಡರಾತ್ರಿ ದುಷ್ಕರ್ಮಿಗಳು ದುಷ್ಕೃತ್ಯ ಎಸಗಿದ್ದಾರೆ. ಶಾಲೆಗೆ ನುಗ್ಗಿದ ಕಿಡಿಗೇಡಿಗಳು ಶಾಲೆಯ ಡೆಸ್ಕ್, ವಿದ್ಯುತ್ ಬಲ್ಬ, ನೀರಿನ ನಲ್ಲಿ ಒಡೆದು ಹಾಕಿದ್ದಾರೆ.ಅಷ್ಟೇ ಅಲ್ಲ ಶಾಲೆಯಲ್ಲಿ ಇಟ್ಟಿದ್ದ ಮಕ್ಕಳ ಹಾಜರಾತಿ ಪುಸ್ತಕ, ಮಕ್ಕಳ ಆಧಾರ ಕಾರ್ಡ್, ದೇವರ ಫೋಟೋ, ಮಕ್ಕಳ ಕಲಿಗೆ ಸಾಮಗ್ರಿಗೆ ಸೇರಿ ವಿವಿಧ ದಾಖಲೆಳನ್ನು ಸುಟ್ಟಿದ್ದಾರೆ. ಇದೇ ಕೊಠಡಿಯಲ್ಲಿ ಮದ್ಯದ ಬಾಟಲಿ, ಸಿಗರೇಟ್ ನ ತುಂಡುಗಳು ಪತ್ತೆಯಾಗಿವೆ. ಇಂದು ಬೆಳಗ್ಗೆ ಶಾಲೆಗೆ ಬಂದ ಶಿಕ್ಷಕರು ಈ ದುಷ್ಕೃತ್ಯ ನೋಡಿ ಗಾಬರಿಯಾಗಿದ್ದಾರೆ. ತಕ್ಷಣ ಎಸಿಎಂಸಿ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ನಂತರ ಈ ಬಗ್ಗೆ ಶಹಾಪುರ ಪೊಲೀಸ ಠಾಣೆಗೆ ದೂರು ನೀಡಲಾಗಿದೆ. ಶಹಾಪುರ ಬಡಾವಣೆಯಲ್ಲಿ ಅತಿದೊಡ್ಡ ಕನ್ನಡ ಶಾಲೆ ಇದಾಗಿದೆ. ಇಲ್ಲಿ ೬೦೦ ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಾರೆ. ಶಾಲೆಯ ಮೇಲಿನ ದೌರ್ಜನ್ಯವನ್ನು ಸ್ಥಳೀಯ ಎಸ್ ಡಿ ಎಂಸಿ ಸದಸ್ಯರು ಖಂಡಿಸಿದ್ದಾರೆ. ತಕ್ಷಣ ಆರೋಪಿಗಳನ್ನು ಬಂಧಿಸಿ ಶಿಕ್ಷೆ ಕೊಡಸಬೇಕು ಎಂದು ಆಗ್ರಹಿಸಿದ್ದಾರೆ.
ಬೈಟ್ ಲೋಹಿತ್, ಎಸ್ ಡಿ ಎಂ ಸಿ ಸದಸ್ಯ
ಇನ್ನೂ ಈ ಕನ್ನಡ ಶಾಲೆಯಲ್ಲಿ ಈ ರೀತಿಯ ಘಟನೆ ಇದೇ ಮೊದಲಲ್ಲ. ಕಳೆದ ಒಂದು ವರ್ಷದ ಅವಧಿಯಲ್ಲಿ ಹತ್ತಕ್ಕೂ ಹೆಚ್ಚು ಭಾರಿ ಶಾಲೆ ಯನ್ನು ಧ್ವಸಂಗೊಳಿಸುವ ಯತ್ನ ನಡೆದಿದೆ. ಇನ್ನೂ ಶಾಲೆಗೆ ಸಿಸಿಟಿವಿ, ಕಾಂಪೌಂಡ್ ಅಳವಡಿಸುವಂತೆ ಸ್ಥಳೀಯ ಶಾಸಕ, ಪಾಲಿಕೆ ಸದಸ್ಯ ಸಂಭಾಜೀ ಪಾಟೀಲ್ ಮನವಿ ಮಾಡಿದ್ರು ಯಾವುದೇ ಪ್ರಯೋಜನವಾಗಿಲ್ಲ. ಎಂಇಎಸ್ ಶಾಸಕ ಸಂಭಾಜೀ ಪಾಟೀಲ್ ಕನ್ನಡ ಶಾಲೆಯ ದುಸ್ಥಿತಿ ಬಗ್ಗೆ ತಲೆಗೆಡಿಸಿಕೊಂಡಿಲ್ಲ.
ಇನ್ನೂ ಕನ್ನಡ ಶಾಲೆಯ ಪಕ್ಕದಲ್ಲಿಯೇ ಶಹಾಪುರ ಪೊಲೀಸ ಠಾಣೆ ಇದೆ. ಇಷ್ಟಾದ್ರು ಶಾಲೆಯಲ್ಲಿ ನಡೆದ ಘಟನೆ ಬಗ್ಗೆ ಪೊಲೀಸರು ಯಾಕೆ ನಿರ್ಲಕ್ಷ್ಯ ವಹಿಸಿದ್ರು ಎಂಬುದು ಪ್ರಶ್ನೆಯಾಗಿದೆ. ಬೆಳಗಾವಿಯಲ್ಲಿ ಕನ್ನಡ ಉಳಿಸಿ, ಬೆಳಸಲು ಸರ್ಕಾರ ಅನೇಕ ರೀತಿಯ ಪ್ರಯತ್ನ ಮಾಡುತ್ತದೆ. ಆದರೇ ವಿದ್ಯಾ ಕೇಂದ್ರದ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಇನ್ನಾದ್ರು ಸರ್ಕಾರ ಎಚ್ಚೆತ್ತು ಈ ಶಾಲೆಗೆ ಸೂಕ್ತ ರಕ್ಷಣೆ ನೀಡಬೇಕಾದ ಅವಶ್ಯಕತೆ ಇದೆ. ತಕ್ಷಣ ಕಿಡಿಗೇಡಿಗಳನ್ನು ಬಂಧಿಸಿ ಶಿಕ್ಷೆ ಕೊಡಬೇಕಿದೆ.