ಬೆಳಗಾವಿ- ಹಲವಾರು ವರ್ಷಗಳ ಬೆಳಗಾವಿ ವಕೀಲರ ಹೋರಾಟದ ಫಲ ರಾಜ್ಯ ಸರ್ಕಾರದ ಇಚ್ಛಾಶಕ್ತಿಯಿಂದಾಗಿ ಇಂದು ಬೆಳಗಾವಿಯಲ್ಲಿ ಕೆಎಟಿ ಪೀಠ ಕರ್ನಾಟಕ ಅಡಳಿತಾತ್ಮಕ ನ್ಯಾಯಮಂಡಳಿ ಉದ್ಘಾಟನೆಯಾಯಿತು
ಬೆಳಗಾವಿಯ ಭೀಮ್ಸ ಸರ್ಕಾರಿ ಮೆಡಿಕಲ್ ಕಾಲೇಜು ಎದುರಿನ ಬಾಡಿಗೆ ಕಟ್ಟಡದಲ್ಲಿ ಕೆಎಟಿ ಪೀಠವನ್ನು ಸಚಿವ ಕೃಷ್ಣ ಬೈರೇಗೌಡ ಇಂದು ಉದ್ಘಾಟಿಸಿ ಮಾತನಾಡಿದರು ಕಲ್ಬುರ್ಗಿ ಯಲ್ಲೂ ಕೆಎಟಿ ಪೀಠ ಸ್ಥಾಪನೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಪೀಠ ಆರಂಭಿಸಲು ಐದು ಜನ ಸದಸ್ಯರ ಕೊರತೆ ಇದೆ ಸದಸ್ಯರ ನೇಮಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಆದಷ್ಟು ಬೇಗನೆ ಕಲ್ಬುರ್ಗಿ ಯಲ್ಲೂ ಕೆಎಟಿ ಪೀಠ ಆರಂಭವಾಗಲಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಭರವಸೆ ನೀಡಿದರು
ಶಾಸಕ ಅನೀಲ ಬೆನಕೆ ಮಾತನಾಡಿ ಬೆಳಗಾವಿಯಲ್ಲಿ ಕೆಎಟಿ ಪೀಠ ಸ್ಥಾಪನೆಗೆ ಬೆಳಗಾವಿಯ ನ್ಯಾಯವಾದಿಗಳು ನಿರಂತರವಾಗಿ ಹೋರಾಟ ಮಾಡಿದ ಫಲವಾಗಿ ಇಂದು ಬೆಳಗಾವಿಯಲ್ಲಿ ಕೆಎಟಿ ಫೀಠ ಉದ್ಘಾಟನೆಯಾಗಿದೆ ಬೆಳಗಾವಿ ವಕೀಲರು ಹೋರಾಟ ಮಾಡಿದ ಸಂಧರ್ಭದಲ್ಲಿ ಪೋಲೀಸರು ವಕೀಲರ ಮೇಲೆ ಕೇಸ್ ಗಳನ್ನು ದಾಖಲು ಮಾಡಿದ್ದಾರೆ ಸರ್ಕಾರ ಕೇಸ್ ಗಳನ್ನು ತಕ್ಷಣ ವಾಪಸ್ ಪಡೆದು ಬೆಳಗಾವಿ ಕೆಎಟಿ ಪೀಠಕ್ಕೆ ಸ್ವಂತ ಕಟ್ಟಡಕ್ಕೆ ಒದಗಿಸಿ ಕೊಡಬೇಕು ಎಂದು ಅನೀಲ ಬೆನಕೆ ಸಚಿವರಲ್ಲಿ ಮನವಿ ಮಾಡಿಕೊಂಡರು