ಬೆಳಗಾವಿ-ರಾಜ್ಯ ರಾಜಕಾರಣದಲ್ಲಿ ಬೆಳಗಾವಿ ರಾಜಕಾರಣ ಮತ್ತೆ ರಾರಾಜಿಸುತ್ತಿದೆ.ಬೆಳಗಾವಿ ಪಾಲಿಟಿಕ್ಸ್ ಬೆಂಗಳೂರಿನಲ್ಲಿ ಸ್ಪೋಟಗೊಂಡು ರಾಜ್ಯ ಸರ್ಕಾರವನ್ನೇ ನಡುಗಿಸುವ ಎಲ್ಲ ಲಕ್ಷಣಗಳು ಕಂಡು ಬಂದಿವೆ .
ಬೆಳಗಾವಿಯ ಹಿರಿಯ ಬಿಜೆಪಿ ನಾಯಕ ಉಮೇಶ ಕತ್ತಿ,ಸಹೋದರ ರಮೇಶ್ ಕತ್ತಿಗೆ ರಾಜ್ಯಸಭಾ ಸ್ಥಾನ ಕೊಡಲೇ ಬೇಕು ಎಂದು ಸಿಎಂ ಯಡಿಯೂರಪ್ಪ ಅವರ ಬಳಿ ಪಟ್ಟು ಹಿಡಿಸಿದ್ದಾರೆ.ಈ ಕುರಿತು ಒತ್ತಡ ಹೇರಲು ಹಲವಾರು ಬಾರಿ ಉತ್ತರ ಕರ್ನಾಟಕ ಭಾಗದ ಸಭೆಗಳನ್ನು ಬೆಂಗಳೂರಿನ ನಿವಾಸದಲ್ಲಿ ಕರೆದು ಮುಂದಿನ ತಂತ್ರ ರೂಪಿಸಿದ್ದಾರೆ.
ಕತ್ತಿ ಸಹೋದರರ ಸವಾಲ್, ಉತ್ತರ ಕರ್ನಾಟಕ ಭಾಗದ ಶಾಸಕರು ಕತ್ತಿ ಸಹೋದರರ ಮನೆಯಲ್ಲಿ ನಡೆಸಿದ ಸರಣಿ ಸಭೆಗಳು,ಇಂದು ರಾಜ್ಯ ಸರ್ಕಾರವನ್ನೇ ಅಲ್ಲಾಡಿಸುವ ಹಂತಕ್ಕೆ ತಲುಪಿವೆ.
ಬೆಳಗಾವಿ ರಾಜ್ಯ ಸಭಾ ಸದಸ್ಯ ಪ್ರಭಾಕರ ಕೋರೆ ಅವರ ಅವಧಿ ಪೂರ್ಣಗೊಳ್ಳಲಿದೆ.ರಾಜ್ಯಸಭಾ ಸ್ಥಾನಕ್ಕೆ ರಮೇಶ್ ಕತ್ತಿ ಅವರನ್ನೇ ನೇಮಕ ಮಾಡಬೇಕು ಎಂದು ಉಮೇಶ್ ಕತ್ತಿ ಪಟ್ಟು ಹಿಡಿದಿದ್ದಾರೆ.ಈ ಪಟ್ಟು,ರಾಜ್ಯ ರಾಜಕಾರಣದಲ್ಲಿ ಯಡವಟ್ಟು ಸೃಷ್ಟಿ ಮಾಡುವದು ಖಾತ್ರಿಯಾಗಿದೆ.
ಉತ್ತರ ಕರ್ನಾಟಕ ಭಾಗದ ಶಾಸಕರು ಉಮೇಶ್ ಕತ್ತಿ ಅವರ ಮನೆಯಲ್ಲಿ ಸರಣಿ ಸಭೆಗಳನ್ನು ನಡೆಸಿರುವ ವಿಷಯ ನಿನ್ನೆ ರಾತ್ರಿ ಬಹಿರಂಗವಾಗಿದೆ.ಇಂದು ಬೆಳಗಿನ ಜಾವದಿಂದ ಇದೇ ವಿಷಯ ದೃಶ್ಯ ಮಾದ್ಯಮಗಳಲ್ಲಿ ಪ್ರಸಾರಗೊಳ್ಳುತ್ತಿದೆ.
ಉಮೇಶ್ ಕತ್ತಿ ಅವರಿಗೆ ಮಂತ್ರಿ ಸ್ಥಾನ ಕೊಡಬೇಕು,ರಮೇಶ್ ಕತ್ತಿ ಅವರಿಗೆ ರಾಜ್ಯ ಸಭಾ ಸ್ಥಾನ ಕೊಡಬೇಕು ಎನ್ನುವ ಬೇಡಿಕೆಗೆ ಈಗ ಹೊಸ ಆಯಾಮ ಸಿಕ್ಕಿದೆ.ಉತ್ತರ ಕರ್ನಾಟಕ ಭಾಗದ ಶಾಸಕರು ಕತ್ತಿ ಸಹೋದರರ ಬೆಂಬಲಕ್ಕೆ ನಿಂತಿದ್ದಾರೆ. ಇದೇ ಅವಕಾಶ ಬಳಸಿಕೊಂಡು,ಸಿಎಂ ಯಡಿಯೂರಪ್ಪ ಅವರನ್ನು ಬದಲಾಯಿಸಿ,ಪ್ರಲ್ಹಾದ್ ಜೋಶಿ ಅವರಿಗೆ ಸಿಎಂ ಮಾಡುವ,ಪ್ರಯತ್ನಗಳು ನಡೆದಿವೆ,ಎನ್ನುವ ಮಾತುಗಳು ಕೇಳಿ ಬರುತ್ತಿವೆ.