ಬೆಳಗಾವಿ- ಬೆಳಗಾವಿ ಅಧಿವೇಶನ ದಉಭಯ ಸಧನಗಳಲ್ಲಿ ಅಂತಹದ್ದೇನೂ ಘನಂದಾರಿ ಚರ್ಚೆಗಳು ನಡೆಯಲಿಲ್ಲ ಆದರೆ ಸದನದ ಹೊರಗೆ ವಿಧಾನಸಭೆಯ ಕಾರ್ಯದರ್ಶಿ ಕೆಸಿ ಮೂರ್ತಿ ಮಹಿಳಾ ಸಿಬ್ಬಂದಿ ಯೊಬ್ಬರನ್ನು ಗೋವಾ ಬೀಚ್ ಗೆ ಕರೆದ ಸುದ್ಧಿ ವಿಧಾನಸಬೆಯ ಮೊಗಸಾಲೆಯಲ್ಲಿ ಚರ್ಚೆಗೆ ಗ್ರಾಸವಾಯಿತು
ಬೆಳಗಾವಿಯಿಂದ ಜಸ್ಟ್ ಒಂದು ಗಂಟೆಯ ಅವಧಿ ಪಯಣಿಸಿದ್ರೆ ರಸಿಕರ ತಾಣ ಗೋವಾ ಸಿಗುತ್ತೆ. ಬೆಳಗಾವಿ ಅಧಿವೇಶನದಲ್ಲಿ ಶುಕ್ರವಾರ ಸಂಜೆಯಿಂದ ರವಿವಾರ ಸಂಜೆಯವರೆಗೆ ಬಹುತೇಕ ವಿಧಾನಸೌಧವೇ ಗೋವಾಗೆ ಶಿಫ್ಟ್ ಆಗಿರುತ್ತದೆ. ವಿಧಾನಸಭೆಯ ಪ್ರಮುಖ ಅಧಿಕಾರಿಯೊಬ್ಬರಿಗೆ ಈ ಗೋವಾ ಆಸೆಯೇ ಮುಳುವಾಗಿದೆ.
ರಾಜ್ಯದ ಆಡಳಿತ ಕೇಂದ್ರ ವಿಧಾನಸೌಧದಲ್ಲೇ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣವೊಂದು ಬಯಲಾಗಿದೆ. ಈ ಬಗ್ಗೆ ಮಹಿಳಾ ದೌರ್ಜನ್ಯ ತಡೆ ಸಮಿತಿಗೆ ದೂರು ನೀಡಿದ ಮಹಿಳೆ ಅಧಿಕಾರಿ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.
ವಿಧಾನಸಭೆಯ ಕಾರ್ಯದರ್ಶಿ ಮೂರ್ತಿ ಮಹಿಳಾ ಅಧಿಕಾರಿಯನ್ನು ಕರೆದು ಲೈಂಗಿಕ ದೌರ್ಜನ್ಯ ನೀಡಿದ್ದಾರೆ ಎಂದು ಮಹಿಳಾ ಅಧಿಕಾರಿ ದೂರು ನೀಡಿದ್ದಾರೆ.
ಕೆ ಸಿ ಮೂರ್ತಿ ಮಹಿಳೆಗೆ ಹೇಳಿದ್ದೇನು ಗೊತ್ತಾ? ದೂರಿನಲ್ಲಿ ಅಡಕವಾಗಿರುವ ಅಂಶಗಳನ್ನು ಒನ್ ಬೈ ಒನ್ ಓದಿ
1. ನಿನ್ನನ್ನು ಎಲ್ಲರಿಗಿಂತ ಜಾಸ್ತಿ ಇಷ್ಟಪಡುತ್ತೇನೆ
2. ಬೆಳಗಾವಿಗೆ ಹೋಗಿ ನಂತರ ಗೋವಾಗೆ ಹೋಗಿ ಮರಳಿನಲ್ಲಿ ಉರುಳಾಡೋಣ
3.ತಲೆಗೆ ಹೇರ್ ಡೈ ಮಾಡ್ಕೋ
4.ಸ್ಮಾರ್ಟ್ ಆಗು
5.ನನಗೆ ಎನರ್ಜಿ ಬರಬೇಕು
6.ನೀನು ಎರಡನೇ ಮದುವೆ ಯಾಕೆ ಮಾಡಿಕೊಂಡೆ
7.ನಾನೇ ನಿನ್ನನ್ನು ಹಾರಿಸಿಕೊಂಡು ಹೋಗುತ್ತಿದ್ದೆ
ಹೀಗೆ ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ವಿಧಾನಸಭೆ ಕಾರ್ಯದರ್ಶಿ ಮೂರ್ತಿ ಈ ಕುರಿತು ಸ್ಪಷ್ಠನೆ ನೀಡಿದ್ದು ಹೀಗೆ
ನಾನು ದಲಿತ ಅಧಿಕಾರಿ. ಸಮಾಜದಲ್ಲಿ ಇರೋ ಜಾತೀಯ ವ್ಯವಸ್ಥೆ ನನ್ನನ್ನು ಟಾರ್ಗೆಟ್ ಮಾಡುತ್ತಿದೆ. ಕೆಲವರ ವಿರುದ್ಧ ನಾನು ಕ್ರಮಕೈಗೊಂಡಿದ್ದೇನೆ. ಈ ಮಹಿಳೆಗೆ ತಾಂತ್ರಿಕ ಕೆಲಸ ಬರುವುದಿಲ್ಲ. ಕೆಲವರು ನನ್ನ ವಿರುದ್ಧ ಎತ್ತಿ ಕಟ್ಟಿದ್ದಾರೆ. ಇದು ಸುಳ್ಳು ದೂರು. ನನಗೆ ಇನ್ನೂ ಹತ್ತು ವರ್ಷ ಸರ್ವಿಸ್ ಇರೋದ್ರಿಂದ ಈ ಹುದ್ದೆಯಲ್ಲಿ ಇರೋದನ್ನು ಹಲವರು ಸಹಿಸ್ತಾ ಇಲ್ಲ. 500 ಮಹಿಳೆಯರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಂದೆಲ್ಲಾ ಯಾವ ದೂರೂ ಇಲ್ಲ. ನಾಲ್ಕು ಜನ ಮಹಿಳೆಯರು ನನ್ನ ವಿರುದ್ದ ಷಡ್ಯಂತ್ರದ ಭಾಗವಾಗಿದ್ದಾರೆ ಎಂದು ಮೂರ್ತಿ ಆರೋಪಿಸಿದ್ದಾರೆ