ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಭೀಕರ ಬರಗಾಲವಿದ್ದು ಜಿಲ್ಲೆಯಲ್ಲಿ ನಡೆಯುತ್ತಿರುವ ಬಹು ಗ್ರಾಮಗಳ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನದ ಕುರಿತು ಶಾಸಕರು ಅಧಿಕಾರಿಗಳಿಗೆ ನೀರು ಕುಡಿಸಿದರು
ಸಂಸದ ಪ್ರಕಾಶ ಹುಕ್ಕೇರಿ ಅವರು ಚಿಕ್ಕೋಡಿ ತಾಲೂಕಿನಲ್ಲಿ ನಡೆಯುತ್ತರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ವಿಳಂಬ ನೀತಿಯ ಬಗ್ಗೆ ಅಸಮಾಧಾನ ವ್ಯೆಕ್ತಪಡಿಸಿದರು ಆರು ತಿಂಗಳ ಹಿಂದೆ ಮುಖ್ಯಮಂತ್ರಿ ಗಳು ಸುವರ್ಣ ವಿಧಾನ ಸೌಧದಲ್ಲಿ ಸಭೆ ನಡೆಸಿದಾಗ ತ್ವರಿತಗತಿಯಲ್ಲಿ ಕಾಮಗಾರಿ ಮಾಡುತ್ತೇವೆ ಎಂದು ಹೇಳಿದ್ದೀರಿ ಇನ್ನೂ ಏಕೆ,? ಪೂರ್ಣಗೊಂಡಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು
ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಮಾತನಾಡಿ ನಾಗರ ಮುನ್ನೋಳಿ ಗ್ರಾಮದ ನೀರಿನ ಸಮಸ್ಯೆ ಬಗೆಹರಿಸಲು ವಿಶೇಷ ಅನುದಾನ ನೀಡಿ ಎಂದು ಜಿಲ್ಲಾ ಮಂತ್ರಿಗಳಿಗೆ ಮನವಿ ಮಾಡಿಕೊಂಡಾಗ ಅಧಿಕಾರಿಗಳು ನಾಗರ ಮುನ್ನೋಳಿ ಗ್ರಾಮದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸುತ್ತೇವೆ ಎಂದು ಹೇಳಿದಾಗ ಸಂಸದ ಪ್ರಕಾಶ ಹುಕ್ಕೇರಿ ಮದ್ಯಪ್ರವೇಶಿಸಿ ಎಲ್ರೀ..ದುಡ್ಡೇಲ್ಲಿದೆ..? ಸುಮ್ಮನೇ ಏನಾದ್ರೂ ಸುಳ್ಳು ಹೇಳ ಬೇಡಿ ಎಂದು ಅಧಿಕಾರಗಳನ್ನು ತರಾಟೆಗೆ ತೆಗೆದುಕೊಂಡರು
ಮಾಜಿ ಸಚಿವ ಲಕ್ಷ್ಮಣ ಸವದಿ ಮಾತನಾಡಿ ಜಿಲ್ಲೆಯ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳು ಹಳ್ಳ ಹಿಡಿದಿವೆ,ಇವುಗಳ ನಿರ್ವಹಣೆ ಮಾಡಲು ಅಧಿಕಾರಿಗಳಿಂದ ಸಾಧ್ಯವಾಗುತ್ತಿಲ್ಲ ಮಲ್ಟೀ ವಿಲೇಜ್ ಸ್ಕೀಮ ನಿರ್ವಹಣೆಗೆ ಯಾರೊಬ್ಬರು ಟೆಂಡರ್ ಹಾಕುತ್ತಿಲ್ಲ ಇವುಗಳ ಪರಿಸ್ಥಿತಿ ಏನಾಗಿದೆ ಎಂದು ಅಧಿಕಾರಿ ಮಹಾ ಪ್ರಭುಗಳು ನೋಡುತ್ತಿಲ್ಲ ಇವರು ಕಚೇರಿ ಬಿಟ್ಟು ಹೊರಗೆ ಬರುವದಿಲ್ಲ ಮಲ್ಟೀ ವಿಲೇಜ್ ಸ್ಕೀಮಗಳ ಪರಿಸ್ಥಿತಿ ಏನಾಗಿದೆ ಎಂದು ನೋಡಲು ಮಂತ್ರಿಗಳು ಹೋಗಬೇಕಾ.? ಶಾಸಕರು ಹೋಗಬೇಕಾ.? ನೀವು ಹೋದರೆ ಟೆರರಿಸ್ಟಗಳು ನಿಮಗೆ ಅಟ್ಯಾಕ್ ಮಾಡ್ತಾರಾ..? ಎಂದು ಅಧಿಕಾರಿಗಳನ್ನು ಲಕ್ಷ್ಮಣ ಸವದಿ ತರಾಟೆಗೆ ತೆಗೆದುಕೊಂಡರು
ಕೆಡಿಪಿ ಸಭೆಯಲ್ಲಿ ಶಾಸಕರು ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಅಧಿಕಾರಿಗಳಿಗೆ ನೀರು ಕುಡಿಸಿದರು