ಕೆಡಿಪಿ ಸಭೆಯಲ್ಲಿ ಗಡಿ..ಬಿಡಿ.ಎಂಈಎಸ್ ಶಾಸಕನ ನೀರಿಳಿಸಿದ ಲಕ್ಷ್ಮಣ ಸವದಿ
ಬೆಳಗಾವಿ- ಬೆಳಗಾವಿಯ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನ ಕುರಿತು ಎಂಈಎಸ್ ಶಾಸಕ ಅರವಿಂದ ಪಾಟೀಲ ಚರ್ಚೆ ಮಾಡುತ್ತಿರುವಾಗ ಶಾಸಕ ಲಕ್ಷ್ಮಣ ಸವದಿ ಎಂಈಎಸ್ ಶಾಸಕನ ಮಜುಗರಕ್ಕೀಡು ಮಾಡಿದ ಪ್ರಸಂಗ ನಡೆಯಿತು
ಅರವಿಂದ ಪಾಟೀಲ ಖಾನಾಪೂರ ತಾಲೂಕಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಆಗಬೇಕು ಎಂದು ಒತ್ತಾಯ ಮಾಡಿದಾಗ ಮದ್ಯಪ್ರವೇಶಿಸಿದ ಶಾಸಕ ಲಕ್ಷ್ಮಣ ಸವದಿ ಏನ್ರೀ ಅರವಿಂದ ಖಾನಾಪೂರ ಮಹಾರಾಷ್ಟ್ರಕ್ಕೆ ಹೋಗಬೇಕು ಅಂತ ಹೋರಾಟ ಮಾಡ್ತೀರಾ ಅಲ್ಲಿ ಕರ್ನಾಟಕ ಸರ್ಕಾರ ಯ್ಯಾಕೆ ಯೋಜನೆ ಮಾಡಬೇಕು ಮಹಾರಾಷ್ಟ್ರ ಸರ್ಕಾರದಿಂದ ಯೋಜನೆ ಮಾಡಿಸಿಕೊಳ್ಳಿ ಖಾನಾಪೂರ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಹೇಳಿದ್ರೆ ಮಾತ್ರ ಅಲ್ಲಿ ಯೋಜನೆ ರೂಪಿಸಿ ಎಂದು ಲಕ್ಷ್ಮಣ ಸವದಿ ಎಂಈಎಸ್ ಶಾಸಕನ ಕಾಲೆಳೆದರು
ಇದಕ್ಕೆ ಧ್ವನಿಗೂಡಿಸಿದ ಜಿಲ್ಲಾ ಮಂತ್ರಿ ರಮೇಶ ಜಾರಕಿಹೊಳಿ ಖಾನಾಪೂರ ಕರ್ನಾಟಕದ ಅವಿಭಾಜ್ಯ ಅಂಗ ಇದರಲ್ಲಿ ಎರಡು ಮಾತಿಲ್ಲ ಮಹಾಜನ ವರದಿ ಪ್ರಕಾರ ಖಾನಾಪೂರ ಮಹಾರಾಷ್ಟ್ರ ರಾಜ್ಯಕ್ಕೆ ಹೋಗುತ್ತದೆ ಆದ್ರೆ ವರದಿಯನ್ನು ಮಹಾರಾಷ್ಟ್ರ ರಾಜ್ಯದವರು ಒಪ್ಪುತ್ತಿಲ್ಲಿ ಹೀಗಾಗಿ ಖಾನಾಪೂರ ಮಹಾರಾಷ್ಟ್ರಕ್ಕೆ ಹೋಗುತ್ತಿಲ್ಲ ಎಂದು ರಮೇಶ ಜಾರಕಿಹೊಳಿ ಚರ್ಚೆಗೆ ತೆರೆ ಎಳೆದರು