ಬೆಳಗಾವಿ-ಇಂದು ಸಂಜೆ ಹೊತ್ತು ಗುಡುಗು ಮಿಂಚಿನ ಮಳೆ ಸುರಿಯುತ್ತಿರುವಾಗ ಸಿಡಿಲು ಬಡಿದು ಓರ್ವನು ಸಾವನ್ನೊಪ್ಪಿದ ಘಟನೆ ಖಾನಾಪೂರ ತಾಲ್ಲೂಕಿನ ನೀಡಗಲ್ ಗ್ರಾಮದಲ್ಲಿ ನಡೆದಿದೆ.
ಜೋಯಿಡಾ ಗ್ರಾಮದ 20 ವರ್ಷದ ಗುರುನಾಥ್ ನಾರ್ವೇಕರ್ ಇಂದು ಸಂಜೆ ಸಿಡಿಲು ಬಡಿದು ಮೃತಪಟ್ಟಿದ್ದಾನೆ ಈತ ಮೂಲತಹ ಜೋಯಿಡಾ ಗ್ರಾಮದವನಾಗಿದ್ದು, ಕುಟುಂಬ ಸಮೇತ ಖಾನಾಪೂರ ತಾಲ್ಲೂಕಿನ ನೀಡಗಲ್ ಇಟ್ಟಂಗಿ ತಯಾರಿಕಾ ಘಟಕದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ
ಇಂದು ಸಂಜೆ ಮಳೆ ಶುರುವಾದ ಸಂಧರ್ಭದಲ್ಲಿ ಇಟ್ಟಂಗಿ ರಾಶಿಯ ಮೇಲೆ ಪ್ಲಾಸ್ಟಿಕ್ ಹೊದಿಸಲು ಹೋದ ಸಂಧರ್ಭದಲ್ಲಿ ಸಿಡಿಲು ಬಡಿದು ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಖಾನಾಪೂರ ಪೋಲೀಸರು ದೌಡಾಯಿಸಿದ್ದು ಪರಶೀಲನೆ ನಡೆಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ