ಬೆಳಗಾವಿ- ಬೆಳಗಾವಿ ಜಿಲ್ಲೆಯ ಖಾನಾಪೂರ ಅರಣ್ಯ ಪ್ರದೇಶದಲ್ಲಿ ಇತ್ತಿಚಿಗೆ ಜಿಂಕೆಗಳ ಬೇಟೆಯಾಡಿ ಮೂವರು ಜನ ಆರೋಪಿಗಳು ನಂದಗಡ ಪ್ರದೇಶದಲ್ಲಿ ಸಿಕ್ಕಿ ಬಿದ್ದ ಬೆನ್ನಲ್ಲಿಯೇ ತಾಲೂಕಿನ ಹಿಡಕಲ್ ಗ್ರಾಮದ ಕಲ್ಮೇಶ್ವರ ಕೆರೆಯ ದಡದಲ್ಲಿ ಜಿಂಕೆ ಮರಿಯೊಂದು ಸತ್ತು ಬಿದ್ದಿದೆ
ಅನುಮಾನಾಸ್ಪದವಾಗಿ ಜಿಂಕೆ ಸಾವನ್ನೊಪ್ಪದ್ದು ಕೆಲವರು ಜಿಂಕೆ ಮರಿಯ ಬೇಟೆಯಾಡಿ ಜಿಂಕೆಯನ್ನು ಕೆರೆಯ ದಡದಲ್ಲಿ ಎಸೆದು ಹೋಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ
ಖಾನಾಪೂರ ತಾಲೂಕು ಹಿಡಕಲ್ ಸಮೀಪದ ಕಲ್ಮೇಶ್ವರ ಕೆರೆಯ ಬಳಿ ಘಟನೆ ನಡೆದಿದೆ ಜಿಂಕೆಗೆ ನಾಯಿ ಬೆನ್ನಟ್ಟಿ ಕಚ್ಚಿ ಕೊಂದಿವೆ ಎಂದ ಅರಣ್ಯ ಇಲಾಖೆ ಸಿಬ್ಬಂದಿಗಳು ತಿಳಿಸಿದ್ದಾರೆ ಅರಣ್ಯ ಇಲಾಖೆ ಸಿಬ್ಬಂದಿಯೇ ಜಿಂಕೆ ಬೇಟೆಯಾಡಿದ್ದಾರೆ ಎಂದು ಗ್ರಾಮಸ್ಥರ ಆರೋಪವಾಗಿದೆ
ಜಿಂಕೆ ಸಾವೀನ ಕುರಿತು ಮರಣೊತ್ತರ ಪರೀಕ್ಷೆ ನಡೆಸಿ ಹಿರಿಯ ಅಧಿಕಾರಿಗಳು ತನಿಖೆ ಮಾಡಬೇಕು ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಆಕ್ರಮ ಚಟುವಟಿಕೆಗಳನ್ನು ತಡೆಯುವಂತೆ ಗ್ರಾಮಸ್ಥರು ಒತ್ರಾಯಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ