ಬೆಳಗಾವಿ-ಖಾನಾಪುರ ತಾಲೂಕಿನ ಅವರೊಳ್ಳಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಗ್ರಾಮದ ಕುರಿಯನ್ನು ಬಲಿ ಪಡೆದ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಅವರೊಳ್ಳಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದೆ ಕರೊನಾ ಭಯದ ಮಧ್ಯೆ ಜನರಿಗೆ ಚಿರತೆಯ ಭಯ ಶುರುವಾಗಿದೆ.
ಅವರೊಳ್ಳಿ ಗ್ರಾಮದ ಸುತ್ತಮುತ್ತ ಓಡಾಡ್ತಾ ಇರೋ ಚಿರತೆ ನೋಡಿ ಜನ ಭಯಭೀತರಾಗಿ ಓಡಾಡಿದ್ದಾರೆ.
ಅವರೊಳ್ಳಿ ಗ್ರಾಮಕ್ಕೆ ನುಗ್ಗಿರುವ ಚಿರತೆ ಕುರಿಯೊಂದನ್ನು ಬಲಿ ಪಡೆದಿದೆ ಜನರ ಕೂಗಾಟ ಕೇಳಿ ಅರ್ಧಕ್ಕೆ ಕುರಿಯನ್ನು ಬಿಟ್ಟು ಹೋಗಿದೆ
ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿ ಚಿರತೆ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಚಿರತೆ ಭಯದಿಂದ ಮನೆಯಿಂದ ಹೊರಗೆ ಬರೋದಕ್ಕೆ ಹೆದರುತ್ತಿದ್ದು ಚಿರತೆಯ ಭಯ ಅವರೊಳ್ಳಿ ಗ್ರಾಮವನ್ನೇ ಶೀಲ್ ಡೌನ್ ಮಾಡಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ