ಖಾನಾಪೂರದಲ್ಲಿ ನಡೆದಿದ್ದು ಕರಡಿ ದಾಳಿ ಅಲ್ಲ ಅದೊಂದು ಕೊಲೆ…!!!
ಬೆಳಗಾವಿ- ಖಾನಾಪೂರದ ಜಂಗಲ್ ನಲ್ಲಿ ಇತ್ತೀಚಿಗೆ ಕರಡಿ ದಾಳಿಗೆ ಓರ್ವನ ಬಲಿ ಎಂದು ಬಿಂಬಿತವಾಗಿತ್ತು ಖಾನಾಪೂರ ಪೋಲೀಸರ ತನಿಖೆಯಿಂದಾಗಿ ಅಪಾದಿತರ ಗುಟ್ಟು ರಟ್ಟಾಗಿ,ಇದು ಕರಡಿ ದಾಳಿ ಅಲ್ಲ ಇದೊಂದು ಕೊಲೆ ಎನ್ನುವದನ್ನು ಪೋಲೀಸರು ಸಾಬೀತು ಮಾಡಿದ್ದಾರೆ.
ಖಾನಾಪೂರ ತಾಲ್ಲೂಕಿನ ಅಮಟೆ ಗ್ರಾಮದಲ್ಲಿ,ತಾನಾಜಿ ಟೋಪಾ ನಾಯಕ 35 ,ಎಂಬ ವ್ಯೆಕ್ತಿಯ ಶವ ಹಳ್ಳದ ಪಕ್ಕ ದೊರೆತ ಬಳಿಕ ಈ ಕುರಿತು ಆತನ ಪತ್ನಿ ತೇಜಸ್ವಿನಿ ಖಾನಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು
ಆರಂಭದಲ್ಲಿ ತಾನಾಜಿಯ ಮೇಲೆ ಕರಡಿ ದಾಳಿ ಮಾಡಿದ ಕಾರಣ ಆತ ಮೃತ ಪಟ್ಟಿದ್ದಾನೆ ಎಂದು ಬಿಂಬಿಸಲಾಗಿತ್ತು ,ಆದರೆ ಪ್ರಕರಣ ದಾಖಲಿಸಿಕೊಂಡ ಖಾನಾಪೂರ ಪೋಲೀಸರು ಇದು ಕರಡಿ ದಾಳಿ ಅಲ್ಲ ಇದೊಂದು ಕೊಲೆ ಎನ್ನುವ ರಹಸ್ಯವನ್ನು ಪತ್ತೆ ಮಾಡಿ,ಕೊಲೆ ಮಾಡಿದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಖಾನಾಪೂರ ತಾಲ್ಲೂಕಿನ ಅಮಟೆ ಗ್ರಾಮದ ತಾನಾಜಿಯನ್ನು ಸಿಂಗಲ್ ಬ್ಯಾರಲ್ ಬಂದೂಕಿನಿಂದ ಗುಂಡಿಕ್ಕಿ, ಆತನ ಮುಖದೇಲೆ ಕರಡಿ ದಾಳಿ ಮಾಡಿದ ಹಾಗೆ ಗಾಯ ಪಡಿಸಿ ಆತನ ಶವವನ್ನು ಹಳ್ಳದ ಪಕ್ಕ ಎಸೆದು ತಾನಾಜಿ,ಕರಡಿ ದಾಳಿಯಿಂದ ಸತ್ತಿದ್ದಾನೆ ಎಂದು ಸಾಕ್ಷಿ ನಾಶ ಮಾಡಲು ದೊಡ್ಡ ಸಂಚು ಅಲ್ಲಿ ನಡೆದಿತ್ತು
ಪ್ರಕರಣ ದಾಖಲಿಸಿಕೊಂಡ ಖಾನಾಪೂರ ಪೋಲೀಸರು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ಮಾಡಿ ಈ ಪ್ರಕರಣವನ್ನು ಎಲ್ಲ ಆಯಾಮಗಳಲ್ಲಿ ಅವಲೋಕಿಸಿ ಕೊಲೆ ಪ್ರಕರಣವನ್ನು ಬೇಧಿಸಿದ್ದಾರೆ .
ಪೋಸ್ಟ್ ಮಾರ್ಟಮ್ ರಿಪೋರ್ಟ್ ಆಧರಿಸಿ ತನಿಖೆ ಮುಂದುವರೆಸಿದ ಪೋಲೀಸರು ಕೊಲೆ ಮಾಡಿದ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ
ಈ ಕೊಲೆ ಪ್ರಕರಣದಲ್ಲಿ ಅಮಟೆ ಗ್ರಾಮದ ,ದೇವಿದಾದ ರಾಜಾರಾಮ ಗಾವಕರ28, ಸಂತೋಷ ಸೋಮಾ ಗಾವಕರ 32, ವಿಠ್ಠಲ ಗಣಪತಿ ನಾಯಕ 21, ಹಾಗು ಜಾಂಬೋಟಿ ಗ್ರಾಮದ ಪ್ರಶಾಂತ ಗಣಪತಿ ಸುತಾರ 28 ಎಂಬ ಒಟ್ಟು ಐವರು ಆರೋಪಿಗಳನ್ನು ಬಂದಿಸಿದ್ದು ಇನ್ನು ಕೆಲವು ಆರೋಪಿಗಳು ಪರಾರಿಯಾಗಿದ್ದಾರೆ ಬಂಧಿತ ಆರೋಪಿಗಳಿಂದ ಮೂರು ಸಿಂಗಲ್ ಬ್ಯಾರಲ್ ಬಂದೂಕುಗಳನ್ನು ವಶ ಪಡಿಸಿಕೊಳ್ಳಲಾಗಿದೆ .
ನಿಂಬರಗಿ ಅವರು ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯಾದ ಬಳಿಕ ಜಿಲ್ಲೆಯಲ್ಲಿ ನಡೆದ ಅನೇಕ ಕೊಲೆ ಪ್ರಕರಣಗಳು ತ್ವರಿತಗತಿಯಲ್ಲಿ ತನಿಖೆಯಾಗಿವೆ .
ಕರಡಿದಾಳಿ ಎಂದು ಜಂಗಲ್ ಮೇ ಮಂಗಲ್ ಮಾಡಲು ಹೊರಟಿದ್ದ ಖದೀಮರನ್ನು ಪೋಲೀಸರು ಪತ್ತೆ ಮಾಡಿದ್ದು ಶ್ಲಾಘನೀಯ