Breaking News

ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಮೂರು ತಿಂಗಳ ಕಾಲ ಅತ್ಯಾಚಾರ ನಡೆಸಿದ ಮೂವರು ಖದೀಮರು

ಬೆಳಗಾವಿ-ಗಣೇಶ ಹಬ್ಬದ ದಿದಂದು ಕರಾಳ ಘಟನೆಯೊಂದು ಬೆಳಕಿಗೆ ಬಂದಿದೆ ನಿನ್ನ ತಂದೆ ಕರೆಯುತ್ತಿದ್ದಾನೆ ಯುವತಿಗೆ ಸುಳ್ಳು ಹೇಳಿ ಆ ಯುವತಿಯನ್ನು ಖಾನಾಪೂರ ತಾಲೂಕಿನಿಂದ ಕಿಡ್ನ್ಯಾಪ್ ಮಾಡಿದ ಮೂರು ಜನ ಯುವಕರು ಬೆಳಗಾವಿ ನಗರದ ಆಝಂ ನಗರದ ಕೋಣೆಯಲ್ಲಿ ಕೂಡಿ ಹಾಕಿ ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ಅತ್ಯಾಚಾರ ನಡೆಸಿದ ಹೃದಯವಿದ್ರಾವಕ ಘಟಣೆ ನಡೆದಿದೆ
ಖಾನಾಪುರ ತಾಲೂಕಿನ ನಾಗೋಡಾ ಗ್ರಾಮದ ಯುವತಿಯನ್ನು ಅಪಹರಿಸಿದ ನಾಗೋಡಾ ಗ್ರಾಮದ ಇಬ್ಬರು ಯುವಕರು ಜೂನ್ 20ರಂದು ಖಾನಾಪೂರದ ಅರಣ್ಯದಲ್ಲಿ ಯುವತಿಯ ಮೇಲೆ ಅತ್ಯಾಚಾರ ನಡೆಸಿ ನಂತರ ಮಾರನೇಯ ದಿನ ಬೇಳಗಾವಿ ಆಝಂ ನಗರದ ಗೆಳೆಯನನ್ನು ಕರೆಯಿಸಿ ಮೂರು ಜನ ಅತ್ಯಾಚಾರ ನಡೆಸಿದ ಭಯಾನಕ ಘಟಣೆ ಬೆಳಕಿಗೆ ಬಂದಿದೆ
ಎರಡು ದಿನ 17 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆಸಿ ನಂತರ ಬೆಳಗಾವಿಯ ಆಝಂ ನಗರದ ಕೋಣೆಯೊಂದರಲ್ಲಿ ಕೂಡಿ ಹಾಕಿ ಮೂರು ತಿಂಗಳಿನಿಂದ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾರೆ
ಜೂನ್ 20 ರಂದು ನಾಗೋಡಾ ವಾಡಾ ಗ್ರಾಮದ ಯುವಕರಾದ 27 ವರ್ಷದ ಗೋಪಾಲ ಪುಣ್ಣಪಾ ಪಾರವಾಡಕರ,ಬಲರಾಮ ಅಶೋಕ ನಾಯಿಕ ಎಂಬಾತರು ಯುವತಿಯ ಮನೆಗೆ ಹೋಗಿ ನಿನ್ನ ತಂದೆ ಕರೆಯುತ್ತಿದ್ದಾರೆ ಎಂದು ಸುಳ್ಳು ಹೇಳಿ ಯುವತಿಯನ್ನು ಅಪಹರಿಸಿದ್ದಾರೆ ಈ ಇಬ್ಬರು ಖದೀಮರು ಒಂದು ದಿನ ಅತ್ಯಾಚಾರ ನಡೆಸಿ ಮಾರನೇಯ ದಿನ ಬೆಳಗಾವಿ ಆಝಂ ನಗರದ ನಿವಾಸಿ ರಮೇಶ ಮಲ್ಲಿಕಾರ್ಜುನ ಚೌಗಲಾ ಎಂಬ ಗೆಳೆಯನಿಗೆ ಅಹ್ವಾನಿಸಿ ಮೂರು ಜನ ಸೇರಿಕೊಂಡು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ

ನಂತರ ಈ ಯುವತಿಯನ್ನು ಬೆಳಗಾವಿಯ ರಮೇಶನಿಗೆ ಮಾರಾಟ ಮಾಡಿರುವ ಗೋಪಾಲ ಮತು ಬಲರಾಂ ಪರಾರಿಯಾಗಿದ್ದಾರೆ
ನಂತರ ಆಝಂ ನಗರದ ಖದೀಮ ರಮೇಶ ಯುವತಿಯನ್ನು ಆಝಂ ನಗರದ ಕೋಣೆಯಲ್ಲಿ ಕೂಡಿ ಹಾಕಿ ಜೂನ್ 21ರಿಂದ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾನೆ
ಯುವತಿ ಕಾಣೆಯಾಗಿದ್ದಾಳೆ ಎಂದು ಖಾನಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪಾಲಕರು ಕಳೆದ ಮೂರು ತಿಂಗಳಿನಿಂದ ಕಾಣೆಯಾದ ಮಗಳನ್ನು ಹುಡುಕುತ್ತಿರುವಾಗ ಈ ಯುವತಿ ಆಝಂ ನಗರದಲ್ಲಿ ಪಾಲಕರ ಕೈಸೇರಿದಾಗ ಈ ವಿಷಯ ಬೆಳಕಿಗೆ ಬಂದಿದೆ
ಯುವತಿಯ ಮೇಲೆ ಅತ್ಯಚಾರ ನಡೆಸಿದ ರಮೇಶನನ್ನು ಬಂಧಿಸಿರುವ ಪೋಲಿಸರು 363,366,344,368 ಕಲಂ ಅಡಿಯಲ್ಲಿ ಪ್ರಕರಣ ದಾಕಲಿಸಿ ತನಿಖೆ ಮುಂದುವರೆಸಿದ್ದಾರೆ.
ಗೋಪಾಲ ಮತ್ತು ಬಲರಾಮ ತೆಲೆಮರೆಸಿಕೊಂಡಿದ್ದಾರೆ

Check Also

ನೌಕರಿಯಿಂದ ವಜಾ, ಯುವಕನ ಆತ್ಮಹತ್ಯೆ

ಬೆಳಗಾವಿ-ಕೆಲಸದಿಂದ ವಜಾ ಮಾಡಿದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲ್ಲೂಕಿನಲ್ಲಿ ನಡೆದಿದೆ. ರವಿ ವೀರನಗೌಡ ಹಟ್ಟಿಹೊಳಿ (24) …

Leave a Reply

Your email address will not be published. Required fields are marked *