Breaking News

ಬೆಳಗಾವಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಕಿಡ್ನಾಪ್ ಪೊಲೀಸರ ಕಾರ್ಯಾಚರಣೆ ಸಕ್ಸೆಸ್

ಬೆಳಗಾವಿ: ಬೆಳಗಾವಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಇವಳ ಸ್ನೇಹಿತೆ ಮತ್ತು ಸ್ನೇಹಿತೆಯ ಲವರ್ ಸೇರಿಕೊಂಡು ಕಿಡ್ನಾಪ್ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ

ಕಿಡ್ನ್ಯಾಪ್ ಆಗಿರುವ ಯುವತಿ.ಅರ್ಪಿತಾ ನಾಯಕ್ ೨೩ ಇವಳು ನಗರದ ಜಿಐಟಿ ಕಾಲೇಜಿನಲ್ಲಿ ಓದುತ್ತಿದ್ದಾಳೆ ಬೆಳಗಾವಿಯ ಟಿಳಕವಾಡಿಯ ಸಾಯಿ ಪ್ಲಾಜಾ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದ ಅರ್ಪಿತಾ ೧೭ ನೇ ತಾರೀಖು ರಾತ್ರಿ ಊಟಕ್ಕೆಂದು ಸ್ನೇಹಿತೆ ಧಿವ್ಯಾ ಮಲಘಾನ ಜೊತೆ ಹೋದವಳು ವಾಪಸ್ ಬಂದಿರಲ್ಲಾ.

ಅರ್ಪಿತಾ ಸ್ನೇಹಿತೆ‌ ದಿವ್ಯಾ ಮಲಘಾನ ಮತ್ತು ದಿವ್ಯಾ ಪ್ರಿಯತಮ ಗದಗ ಮೂಲದ ಕೇಧಾರಿ ಜೊತೆ ಸೇರಿ ಹಣಕ್ಕಾಗಿ ಕಿಡ್ನಾಪ್ ಮಾಡಿದ್ದರು ಎಂದು ತಿಳಿದು ಬಂದಿದೆ

ಬೆಳಗಾವಿ ಖಾಸಗಿ ಹೊಟೇಲ್ ಅಲ್ಲಿ ಊಟ ಮಾಡಿ . ಹೊರಗೆ ಬಂದು ಎಳೆನೀರಲ್ಲಿ ನಿದ್ದೆ ಮಾತ್ರೆ ಸೇರಿಸಿ ಕುಡಿಸಿ ಕಿಡ್ನಾಪ್ ಮಾಡಿದ್ದರು.ಎಂದು ಹೇಳಲಾಗಿದೆ

ನಂತರ ತಾಯಿಗೆ ಕರೆ ಮಾಡಿ ತನ್ನನ್ನು ಅಪಹರಿಸಲಾಗಿದೆ ಅಂತ ಹೇಳಿದ ಅರ್ಪಿತಾ ತಮ್ಮ ಕುಟುಂಬದವರಿಗೆ ತಿಳಿಸಿದ ಬಳಿಕ ಯುವತಿ ಮನೆಯವರಿಂದ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಆರು ಜನರ ವಿರುದ್ದ ಕಿಡ್ನಾಪ್ ಕೇಸ್ ದಾಖಲು.ಮಾಡಲಾಗಿದೆ

ಡಿಸಿಪಿ ಜಿ.ರಾಧಿಕಾ ನೇತೃತ್ವದಲ್ಲಿ ವಿಶೇಷ ತಂಡದಿಂದ ಯುವತಿಯ ಪತ್ತೆಕಾರ್ಯ.ನಡೆದಿದೆ ಪೋಲೀಸರು ನಡೆಸಿದ ಕಾರ್ಯಾಚರಣೆ ಸಕ್ಸೆಸ್ ಆಗಿದ್ದು ಯುವತಿಯನ್ನು ಗದಗದಲ್ಲಿ ಹಿಡಿದಿರುವ ಪೋಲೀಸರು ಯುವತಿಯನ್ನು ಬೆಳಗಾವಿಗೆ ತರುತ್ತಿದ್ದಾರೆ

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *