ಯೋಧನ ಕುಟುಂಬದ ಮೇಲೆ ಹಲ್ಲೆ,ಭೀತಿಯಿಂದ ಗ್ರಾಮ ತೊರೆದ ಯೋಧನ ಕುಟುಂಬ….!
ಬೆಳಗಾವಿ- ಅಣ್ಣ ಮತ್ರು ತಂಗಿ ಇಬ್ಬರೂ ಭಾರತೀಯ ಸೇನೆಯಲ್ಲಿ ಸೇವೆ ಮಾಡುತ್ತಿದ್ದಾರೆ,ಈ ಯೋಧನ ಮನೆಗೆ ನುಗ್ಗಿರುವ ದುಷ್ಕರ್ಮಿಗಳು ಮನೆಯಲ್ಲಿದ್ದ ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡಿ ಯೋಧ ಮತ್ತು ಯೋಧನ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ ಘಟನೆ ಬೆಳಗಾವಿ ಸಮೀಪದ ಕಿಣಿಯೇ ಗ್ರಾಮದಲ್ಲಿ ನಡೆದಿದೆ.
ಮೂಳೆ ಚಿಕಿತ್ಸೆಗೆ ಪ್ರಸಿದ್ದಿ ಪಡೆದಿರುವ ಕಿಣಿಯೇ ಗ್ರಾಮದಲ್ಲಿ ಈ ಘಟನೆ ನಡೆದಿದೆ,ನನ್ನ ಹಾಗು ನನ್ನ ಕುಟುಂಬದವರ ಮೇಲೆ ನಡು ರಸ್ತೆಯಲ್ಲೇ ಡುಕರೆ ಕುಟುಂಬದವರು ಹಲ್ಲೆ ಮಾಡಿದ್ದಾರೆ,ಮನೆಯ ಸಾಮಾನುಗಳಿಗೆ ಬೆಂಕಿ ಹಚ್ಚಿದ್ದಾರೆ,ದ್ವಿಚಕ್ರ ವಾಹನ ದ್ವಂಸ ಮಾಡಿದ್ದಾರೆ,ಎಂದು ಯೋಧ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದುಷ್ಕರ್ಮಿಗಳು ಹಲ್ಲೆ ಮಾಡಿ ಮನೆಯ ಸಾಮಾನುಗಳಿಗೆ ಬೆಂಕಿ ಹಚ್ಚಿದ್ದರಿಂದ ಯೋಧ ಭರತೇಶ ಚೌಗಲೆ ಮತ್ರು ಆತನ ಕುಟುಂಬ ಈಗ ಗ್ರಾಮವನ್ನೇ ತೊರೆದಿದ್ದಾರೆ. ಯೋಧನ ಮನೆಯ ಪಕ್ಕದ ಶೆಡ್ ನಲ್ಲಿರುವ ದನಕರುಗಳಿಗೆ ಗ್ರಾಮಸ್ಥರು ನೀರು ಕುಡಿಸಿ ಮೇವು ಹಾಕುತ್ತಿದ್ದಾರೆ.
ಯೋಧನ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ,ಬೆಳಗಾವಿ ನಗರ ಪೋಲೀಸ್ ಆಯುಕ್ತರೂ ವಿಡಿಯೋ ಮಾಡಿ ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ,ಘಟನೆಗೆ ಸಮಂಧಿಸಿದಂತೆ ಪೋಲೀಸರು ಕೈಗೊಂಡಿರುವ ಕ್ರಮಗಳ ಬಗ್ಗೆ ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ.
ಘಟನೆಗೆ ಸಮಂಧಿಸಿದಂತೆ ಮೂವರನ್ನು ಪೋಲೀಸರು ಬಂಧಿಸಿದ್ದಾರೆ,ಹಲ್ಲೆ ಮಾಡಿಸಿಕೊಂಡ ಯೋಧನ ಮೇಲೂ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುಟ್ಟ ಗ್ರಾಮದಲ್ಲಿ,ಪುಟ್ಟ ಮನೆಯಲ್ಲಿ ವಾಸವಾಗಿರುವ ಯೋಧನ ಕುಟುಂಬದ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದು ಯೋಧನ ಕುಟುಂಬ ಗ್ರಾಮ ತೊರೆದಿದ್ದು ದುರ್ದೈವ…
ಯೋಧನ ಕುಟುಂಬ ಹಾಗೂ ಡುಕರೆ ಕುಟುಂಬ ಸಮಂಧಿಗಳಾಗಿದ್ದು ಘಟನೆಗೆ ಹಳೆಯ ವೈಷಮ್ಯವೇ ಕಾರಣ ಎಂದು ಹೇಳಲಾಗುತ್ತಿದೆ.