Breaking News

ಗಲ್ಲಿ… ಗಲ್ಲಿ..ಸುತ್ತಾಡುತ್ತಿರುವ ಕಿರಣ,ಹಳ್ಳಿ ಹಳ್ಳಿ ಅಲೆದಾಡುತ್ತಿರುವ ಅಶೋಕ…..!!!!

ಗಲ್ಲಿ… ಗಲ್ಲಿ..ಸುತ್ತಾಡುತ್ತಿರುವ ಕಿರಣ,ಹಳ್ಳಿ ಹಳ್ಳಿ ಅಲೆದಾಡುತ್ತಿರುವ ಅಶೋಕ…..!!!!


ಬೆಳಗಾವಿ- ಲಾಕ್ ಡೌನ್ ಸಂಧರ್ಭದಲ್ಲಿ ಅನೇಕ ಜನ ಯಾವುದೇ ಪ್ರಚಾರದ ಗಿಲ್ಲದೇ ಬಡವರ,ಅಸಹಾಯಕರ ನೆರವಿಗೆ ನಿಂತಿದ್ದಾರೆ.ಕನ್ನಡ ಕ್ರಿಯಾ ಸಮೀತಿಯ ಅಧ್ಯಕ್ಷ ಅಶೋಕ ಚಂದರಗಿ ದಿನನಿತ್ಯ ನಗರದ ಅಕ್ಕ ಪಕ್ಕದಲ್ಲಿರುವ ಹಳ್ಳಿಗಳಿಗೆ ದಿನನಿತ್ಯ ಸುತ್ತಾಡಿ ಆಹಾರ ಸಾಮುಗ್ರಿಗಳು ಯಾರಿಗೆ ಮುಟ್ಟಿಲ್ಲವೋ ಅಂತವರನ್ನು ಹುಡುಕಿ ಹುಡುಕಿ ಆಹಾರ ಸಾಮುಗ್ರಿಗಳ ಕಿಟ್ ಹಂಚುತ್ತಿದ್ದಾರೆ

ಬಿಜೆಪಿಯ ಯುವ ನಾಯಕ ಕಿರಣ ಜಾಧವ ಅವರು ಬೆಳಗಾವಿ ನಗರದ ವಿವಿಧ ಬಡಾವಣೆಗಳಲ್ಲಿ ಸುತ್ತಾಡಿ ಆಹಾರ ಸಾಮುಗ್ರಿಗಳನ್ನು ಹಂಚುತ್ತಿದ್ದಾರೆ ,ಕಿರಣ ಜಾಧವ ಅವರ ವಿಮಲ ಫೌಂಡೇಶನ್ ಬಡವರ ಪಾಲಿನ ಆಶಾ ಕಿರಣವಾಗಿದೆ .

ಇನ್ನೂ ಅನೇಕ ಜನ ದಾನಿಗಳು ಕದ್ದು ಮುಚ್ಚಿ ದಾನ ಮಾಡುತ್ತಿದ್ದಾರೆ .ಕೆಲವರು ತರಕಾರಿ ಹಂಚುತ್ತಿದ್ದಾರೆ ,ಕೆಲವರು ಜೋಳ,ಸೇರಿದಂತೆ ಇತರ ಧಾನ್ಯಗಳನ್ನು ಹಂಚುತ್ತಿದ್ದಾರೆ .

ಅಶೋಕ ಚಂದರಗಿ,ಕಿರಣ ಜಾಧವ ಅವರು ಸೇವೆ ಅಮೋಘ ಅನನ್ಯ
ಬೆಳಗಾವಿ.
ಕೊರೊನಾ ಮಹಾಮಾರಿ‌ ಹೋರಾಟದಲ್ಲಿ ಸಂಕಷ್ಟಕ್ಕೀಡಾದವರ ನೆರವಿಗೆ ಧಾವಿಸುವ ಕೆಲಸವನ್ನು ಇಲ್ಲಿಯ ವಿಮಲ್ ಪೌಂಡೇಶನ್ ಇಂದೂ ಕೂಡ ಮುಂದುವರೆಸಿದೆ.
ಬೆಳಗಾವಿಯಾದ್ಯಂತ ಕಡು ಬಡವರನ್ನು ಹುಡುಕಿ ದಿನಸಿ ಕಿಟ್ ಕೊಡುವ ಕೆಲಸವನ್ನು ಈ ಫೌಂಡೇಶನ್ ಮಾಡುತ್ತಿದೆ.
ಭಾಗ್ಯನಗರದ ಎರಡನೇ ಕ್ರಾಸ್ ನ ಆರ್ಯನಿವಾಸ ಚಾಳ ದಲ್ಲಿರುವ ಕಡುಬಡವರಿಗೆ ಇಂದು ಬಿಜೆಪಿ ಮುಖಂಡ ಕಿರಣ ಜಾಧವ ನೇತ್ರತ್ವದಲ್ಲಿ ಕಿಟ್ ವಿತರಿಸಲಾಯಿತು. ಶ್ರೀಮತಿ ವಾಣಿ ಜೋಶಿ, ಸಮಿರ್ ಸರ್ದೇಸಾಯಿ, ಮಾಲತೇಶ ಕುಲಕರ್ಣಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿರಿದ್ದರು. ಕಿಟ್ ವಿತರಣೆ ಮಾಡುವ ಸಂದರ್ಭದಲ್ಲಿ ಸೋಶಿಯಲ್ ಡಿಸ್ಟನ್ಸ್ ಮೆಂಟೇನ್ ಮಾಡಲಾಗಿತ್ತು…

ಅಶೋಕ ಚಂದರಗಿ ಅವರ ಸಾಮಾಜಿಕ ಕಳಕಳಿ ಕಿರಣ ಜಾಧವ ಅವರ ಬಡವರ ಸೇವೆ ಮಾಡುವ ಇಚ್ಛಾಶಕ್ತಿ ಎಲ್ಲರಿಗೂ ಪ್ರೇರಣಾದಾಯಕ….

ಕಿರಣ ಜಾಧವ..ಅಶೋಕ ಚಂದರಗಿ ನಿಮ್ಮ ಸೇವೆಗೊಂದು ಸಲಾಂ…

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *