ಬೆಳಗಾವಿ- ಸಚಿವರುಗಳಾದ ಅರಗ ಜ್ಞಾನೇಂದ್ರ,ಆರ್ ಅಶೋಕ,ಅಶ್ವತ್ಥ ನಾರಾಯಣ,ಹಾಗು ಸಚಿವ ನಾರಾಯಣಗೌಡ ಅವರು ಇಂದು ಬೆಳಗ್ಗೆ ಬೆಳಗಾವಿಯ ಸುವರ್ಣ ವಿಧಾನಸೌಧದ ಹೆಲಿಪ್ಯಾಡ್ ನಲ್ಲಿ ಬಂದಿಳಿದು ಕಿತ್ತೂರಿಗೆ ತೆರಳಿ ವೀರರಾಣಿ ಚನ್ನಮ್ಮಾಜಿಯ ಕ್ರಾಂತಿಯ ನೆಲದ ಮಣ್ಣು ತೆಗೆದುಕೊಂಡು ಹೋದರು.
ಈ ಪುಣ್ಯ ಭೂಮಿಯ ಮಣ್ಣನ್ನು ಬೆಂಗಳೂರಿನಲ್ಲಿ ಅನಾವರಣಗೊಳ್ಳಲಿರುವ ನಾಡಪ್ರಭು ಕೆಂಪೆಗೌಡರ ಮೂರ್ತಿಯ ಪ್ರತಿಷ್ಠಾನೆ ಬಳಕೆ ಮಾಡಲಿದ್ದಾರೆ.ಬೆಳಗಾವಿಯ ಸುವರ್ಣಸೌಧದ ಬಳಿ ಮಾದ್ಯಮಗಳ ಜೊತೆ ಮಾತನಾಡಿದ,ಗೃಹ ಸಚಿವ ಅರಗ ಜ್ಞಾನೇಂದ್ರ ಕೆಂಪೇಗೌಡರ 108 ಅಡಿಯ ಪ್ರತಿಮೆ ನವೆಂಬರ್ 11ರಂದು ಲೋಕಾರ್ಪಣೆ ಆಗಲಿದೆ.ಪ್ರಧಾನಿ ನರೇಂದ್ರ ಮೋದಿಯಿಂದ ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ.
ಥೀಮ್ ಪಾರ್ಕ್ ಸಹ ನಿರ್ಮಾಣ ಆಗುತ್ತಿದೆ.
ರಾಜ್ಯದ ಶೌರ್ಯದಿಂದ ಕೀರ್ತಿ ತಂದಿದ್ದ ಸ್ಥಳದಿಂದ ಮಣ್ಣು ಸಂಗ್ರಹ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.ಹಂಪಿ, ಕೂಡಲಸಂಗಮ, ಕಿತ್ತೂರಿನಿಂದ ಮಣ್ಣು ಸಂಗ್ರಹ ಮಾಡಲಾಗುತ್ತಿದೆ.ಏಕತೆ, ಸಮಗ್ರತೆ ದೃಷ್ಟಿಯಿಂದ ನಾಲ್ಕು ಜನ ಸಚಿವರು ಭೇಟಿ ಆರ್ ಅಶೋಕ್, ಅಶ್ವತ್ಥ ನಾರಾಯಣ, ನಾರಾಯಣ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದೇವೆ.ಎಂದರು.
ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರನ ಅನುಮಾನಾಸ್ಪದ ಸಾವು ವಿಚಾರ.
ಕಾರು ಚಾಲನನಲ್ಲಿ ಬಿದ್ದಿದೆ.
ಪೊಲೀಸರು ವಿಶೇಷ ತನಿಖೆ ಆರಂಭ ಮಾಡಿದ್ದಾರೆ.
ಎಫ್ ಎಸ್ ಎಲ್ ತಂಡ ಸ್ಥಳಕ್ಕೆ ಭೇಟಿ ನೀಡಿದೆ.
ದಾವಣಗೆರೆ ಎಸ್ಪಿ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ.ಕುಟುಂಬಸ್ಥರು ಕೊಲೆ ಎಂದು ಆರೋಪ ಮಾಡಿದ್ದಾರೆ.ಎಲ್ಲಾ ಆಯಾಮದಲ್ಲಿ ತನಿಖೆ ನಡೆಯುತ್ತಿದೆ.
ಯಾವ ಹಿನ್ನೆಲೆಯಲ್ಲಿ ಘಟನೆ ಆಗಿದೆ ಎಂಬುದು ತನಿಖೆಯಿಂದ ಗೊತ್ತಾಗಲಿದೆ.
ಫೋನ್ ಸಹ ವಿಶ್ಲೇಷಣೆ ಸಹ ಮಾಡಲಾಗುತ್ತಿದೆ. ಎಂದು ಗೃಹ ಸಚಿವರು ಹೇಳಿದರು.
ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಗೆ ಸಹ ಜೀವ ಬೇದರಿಕೆ ಹಿನ್ನೆಲೆ.ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ದೂರಿನ ಆಧಾರದ ಪೊಲೀಸರು ಈ ಬಗ್ಗೆ ತನಿಖೆ ಮಾಡಿ ಕ್ರಮ ಕೈಗೊಳ್ಳಲಾಗಿದ್ದಾರೆ.
ಯಾರೇ ಟಾರ್ಗೆಟ್ ಮಾಡಿದ್ರು ಬಿಡಲ್ಲ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ.ಎಂದು ಗೃಹ ಸಚಿವರು ತಿಳಿಸಿದರು.