ಬೆಳಗಾವಿ- ವೀರ ರಾಣಿ ಕಿತ್ತೂರ ಚನ್ನಮಾಜಿಯ ಹೋರಾಟದ ನೆಲ ಐತಿಹಾಸಿಕ ಕಿತ್ತೂರನ್ನು ಪೂರ್ಣ ಪ್ರಮಾಣದ ತಾಲ್ಲೂಕು ಮಾಡಲು ಜಿಲ್ಲಾಧಿಕಾರಿ ಎನ್ ಜಯರಾಂ ಅವರು ಎಲ್ಲ ರೀತಿಯ ಕ್ರಮಗಳನ್ನು ಜರುಗಿಸಿದ್ದಾರೆ
ಕಿತ್ತೂರು ತಾಲ್ಲೂಕಿನಲ್ಲಿ ಈಗಾಗಲೇ ತಾಲೂಕಾ ದಂಡಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಜೊತೆಗೆ ಕಿತ್ತೂರಿನಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ನೀಲ ನಕ್ಷೆ ಸಿದ್ಧಗೊಂಡಿದೆ,ಜೊತೆಗೆ ಕಿತ್ತೂರು ತಾಲ್ಲೂಕಿಗೆ ತಾಲ್ಲೂಕು ಮಟ್ಟದ ಎಲ್ಲ ಕಚೇರಿಗಳನ್ನು ಮಂಜೂರು ಮಾಡುವಂತೆ ಜಿಲ್ಲಾಧಿಕಾರಿ ಎನ್ ಜಯರಾಂ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆನ್ನು ಕಳುಹಿಸಿದ್ದಾರೆ
ಈಗ ಕಿತ್ತೂರು ತಾಲ್ಲೂಕಿಗೆ ಪ್ತತ್ಯೇಕವಾದ ತಾಲ್ಲೂಕು ಪಂಚಾಯತಿ ನಿರ್ಮಿಸಲು ಬೆಳಗಾವಿ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಪ್ರಸ್ತಾವನೆ ಯನ್ನು ಸಲ್ಲಿಸಲಾಗಿದೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಇಚ್ಛಾ ಶಕ್ತಿಯ ಪರಿಣಾಮ ಕಿತ್ರೂರಿನಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ
ಸಂಗೊಳ್ಳಿ ರಾಯಣ್ಣನ ತವರು ಸಂಗೊಳ್ಞಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಯೋಜನೆ ರೂಪಿಸಲಾಗಿದೆ ಪ್ರಾಧಿಕಾರದ ಆಯುಕ್ತರು ಸಂಗೊಳ್ಳಿ ಗ್ರಾಮ ಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಯಾವ ಯಾವ ಕಾಮಗಾರಿಗಳನ್ನು ನಡೆಸಬಹುದು ಎನ್ನುವ ಬಗ್ಗೆ ಪಟ್ಟಿ ಮಾಡಿಕೊಂಡು ಹೋಗಿದ್ದಾರೆ.