ಬೆಳಗಾವಿ- ಗ್ರಾಮಗಳ ಸುಧಾರಣೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರತಿವರ್ಷ ಸಾವಿರಾರು ಕೋಟಿ ರೂ ಗಳನ್ನು ಖರ್ಚು ಮಾಡುತ್ತದೆ ಆದರೆ ಹಳ್ಳಿಗಳ ರಸ್ತೆಗಳು ಮಾತ್ರ ಸುಧಾರಣೆ ಆಗುತ್ತಿಲ್ಲ ಹಳ್ಳಿಯ ಜನ ನಮ್ಮೂರಿನ ರಸ್ತೆ ರಿಪೇರಿ ಮಾಡ್ರಪ್ಪೋ ಎಂದು ಬಾಯಿ ಬಡಿದುಕೊಳ್ಳುವ ಪರಿಸ್ಥಿತಿ ದೂರಾಗದೇ ಇರುವದು ದುರ್ದೈವ
ಇದು ವೀರ ರಾಣಿ ಕಿತ್ತೂರ ಚನ್ನಮ್ಮಾಜಿಯ ಕ್ಷೇತ್ರ ನಮ್ಮ ಸರ್ಕಾರಗಳು ಈ ವೀರ ವನಿತೆಯ ಕ್ಷೇತ್ರಕ್ಕೆ ಎಷ್ಟು ಗೌರವ ಕೊಟ್ಟಿವೆ ನೋಡಿ ದೇಶ ರಕ್ಷಣೆಗಾಗಿ ಬ್ರಿಟೀಷರ ವಿರುದ್ಧ ಹೋರಾಡಿ ಬ್ರಿಟೀಷ್ ಅಧಿಕಾರಿ ಥ್ಯಾಕರೆಯ ರುಂಡ ಚೆಂಡಾಡಿದ ನೆಲದಲ್ಲಿ ಇಲ್ಲಿಯ ಜನ ನಮ್ಮೂರಿಗೆ ರಸ್ತೆಯಾದ್ರೂ ಮಾಡ್ರಿ ಎಂದು ಕೆಸರಿನಲ್ಲಿ ಉರುಳಿ ಸರ್ಕಾರಕ್ಕೆ ದೀಡ ನಮಸ್ಕಾರ ಹಾಕಿ ರಸ್ತೆ ರಿಪೇರಿ ಮಾಡ್ರಪ್ಪ ಎಂದು ಬೇಡಿಕೊಳ್ಳುತ್ತಿದ್ದಾರೆ ಕಿತ್ತೂರ ಕ್ಷೇತ್ರದ ಮೆಟ್ಯಾಲ ಗ್ರಾಮದ ಜನ ರಾಡಿಯಲ್ಲಿ ಉರಳಾಡಿದ್ದು ಕ್ರಾಂತಿ ನೆಲದ ದೊಡ್ಡ ದುರ್ದೈವ
ಉತ್ತರ ಕರ್ಣಾಟಕಕ್ಕೆ ಅನ್ಯಾಯ ಆಗಿಲ್ಲ ಎಂದು ಹೇಳಿಕೊಳ್ಳುವ ನಾಯಕರು ಮೆಟ್ಯಾಲ ಗ್ರಾಮಕ್ಕೆ ಭೇಟಿ ಕೊಟ್ಟರೆ ಈ ಪ್ರದೇಶಕ್ಕೆ ನ್ಯಾಯನೋ..ಅನ್ಯಾಯನೋ ಗೊತ್ತಾಗುತ್ತದೆ
ಸರ್ಕಾರ ಕಿತ್ತೂರ ಅಭಿವೃದ್ಧಿ ಪ್ರಾಧಿಕಾರ..ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ ಮಾಡಿದೆ ಆದರೆ ಪ್ರಾಧಿಕಾರಳು ಎಲ್ಲಿವೆ ಏನು ಕೆಲಸ ಮಾಡುತ್ತಿವೆ ಎನ್ನುವದು ಕಿತ್ತೂರಿನ ಜನತೆಗೆ ಗೊತ್ತಾಗುತ್ತಿಲ್ಲ
ಕಿತ್ತೂರಿನ ಶಾಸಕರಾದವರು ಶೋಕಿಲಾಲ ಆಗಿದ್ದರು ಶೋಕಿಗಾಗಿ ಅವರು ಶಾಸಕರು ಮತ್ತು ಮಂತ್ರಿಯಾದರು ಈಗಿರುವ ಕಿತ್ತೂರಿನ ಶಾಸಕರು ಬೈಲಹೊಂಗಲದಲ್ಲಿ ಕಚೇರಿ ಮಾಡಿ ಕುಳಿತಿದ್ದಾರೆ ಕಿತ್ತೂರ ಕ್ಷೇತ್ರದಲ್ಲಿಯೂ ಅವರ ಕಚೇರಿಗಳಿವೆ ಆದರೆ ದೊಡ್ಡಗೌಡ್ರು ಬೈಲಹೊಂಗಲ ಕಚೇರಿಯಲ್ಲೇ ಸಿಗುತ್ತಾರೆ
ಕಿತ್ತೂರ ಕ್ಷೇತ್ರದ ಜನ ರಸ್ತೆ ದುರಸ್ಥಿಗಾಗಿ ರಾಡಿಯಲ್ಲಿ ಉರುಳಾಡುತ್ತಿರುವಾಗ ಕ್ರಾಂತಿ ನೆಲದ ಕ್ರಾಂತಿಕಾರಿ ಶಾಸಕರು ಅವಾಜ್ ಹಾಕಬೇಕಲ್ಲ ಜನ ಅದಕ್ಕೂ ರಾಡಿಯಲ್ಲಿ ಉರುಳಾಡಬೇಕಾ?
ಕಿತ್ತೂರ ತಾಲ್ಲೂಕು ಆಗಿದೆ ಹಳ್ಳಿಗಳ ಸ್ಥಿತಿ ಶೋಚನೀಯವಾಗಿದೆ ಕ್ರಾಂತಿ ನೆಲಕ್ಕೆ ನ್ಯಾಯ ದೊರಕಿಸಿಕೊಡಲು ಜಿಲ್ಲೆಯ ನಾಯಕರು ಧ್ವನಿ ಎತ್ತಲೇಬೇಕು ವೀರರಾಣಿಯ ನೆಲದ ಗೌರವ ಉಳಿಸಬೇಕು ಇದೇ ಪರಿಸ್ಥಿತಿ ಮುಂದುವರೆದರೆ ಕಿತ್ತೂರಿನ ಜನ ದಂಗೆ ಎದ್ದಾರು ಹುಷಾರ್….!!!!