ಬೆಳಗಾವಿ – ಐತಿಹಾಸಿಕ ವೀರರಾಣಿಯ ಕ್ರಾಂತಿಯ ನೆಲ ಕಿತ್ತೂರಿನಲ್ಲಿ ರಾಜಕೀಯ ಕಿತ್ತಾಟ ಮುಂದುವರೆದಿದೆ ಈ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಮಾಜಿ ಶಾಸಕ ಡಿಬಿ ಇನಾಮದಾರ ಮತ್ತು ಬಾಬಾಸಾಹೇಬ ಪಾಟೀಲರ ನಡುವೆ ಗುದ್ದಾಟ ನಡೆದಿದೆ
ಕಿತ್ತೂರ ಕ್ಷೇತ್ರದ ಬಿಜೆಪಿ ಟಿಕೆಟ್ ಮಹಾಂತೇಶ ದೊಡ್ಡಗೌಡರಿಗೆ ಫೈನಲ್ ಆಗುತ್ತಿದ್ದಂತೆಯೇ ಮಾಜಿ ಶಾಸಕ ಸುರೇಶ ಮಾರಿಹಾಳ ಬಂಡಾಯದ ಬಾವುಟ ಹಾರಿಸಿದ್ದಾರೆ ಮಾರಿಹಾಳ ಬೆಂಬಲಿಗರು ನಿನ್ನೆ ರಾತ್ರಿ ಬಿಜೆಪಿ ನಾಯಕರ ಧೋರಣೆ ಖಂಡಿಸಿ ಪ್ರತಿಭಟಿಸಿದ್ದಾರೆ ಇಂದು ಬೆಳಿಗ್ಗೆ ಸುರೇಶ ಮಾರಿಹಾಳ ಅವರನ್ನು ಬಬಲಿಸಿ ಕಿತ್ತೂರ ಬಂದ್ ಆಗಿದೆ ಕಿತ್ತೂರಿನ ಬಹುತೇಕ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿದ್ದು ಸುರೇಶ ಮಾರಿಹಾಳ ಬೆಂಬಲಿಗರು ಚನ್ನಮ್ಮನ ಪ್ರತಿಮೆ ಎದುರು ಪ್ರತಿಭಟನೆ ಮುಂದುವರೆಸಿದ್ದಾರೆ
ಕಾಂಗ್ರೆಸ್ ಕಾಳಗವೂ ಇದರಿಂದ ಹೊರತಾಗಿಲ್ಲ ಕಾಂಗ್ರೆಸ್ ಟಿಕೆಟ್ ಡಿಬಿ ಇನಾಮದಾರ ಅವರಿಗೆ ದಕ್ಕಿದರೆ ಇನಾಮದಾರ ಅಳಿಯ ಬಾಬಾಸಾಹೇಬ ಪಾಟೀಲ ಬಂಡಾಯದ ಬಾವುಟ ಹಾರಿಸಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸೂಚನೆ ನೀಡಿದ್ದಾರೆ ಇನ್ನೊಂದೆಡೆ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿ ರಾಜಿನಾಮೆ ವಾಪಸ್ ಪಡೆದಿರುವ ಡಿಬಿ ಇನಾಮದಾರ ಕಾಂಗ್ರೆಸ್ ಟಿಕೆಟ್ ಪಡೆಯಲು ಕೊನೆಯ ಸುತ್ತಿನ ಕಸರತ್ತು ಮುಂದುವರೆಸಿದ್ದಾರೆ
ಕಿತ್ತೂರಿನಲ್ಲಿ ರಾಜಕೀಯ ಕಿತ್ತಾಟ ಮುಂದುವರೆದಿದ್ದು ಬಿಜೆಪಿಯ ಮಾಜಿ ಶಾಸಕ ಸುರೇಶ ಮಾರಿಹಾಳ ಅವರಿಗೆ ಬಿಜೆಪಿ ಟಿಕೆಟ್ ಕೊಡಬೇಕು ಎಂದು ಆಗ್ರಹಿಸಿ ಕಿತ್ತೂರ ಪಟ್ಟಣ ಬಂದ್ ಆಗಿದೆ ಪ್ರತಿಭಟನೆ ಮುಂದುವರೆದಿದೆ
ಮಧ್ಯಾಹ್ನ ಕಾಂಗ್ರೆಸ್ ಅಭ್ಯರ್ಥಿಯ ಅಧಿಕೃತ ಘೋಷಣೆ ಆಗಲಿದೆ ಇದಾದ ಬಳಿಕ ಕಾಂಗ್ರೆಸ್ಸಿನ ಟಿಕೆಟ್ ಜಗಳ ಬೀದಿಗೆ ಬರೋದು ಗ್ಯಾರಂಟಿ