Breaking News

ಕಿತ್ತೂರಿನಲ್ಲಿ ರಾಜಕೀಯ ಕಿತ್ತಾಟ….. ಬಿಜೆಪಿಯಲ್ಲಿ ಅದಲ್ ಬದಲ್ ಕಾಂಗ್ರೆಸ್‍ನಲ್ಲಿ ಬಾಬಾಸಾಬನ ಕದಲ್….!

ಬೆಳಗಾವಿ 05: ಬೆಳಗಾವಿ ಜಿಲ್ಲೆಯ ಐತಿಹಾಸಿಕ ಕಿತ್ತೂರು ಮತಕ್ಷೇತ್ರದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಾಳೆಯದಲ್ಲಿ ಟಿಕೆಟ್‍ಗಾಗಿ ಈಗಿನಿಂದಲೇ ಕಿತ್ತಾಟ ಶುರುವಾಗಿದೆ.
ಬಿಜೆಪಿಯಲ್ಲಿ ಅದಲ್ ಬದಲ್ ಮಾಡುವ ಪ್ರಯತ್ನಗಳು ನಡೆದಿವೆ, ಮಾಜಿ ಶಾಸಕ ಶಂಕರ ಮಾರಿಹಾಳ ಅವರಿಗೆ ಟಾಂಗ್ ಕೊಡಲು ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಮಹಾಂತೇಶ ದೊಡಗೌಡರ ಕಸರತ್ತು ನಡೆಸಿದ್ದಾರೆ. ಮಾಜಿ ಸಚಿವ ಲಕ್ಷ್ಮಣ ಸವದಿ ಅವರು ಮಹಾಂತೇಶ ದೊಡಗೌಡರನ್ನು ಕಿತ್ತೂರು ಕ್ಷೇತ್ರದಲ್ಲಿ ಪ್ರಮೋಟ್ ಮಾಡಲು ಸ್ಕೆಚ್ ಹಾಕಿದ್ದಾರೆ.
ಇದಕ್ಕೆ ಬಿಜೆಪಿ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ ಎಂದು ಹೇಳ ಲಾಗುತ್ತಿದೆ. ಮಾಜಿ ಸಚಿವ ಉಮೇಶ ಕತ್ತಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರು ಮಹಾಂತೇಶ ದೊಡಗೌಡರ ಅವರಿಗೆ ಪ್ರಮೋಟ್ ಮಾಡಿದರೆ ನಮ್ಮ ದಾರಿಯನ್ನು ನಾವು ನೋಡಿಕೊಳ್ಳುತ್ತೇವೆ. ಕಿತ್ತೂರಿನಲ್ಲಿ ಶಂಕರ ಮಾರಿಹಾಳ ಅವರೇ ಅಧಿಪತಿ ಎನ್ನುವ ಸಂದೇಶವನ್ನು ಹೈಕಮಾಂಡ್‍ಗೆ ರವಾನಿಸಿದ್ದಾರೆ ಎಂದು ಪಕ್ಷದ ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ.
ಇತ್ತ ಕಾಂಗ್ರೆಸ್‍ನಲ್ಲಿ ಶಾಸಕ ಡಿ.ಬಿ.ಇನಾಮದಾರ್ ಅವರ ರಾಜಕೀಯ ವಾರಸದಾರನಾಗಲು ಅವರ ಅಳಿಯ ಬಾಬಾಸಾಬ ಇನಾಮದಾರ ಕಿತ್ತೂರಿನಲ್ಲಿ ತಮದೇಯಾದ ಪಡೆಯನ್ನು ಸಂಘಟಿಸುವ ಪ್ರಕ್ರಿಯೇಗೆ ಚಾಲನೆ ನೀಡಿದ್ದಾರೆ. ಮುಂದಿನ ಕಾಂಗ್ರೆಸ್ ಅಭ್ಯರ್ಥಿ ನಾನೇ ಎಂಬ ಸಂದೇಶವನ್ನು ಹಳ್ಳಿ ಹಳ್ಳಿಗಳಿಗೆ ಮುಟ್ಟಿಸುವ ಕೈಂಕರ್ಯದಲ್ಲಿ ಬ್ಯೂಸಿ ಯಾಗಿದ್ದಾರೆ.
ಆದರೆ ಡಿ.ಬಿ.ಇನಾಮದಾರ್ ಅವರು ಸರಳವಾಗಿ ಬಾಬಾಸಾಹೇಬ ಇನಾಮದಾರ್ ಅವರಿಗೆ ತಮ್ಮ ಸಾಮ್ರಾಜ್ಯವನ್ನು ಬಿಟ್ಟು ಕೊಡಬಹುದೇ ಅನ್ನುವ ಪ್ರಶ್ನೆ ಕ್ಷೇತ್ರದ ಜನರನ್ನು ಕಾಡುತ್ತಿದೆ. ಒಂದು ವೇಳೆ ಡಿ.ಬಿ. ಇನಾಮದಾರ್ ಅಧಿಕಾರವನ್ನು ಬಿಟ್ಟುಕೊಡದೇ ತಮ್ಮ ಸುಪುತ್ರ ವಿಕ್ರಮ್ ಅಥವಾ ಬಸವರಾಜನಿಗೆ ಕನಕ್ಕಿಳಿಸಿದರೆ ಬಾಬಾಸಾಹೇಬ ಬಂಡಾಯವೆದ್ದು ಯಾವುದಾದರೊಂದು ಪಕ್ಷದಿಂದ ಕನಕ್ಕಿಳಿಯುವುದು ಗ್ಯಾರಂಟಿ ಎಂದು ಕಿತ್ತೂರು ಕ್ಷೇತ್ರದ ಜನ ಲೆಕ್ಕ ಹಾಕಿದ್ದಾರೆ. ಒಟ್ಟಾರೆ ಐತಿಹಾಸಿಕ ಕಿತ್ತೂರು ಕ್ಷೇತ್ರದಲ್ಲಿ ರಾಜಕೀಯ ಕಿತ್ತಾಟ ಶುರುವಾಗಿದೆ.

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *