Breaking News

ಕಿತ್ತೂರು ಖುರ್ಚಿಗಾಗಿ ಕಿತ್ತಾಟ, ಪ.ಪಂ ಸದಸ್ಯನ ಕಿಡ್ನ್ಯಾಪ್..??

ಬೆಳಗಾವಿ-ಚನ್ನಮ್ಮನ ಕಿತ್ತೂರು: ಸೆ, 3 ರಂದು ಇಲ್ಲಿಯ ಪಟ್ಟಣ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ದಿನಾಂಕ ನಿಗದಿಯಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಸಮಸ್ಥಾನ ಹೊಂದಿದ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯ ನಾಗರಾಜ ಅಸುಂಡಿ (34) ಅವರನ್ನು ಗುರುವಾರ ತಡರಾತ್ರಿ ಅಪಹರಣ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

9 ಬಿಜೆಪಿ ಸದಸ್ಯರು, 5 ಕಾಂಗ್ರೆಸ್ ಸದಸ್ಯರು, ನಾಲ್ವರು ಪಕ್ಷೇತರ ಸದಸ್ಯರು ಪಟ್ಟಣ ಪಂಚಾಯತಿಗೆ ಆಯ್ಕೆಯಾಗಿ ಬಂದಿದ್ದಾರೆ. ಇವರಲ್ಲಿ 4 ಪಕ್ಷೇತರ ಸದಸ್ಯರು ಕಾಂಗ್ರೆಸ್ ಗೆ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ.ಪಟ್ಟಣ ಪಂಚಾಯತ್ ಅಧ್ಯಕ್ಷ ಗಾದಿಗೆ ಏರಲು ಕಾಂಗ್ರೆಸ್ ಪಕ್ಷದ ಬೆಂಬಲಿಗರು ಬಿಜೆಪಿ ಸದಸ್ಯನ ಅಪಹರಣ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಚೌಕಿಮಠ ದ ಬಳಿ ನಿಂತಾಗ ನಾಗರಾಜ ಅವರನ್ನು ಸ್ಕಾರ್ಪಿಯೋ ವಾಹನದಲ್ಲಿ ಬಲವಂತವಾಗಿ ಎಳೆದುಕೊಂಡು ಕೂಡ್ರಿಸಿ ಅಪಹರಣ ಮಾಡಿದರು ಎಂದು ಬಿಜೆಪಿಯ ಪ್ರತ್ಯಕ್ಷದರ್ಶಿ ಮಾಹಿತಿ ನೀಡಿದ್ದಾರೆ.
ವಾಹನದಲ್ಲಿ ಬಲವಂತವಾಗಿ ಕೂಡ್ರಿಸಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಚನ್ನಮ್ಮ ವೃತ್ತದಲ್ಲಿ ಕೂಗಾಡಿದ್ದಾರೆ. ಇದು ವರ್ತುಲದಲ್ಲಿ ನಿಂತಿದ್ದ ಬಿಜೆಪಿ ಕಾರ್ಯಕರ್ತರ ಗಮನಕ್ಕೆ ಬಂದಿದೆ

ಇಂದು ಪ್ರತಿಭಟನೆಗೆ ಬಿಜೆಪಿ ನಿರ್ಧಾರ….

ನಿನ್ನೆ ರಾತ್ರಿ ಜಿಲ್ಲೆಯ ಚನ್ನಮ್ಮನ ಕಿತ್ತೂರ ಪಟ್ಟಣ ಪಂಚಾಯತಿ ಸದಸ್ಯ ನಾಗರಾಜ ಅಸುಂಡಿಯವರನ್ನ ಕಾಂಗ್ರೆಸ್ ನಾಯಕರ ಅನತಿಯಂತೆ ಅಪಹರಣ ಮಾಡಿರುವವರನ್ನು ತಕ್ಷಣ ಪತ್ತೆಮಾಡಿ, ಪ.ಪಂ ಸದಸ್ಯನನ್ನ ಹುಡುಕಿ ಅವರ ಕುಟುಂಬಕ್ಕೆ ಒಪ್ಪಿಸುವಂತೆ ಆಗ್ರಹಿಸಿ ಹಾಗೂ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವದನ್ನು ಖಂಡಿಸಿ
ಇಂದು 30.08.2024 ರಂದು ಮಧ್ಯಾಹ್ನ 12.30 ಘಂಟೆಗೆ
*ಬೆಳಗಾವಿ ಎಸ್.ಪಿ ಯವರಿಗೆ ಅವರ ಕಛೇರಿಯಲ್ಲಿ ಮನವಿ ನೀಡಿ ಜಿಲ್ಲಾ ಬಿಜೆಪಿ ಘಟಕದಿಂದ ಪ್ರತಿಭಟಣೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಪ್ರಕಟಣೆ ಹೊರಡಿಸಿದೆ.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *