ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕಿತ್ತೂರ ತಾಲೂಕಿಗೆ ವಿಶೇಷ ತಾಲೂಕುವಾಗಬೇಕು ಅನ್ನೋದೆ ನನ್ನ ಆಸೆ ತಿಂಗಳಲ್ಲಿ ತಾಲೂಕಿಗೆ ಪೂರ್ಣ ಪ್ರಮಾಣದ ಮಾನ್ಯತೆ ಕೊಡುತ್ತೇನೆ ಕಿತ್ತೂರಿನಲ್ಲಿ ಮಿನಿ ವಿಧಾನಸೌಧ ಕಟ್ಟಿಸುತ್ತೇನೆ ತಹಶೀಲ್ದಾರ ಸೇರಿದಂತೆ ಎಲ್ಲ ರೀತಿಯ ಸೌಲತ್ತುಗಳನ್ನು ಕೊಡುತ್ತೇನೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಕಿತ್ತೂರಿಗೆ ಭರಪೂರ ಕೊಡುಗೆ ನೀಡುವ ಭರವಸೆ ನೀಡಿದ್ದಾರೆ
ವೀರ ರಾಣಿ ಕಿತ್ತೂರ ಚನ್ನಮ್ಮಾಜಿಯ ಉತ್ಸವಕ್ಕೆ ಚಾಲನೆ ನೀಡಿ ಕಿತ್ತೂರು ಹೋರಾಟದ ಪುಣ್ಯ ಭೂಮಿ ಈ ಭೂಮಿಗೆ ನನ್ನ ಸಾಷ್ಟಾಂಗ ನಮಸ್ಕಾರ ಹೇಳಿ ಮಾತು ಆರಂಭಿಸಿದ ಅವರು ಈ ನಿಮಿಷದಿಂದಲೇ ಕಿತ್ತೂರ ತಾಲೂಕಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ನಿಡುವ ಕೆಲಸ ಆರಂಭಿಸುತ್ತೇನೆ ತಿಂಗಳಲ್ಲಿ ಎಲ್ಲ ಪ್ರಕ್ರಿಯೆ ಮುಗಿಸುತ್ತೇನೆ ಎಂದು ತಿಮ್ಮಪ್ಪನವರು ಭರವಸೆ ನೀಡಿದರು
ಬಡವರಿಗೆ ತಿಂಗಳಲ್ಲಿ ಹಕ್ಕು ಪತ್ರ ದೊರಕಿಸಿಕೊಡುವ ಸಂಕಲ್ಪ ಮಾಡಿದ್ದೇನೆ ಅದನ್ನು ಮಾಡಿದ ನಂತರವೇ ನನ್ನ ಹೋರಾಟ ಸಫಲ ಆಗುತ್ತದೆ ಎಲ್ಲರಿಗೂ ಉದ್ಯೋಗ ಸಿಗಬೇಕು ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗಬೇಕು ಎಂದು ಸಚಿವ ಕಾಗೋಡು ತಿಮ್ಮಪ್ಪನವರು ಗದ್ಗಧಿತರಾಗಿ ಅಧಕಾರಿಗಳ ವಿರುದ್ಧ ಕಿಡಿಕಾರಿದರು
ಜಿಲ್ಲಾ ಉಸ್ತುವಾರಿ ಸಚಿವ ರನೇಶ ಜಾರಕಿಹೊಳಿ ಮಾತನಾಡಿ ಶೀಘ್ರದಲ್ಲಿಯೇ ಕಿತ್ತೂರ ಅಭಿವೃದ್ಧಿಗಾಗಿ ರೂಪರೇಷೆಗಳನ್ನು ಸಿದ್ಧಪಡಿಸಲು ಪ್ರಾಧಿಕಾರದ ಸಭೆ ನಡೆಸುತ್ತೇನೆ ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡುವದಿಲ್ಲ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸೋಣ ಎಂದರು