ಬೆಳಗಾವಿ-ವೀರ ರಾಣಿ ಕಿತ್ತೂರ ಚನ್ನಮ್ಮಾಜಿ ಐತಿಹಾಸಿಕ ಕಿತ್ತೂರು ಪೂರ್ಣ ಪ್ರಮಾಣದ ತಾಲೂಕು ಆಗುವ ಕಾಲ ಈಗ ಕೂಡಿ ಬಂದಿದೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಕಿತ್ತೂರ ಉತ್ಸವವನ್ನು ಊದ್ಘಾಟಿಸಲಿದ್ದು ಈ ಸಂಧರ್ಭದಲ್ಲಿ ಅವರು ಕಿತ್ತೂರ ತಾಲೂಕಿಗೆ ದಂಡಾಧಿಕಾರಿಯನ್ನು ನೇಮಕ ಮಾಡಿರುವ ಬಗ್ಗೆ ಅಧಿಕೃತವಾಗಿ ಘೋಷನೆ ಮಾಡಲಿದ್ದಾರೆ
ಕಿತ್ತೂರು ತಾಲೂಕ ಪ್ರದೇಶವಾಗಿ ಘೋಷಣೆಯಾಗಿ ಹಲವಾರು ವರ್ಷಗಳು ಗತಿಸಿ ಹೋಗಿವೆ ಆದರೆ ಕಿತ್ತೂರ ತಾಲೂಕಿನಲ್ಲಿ ಈ ವರೆಗೆ ವಿಶೇಷ ತಹಶಿಲ್ದಾರ ಅವರೇ ಕಾರ್ಯನಿರ್ವಹಿಸುತ್ತಿದ್ದಾರೆ ಕಿತ್ತೂರಿಗೆ ಹಲವಾರು ತಾಲೂಕಾ ಮಟ್ಟದ ಕಚೇರಿಗಳು ಮಂಜೂರಾಗಬೇಕಾಗಿದೆ ಅದಲ್ಲದೆ ಐತಿಹಾಸಿಕ ಚನ್ನಮ್ಮಾಜಿ ಕಿತ್ತೂರು ಪಟ್ಟಣದ ರಸ್ತೆಗಳು ಸುಧಾರಣೆ ಆಗಬೇಕಾಗಿದೆ ಜೊತೆಗೆ ಪಟ್ಟಣದಲ್ಲಿ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಡಲು ಸರ್ಕಾರ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕಾಗಿದೆ
ಸರ್ಕಾರ ಕಿತ್ತುರು ಉತ್ಸವ ಆಚರಣೆಗೆ ಪ್ರತಿ ವರ್ಷ ಒಂದು ಕೋಟಿ ರೂ ಅನುದಾನ ನೀಡಬೇಕು ಎನ್ನುವ ಬೇಡಿಕೆ ಇದೆ ಅದಕ್ಕಾಗಿ ಸರ್ಕಾರ ಪ್ರತಿ ವರ್ಷ ವಾರ್ಷಿಕ ಬಜೆಟ್ ನಲ್ಲಿಯೇ ಒಂದು ಕೋಟಿ ರೂಪಾಯಿ ಅನುದಾನ ಮೀಸಲಿಡುವ ಕಾರ್ಯ ಮಾಡಬೇಕಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ