ಬೆಳಗಾವಿ- ಬ್ರಿಟೀಷರ ವಿರುದ್ಧ ಬಂಡೆದ್ದು ಬ್ರಿಟಿಷ್ ಅಧಿಕಾರಿ ಥ್ಯಾಕರೆಯ ರುಂಡ ಚಂಡಾಡಿ ತಾಯ್ನೆಲದ ಸ್ವಾತಂತ್ರ್ಯ ಕ್ಕಾಗಿ ಪ್ರ ಫಥಮ ಸಂಗ್ರಾಮ ಮಾಡಿ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿ ಚುಕ್ಕೆ ಎನಿಸಿಕೊಂಡ ವೀರರಾಣಿ ಕಿತ್ತೂರ ಚನ್ನಮ್ಮನ ಉತ್ಸವಕ್ಕೆ ಈಗ. ಕೊಡಗಿನ ಪ್ರವಾಹದ ಕರಿನೆರಳು ಬಿದ್ದಿದೆ.
ಪ್ರತಿ ವರ್ಷ ಅಕ್ಟೋಬರ್ 23ರಿಂದ ಮೂರು ದಿನಗಳ ಕಾಲ ಕಿತ್ತೂರು ಉತ್ಸವ ಆಚರಿಸಲಾಗುತ್ತದೆ.ಉತ್ತರ ಕರ್ನಾಟಕದ ಪ್ರಮುಖ ಮತ್ತು ಏಕೈಕ ಉತ್ಸವವಾಗಿರುವ ಈ ಉತ್ಸವದ ಪೂರ್ವ ಭಾವಿ ಸಭೆ ನಡೆಯದೇ ಇರುವದು ಜಿಲ್ಲೆಯ ಜನರಲ್ಲಿ ನಿರಾಶೆ ಮೂಡಿಸಿದೆ.
ಸರ್ಕಾರ ಈ ಉತ್ಸವಕ್ಕೆ ಪ್ರತಿ ವರ್ಷ 30 ರಿಂದ ನಲವತ್ತು ಲಕ್ಷ ರೂಅನುದಾನ ಕೊಡುತ್ತದೆ ಈ ಅನುದಾನ ಅರ್ದದಷ್ಟು ಹಣ ಪೆಂಡಾಲ್ ಹಾಕಲು ಖರ್ಚಾಗುತ್ತದೆ.ಅಲ್ಪ ಅನುದಾನದಲ್ಲಿ ಆಚರಿಸಲ್ಪಡುವ ಈ ಉತ್ಸವದ ಸಿದ್ಧತೆ ಇನ್ನುವರೆಗೆ ಆರಂಭವಾಗಿಲ್ಲ ಜಿಲ್ಲಾಡಳಿತ ಪೂರ್ವಭಾವಿ ಸಭೆಯನ್ನು ನಡೆಸಿಲ್ಲ ಹೀಗಾಗಿ ಈ ಉತ್ಸವ ಈ ವರ್ಷ ನಡೆತುತ್ತದೆಯೋ ಇಲ್ಲವೋ ಎನ್ನುವ ಅನುಮಾನ ಜಿಲ್ಲೆಯ ಜನರನ್ನು ಕಾಡುತ್ತಿದೆ.
ಬೆಳಗಾವಿ ಜಿಲ್ಲೆಯಲ್ಲಿ ನಡೆದ ರಾಜಕೀಯ ಕಲಹ ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಅಲುಗಾಡಿಸಿ ಇಡೀ ರಾಜ್ಯದ ಗಮನ ಸೆಳೆದಿದ್ದ ಈ ಜಿಲ್ಲೆಯಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಕೆಡಿಪಿ ಸಭೆ ಕೂಡಾ ನಡೆಯದೇ ಇರುವದು ದುರ್ದೈವ
ಸರ್ಕಾರ ಮೈಸೂರಿನ ದಸರಾ ಉತ್ಸವಕ್ಕೆ ಪ್ರತಿವರ್ಷ 60 ಕೋಟಿಗೂ ಹೆಚ್ಚು ಹಣ ಖರ್ಚು ಮಾಡುತ್ತದೆ ಕಿತ್ತೂರ ಉತ್ಸವಕ್ಕೆ 30 ರಿಂದ 40 ಲಕ್ಷ ರೂ ಅನುದಾನ ಕೊಡಲು ಮೀನ ಮೇಷ ಮಾಡುತ್ತದೆ ಅಧಿಕಾರಿಗಳು ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗಳಿಂದ ಹಣ ಸಂಗ್ರಹಿಸಿ ಕಿತ್ತೂರ ಉತ್ಸವವನ್ನು ಮಾಡಿ ಮುಗಿಸುತ್ತಾರೆ
ಬೆಳಗಾವಿ ಜಿಲ್ಲೆಯ ಶಾಸಕರ ಒಗ್ಗಟ್ಟಿನ ಕೊರತೆ, ರಾಜ್ಯ ಸರ್ಕಾರದ ಮಲತಾಯಿ ಧೋರಣೆ,ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಕಿತ್ತೂರ ಉತ್ಸವಕ್ಕೆ ಖಗ್ರಾಸ್ ಗ್ರಹಣ ಹಿಡಿದಿದೆ.
ಬೆಳಗಾವಿ- ಬೆಳಗಾವಿ ಜಿಲ್ಲೆ 14 ,ತಾಲ್ಲೂಕು,18 ವಿಧಾಸಭೆ ಕ್ಷೇತ್ರಗಳನ್ನು ಹೊಂದಿರುವ ದೊಡ್ಡ ಜಿಲ್ಲೆಯಾಗಿದ್ದು ಸಮ್ಮಿಶ್ರ ಸರ್ಕಾರ ಬಂದಾಗಿನಿಂದ ಈ ಜಿಲ್ಲೆಯಲ್ಲಿ ಕೆಡಿಪಿ ಸಭೆ ನಡೆದಿಲ್ಲ,ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ರಾಜ್ಯ ರಾಜಕಾರಣದಲ್ಲಿ ರಾಜಕೀಯ ಕಲಹದಿಂದಾಗಿ ರಾಜ್ಯದ ಗಮನ ಸೆಳೆದಿದ್ದ ಈ ಜಿಲ್ಲೆ ಅಭಿವೃದ್ಧಿ ಕಾಣದೇ ಸೊರಗುತ್ತಿದೆ