ಬೆಳಗಾವಿ – ಕಿತ್ತೂರು ಉತ್ಸವದ ಅಂಗವಾಗಿ ಕ್ರಾಂತಿಯ ನೆಲ ಕಿತ್ತೂರಿನಲ್ಲಿ ಕುಸ್ತಿ ಕಾದಾಟ ಆರಂಛವಾಗಿದೆ ಗಟ್ಟಿ ಪೈಲವಾನರು ಕುಸ್ತಿ ಕಣದಲ್ಲಿ ಇಳಿದಿದ್ದು ಕುಸ್ತಿ ಕದನ ಜೋರಾಗಿ ನಡೆದಿದೆ
ಶಾಸಕ ಡಿಬಿ ಇನಾಮದಾರ ಅವರು ಕುಸ್ತಿ ಕಾದಾಟಕ್ಕೆ ಚಾಲನೆ ನೀಡಿದರು ಜಿಲ್ಲಾಧಿಕಾರಿ ಎನ್ ಜೈರಾಮ ಬೆಳಗಾವಿ ಪಾಲಿಕೆ ಆಯುಕ್ತ ಶಶಿಧರ ಕುರೇರ ಪ್ರೀತಂ ನರಸಲಾಪೂರೆ ಮೊದಲಾದವರು ಉಪಸ್ಥಿತರಿದ್ದರು
ಆರಂಭದಲ್ಲಿ ಬೆಳಗಾವಿ ಜಿಲ್ಲೆಯ ಪೈಲವಾನರು ಅಖಾಡಾದಲ್ಲಿ ತಮ್ಮ ಡಾವ್ ತೋರಿಸಿದರು ಇದಾದ ಬಳಿಕ ಪಂಜಾಬ್ ಗೌರವ ಸಿಂಗ್, ಕೊಲ್ಲಾಪುರದ ಬಾಲಾ ರಫೀಕ್ ನಡುವೆ ಕಾದಾಟ ನಡೆಯಲಿದೆ. ಇಚಲಕರಂಜಿಯ ಸಂದೀಪ ವಾಳಕುಂಚೆ ಮತ್ತು ಪಂಜಾಬ್ ಮೂಲದ ಅಮಿತ ಸರೋಹಾ ನಡುವೆ ಹಣಾಹಣಿ ನಡೆಯಲಿದ್ದು, ಬೆಳಗಾವಿಯ ಆನಂದ ಹೊಳೆಹಡಗಲಿ ಮತ್ತು ಮಹಾರಾಷ್ಟ್ರದ ವಿಕ್ರಮದ ಪಲೋಸ್ ಸೆಣಸಾಟ ನಡೆಸಲಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ಪಂಜಾಬ್ ಮೂಲದ ಆಸಿಮಾ ಮತ್ತು ಬೆಳಗಾವಿಯ ಅಂತಾರಾಷ್ಟ್ರೀಯ ಕುಸ್ತಿಪಟು ಐಶ್ವರ್ಯ ದಳವಿ ಅಎಣಸಾಟ ನಡೆಸಲಿದ್ದಾರೆ.
ಕುಸ್ತಿ ಕಾದಾಟ ನೋಡಲು ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆ ಹಾಗೂ ವಿವಿಧೆಡೆಯ ಲಕ್ಷೋಪಲಕ್ಷ ಜನ ಬಂದಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ