ಬೆಳಗಾವಿ-ಗರ್ಭಿಣಿ ಮಹಿಳೆಯಲ್ಲಿದ್ದ ಭ್ರೂಣದೊಳಗೆ ಮತ್ತೊಂದು ಭ್ರೂಣವು ಬೆಳೆಯುತ್ತಿರುವದನ್ನು ಗಮನಿಸಿದ ವೈದ್ಯರು ಹೆರಿಗೆ ನಂತರ, ನವಜಾತ ಶಿಶುವಿನ ಹೊಟ್ಟೆಯೊಳಗೆ ಬೆಳೆಯುತ್ತಿದ್ದ ಭ್ರೂಣವನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆಯುವಲ್ಲಿ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಚಿಕ್ಕಮಕ್ಕಳ ಶಸ್ತ್ರಚಿಕಿತ್ಸಕರು ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರದ ಚಂದಗಡದ 7 ತಿಂಗಳ ಗರ್ಭಿಣಿ ಮಹಿಳೆಯೋರ್ವಳನ್ನು ಗಡಹಿಂಗ್ಲಜನ ಡಾ. ಸಂಜಯ ಶಾನಬಾಗ ಅವರು ತಪಾಸಣೆಗೊಳ್ಪಡಿಸಿದಾಗ ಮೊದಲು ಚೀಲದಂತೆ ಕಂಡಿತು. ನಂತರ ಸಮಗ್ರವಾಗಿ ತಪಾಸಿಸಿದಾಗ ಭ್ರೂಣದೊಳಗೆ ಮತ್ತೊಂದು ಭ್ರೂಣವು ಬೆಳೆಯುತ್ತಿರುವದು ಕಂಡು ಬಂದಿತು. ವೈದ್ಯರು ನಿರಂತರವಾಗಿ ನಿಗಾದಲ್ಲಿಟ್ಟು 37 ವಾರಗಳ ನಂತರ ಮಹಿಳೆಯು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ನಂತರ ಮಗುವಿನ ಜೀವಕ್ಕೆ ತೊಂದರೆಯಾಗಬರದೆಂದು ಸ್ಥಳೀಯ ವೈದ್ಯರು ಬೆಳಗಾವಿಯ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರಕ್ಕೆ ಕಳಹಿಸಿಕೊಟ್ಟರು. ತಡಮಾಡದ ವೈದ್ಯರು 2 ದಿನದ ನವಜಾತ ಶಿಶುವನ್ನು ತಪಾಸಣೆಗೊಳ್ಪಡಿಸಿ ಶಸ್ತ್ರಚಿಕಿತ್ಸೆಯ ಮೂಲಕ ಹೊಟ್ಟೆಯೊಳಗಿರುವ ಭ್ರೂಣವನ್ನು ಹೊರತೆಗೆದಿದ್ದಾರೆ.
ಅವಳಿ ಆಮ್ನಿಯೋಟಿಕ್ ಚೀಲವು ಪ್ರಮುಖ ನಾಳಗಳಾದ ಐವಿಸಿ, ಬಲಬದಿಯ ಮೂತ್ರಪಿಂಡ ನಾಳ ಹಾಗೂ ಮಹಾಪಧಮನಿಯ ಮಧ್ಯದಲ್ಲಿ ಬೆಳೆಯುತ್ತಿತ್ತು. ಅತ್ಯಂತ ಕ್ಲಿಷ್ಟಕರವಾದ ಈ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿ ಮಗುವನ್ನು ಪ್ರಾಣಾಪಾಯದಿಂದ ಪಾರು ಮಾಡುವದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಗರ್ಭಧಾರಣೆಯ ಪ್ರಥಮದಲ್ಲಿ ಕೆಲವು ವಾರ ಇನ್ನೊಂದು ಭ್ರೂಣವು ಸುತ್ತುವರೆದು ಅದು ಮರೆಯಾಗುತ್ತದೆ. ನಂತರ ಈ ರೀತಿಯಾಗಬಹುದು. ಆದರೆ ಅವಳಿಯ ರಕ್ತ ಪೂರೈಕೆಯನ್ನು ಅವಲಂಬಿಸಿ ಭ್ರೂಣದ ಗಾತ್ರ ಹೆಚ್ಚುತ್ತಲಿರುತ್ತದೆ. ಸುಮಾರು 6 ಲಕ್ಷ ಗರ್ಭಿಣಿ ಮಹಿಳೆಯರ ಪೈಕಿ ಒಬ್ಬರಲ್ಲಿ ಭ್ರೂಣದೊಳಗೆ ಮತ್ತೊಂದು ಭ್ರೂಣವು ಬೆಳೆಯುವದು ಕಂಡು ಬರುತ್ತದೆ. ಆದರೆ ಇದಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ ಎಂದು ಚಿಕ್ಕಮಕ್ಕಳ ಶಸ್ತ್ರಚಿಕಿತ್ಸಕರಾದ ಡಾ. ಸ್ವಪ್ನಿಲ ಪಟ್ಟಣಶೆಟ್ಟಿ ಅವರು ಹೇಳುತ್ತಾರೆ.
ಶಸ್ತ್ರಚಿಕಿತ್ಸಕರಾದ ಡಾ. ಸ್ವಪ್ನಿಲ್ ಪಟ್ಟಣಶೆಟ್ಟಿ ಅವರಿಗೆ ಡಾ. ಸಕ್ಷಮ, ಅರಿವಳಿಕೆ ತಜ್ಞವೈದ್ಯರಾದ ಡಾ. ರಾಜೇಶ್ ಮಾನೆ ಮತ್ತು ಡಾ. ಪ್ರಿಯಾಂಕಾ ಗಾಡ್ವಿ ಅವರಿಗೆ ಶಸ್ತ್ರಚಿಕಿತ್ಸೆಗೆ ಸಹಕರಿಸಿದರು. ನಂತರ ತೀವ್ರ ನಿಗಾ ಘಟಕದಲ್ಲಿ ಡಾ. ಮನೀಷಾ ಭಂಡನಕರ ಹಾಗೂ ಡಾ. ರಾಮ್ ಭಟ್ ಅವರು ಆರೈಕೆ ಮಾಡಿದರು. ಮಗು ಈಗ ಚೇತರಿಸಿಕೊಂಡಿದೆ. ಮಹಾರಾಷ್ಟ್ರದ ಮಹಾತ್ಮಾ ಜ್ಯೋತಿರಾವ್ ಫುಲೆ ಜನ ಆರೋಗ್ಯ ಯೋಜನೆಯಡಿ ಶಸ್ತ್ರಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ನೆರವೇರಿಸಲಾಗಿದೆ.
ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡವನ್ನು ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್ ಎಂ ದಯಾನಂದ ಅಭಿನಂದಿಸಿದ್ದಾರೆ.
A woman from Medical Mystery: Baby Born With Twin Inside (Fetus in fetu)- Complex surgery done successfully has given birth to a baby girl who was found to have her twin fetus living inside her abdomen. The case is believed to be a rare instance of “fetus-in-fetu” seen 1 in 5-6 lakhs.
During an ultrasound done by Dr. Sanjay Shanbag (Gadhinglaj) in 28th week of the pregnancy, they noticed the baby appeared to have a cyst, but a closer inspection revealed it was actually a “fetus” that was inside the abdomen. Baby was delivered at 37 weeks and referred to KLEs Dr. Prabhakar Kore hospital for further surgical management.
Baby was operated on day 3 of life by Pediatric Surgeon, Dr. Swapnil Pattanshetti, assisted by Dr. Saksham. Twin amniotic cyst was located between major vessels IVC, Right Renal vessels and Aorta. Complex removal was done with fine dissection without rupturing Cyst and fetal parts. Anaesthesiologist Dr Rajesh Mane and Dr.Priyanka Gadvi administered general anaesthesia and also extubated the baby.Perioperatively baby was in NICU under care of Dr.Manisha Bhandankar and Dr. Ram Bhatt. Baby is recovering well after surgery.
It is not certain why fetus-in-fetu can arise; however, it’s believed to occur during the first few weeks of Diamniotic Monozygotic twin pregnancies after one fetus wraps around and envelops the other anomalous twin. The enveloped twin then becomes “parasitic” and relies on the blood supply of the “host” twin and keeps increasing in size.
The Chairman, Directors KLEs Society and Medical Director of KLEs Dr. Prabhakar Kore Hospital & MRC Belagavi , congratulated the entire team for this successful surgery.