ಬೆಳಗಾವಿ- ಗುರುವಾರ ಬೆಳಗಿನ ಜಾವ ಕೆಎಲ್ಇ ಸಂಸ್ಥೆಯ ಹದಿನೈದು ಸಾವಿರಕ್ಕೂ ಹೆಚ್ಚು ವಿಧ್ಯಾರ್ಥಿಗಳು ಬೆಳಗಾವಿ ನಗರಾದ್ಯಂತ ಕೈಯಲ್ಲಿ ಪೊರಕೆ ಹಿಡಿದು ಸ್ವಚ್ಛ ಬೆಳಗಾವಿ ಸುಂದರ ಬೆಳಗಾವಿ ಎಂದು ಘೋಷಣೆ ಕೂಗುತ್ತ ಸ್ವಚ್ಛತೆಯ ಬಗ್ಗೆ ಜನಜಾಗೃತಿ ಮೂಡಿಸುತ್ತ ಬೆಳಗಾವಿ ನಗರವನ್ನು ಸ್ವಚ್ಛ ಗೊಳಿಸಿ ತಮ್ಮ ಸಂಸ್ಥೆಯ ಶತಮಾನೋತ್ಸವ ಆಚರಿಸಿದರು
ಬೆಳಗಾವಿ ಬಸ್ ನಿಲ್ದಾಣ,ನ್ಯು ಗಾಂಧೀ ನಗರ, ಆಝಾಧ ನಗರ ,ಆಝಮ ನಗರ, ಶಾಹು ನಗರ , ಕಾಲೇಜು ರಸ್ತೆ, ರವಿವಾರ ಪೇಠೆ ಸೇರಿದಂತೆ ನಗರದ ಬಹುತೇಕ ಎಲ್ಲ ಪ್ರದೇಶಗಳಲ್ಲಿ ಕೆಎಲ್ಇ ಸಂಸ್ಥೆ ಹದಿನೈದು ಸಾವಿರಕ್ಕೂ ಹೆಚ್ಚು ವಿಧ್ಯಾರ್ಥಿಗಳು ಸ್ವಚ್ಛತಾ ಅಭಿಯಾನ ನಡೆಸಿ ಎಲ್ಲರ ಗಮನ ಸೆಳೆದರು
ಕೆಎಲ್ಇ ನಿರ್ದೇಶಕಿ ಪ್ರೀತಿ ದೊಡವಾಡ ಅಭಿಯಾನದ ಉಸ್ತುವಾರಿ ವಹಿಸಿಕೊಂಡಿದ್ದರು ಡಾ ಪ್ರಭಾಕರ ಕೋರೆ ಮಹಾಂತೇಶ ಕವಟಗಿಮಠ, ಸೇರುದಂತೆ ಕೆಎಲ್ಇ ಸಂಸ್ಥೆಯ ಎಲ್ಲ ನಿರ್ದೇಶಕರುಗಳು ವೈದ್ಯರು ಶಿಕ್ಷಕರು, ಹಾಗು ಕೆಎಲ್ಇ ಸಿಬ್ಭಂದಿಗಳು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು
ನಗರದ ಧರ್ಮವೀರ ಸಂಬಾಜಿ ವೃತ್ತದಲ್ಲಿ ಕೆಎಲ್ಇ ಸಂಸ್ಥೆಯ ವತಿಯಿಂದ ಪಾಲಿಕೆಯ ಪೌರ ಕಾರ್ಮಿಕರನ್ನು ಸತ್ಕರಿಸಿ ಗೌರವಿಸಲಾಯಿತು
ಪೆನ್ನು ಪುಸ್ತಕ ಹಿಡಿಯುವ ಕೈಗಳು ಕೈಯಲ್ಲಿ ಪೊರಕೆ ಹಿಡಿದು ನಗರದಲ್ಲಿ ಸ್ವಚ್ಛ ತಾ ಅಭಿಯಾನ ನಡೆಸುತ್ತಿರುವ ದನ್ನು ಗಮನಿಸಿದ ಸಾರ್ವಜನಿಕರು ಅಭಿಯಾನಕ್ಕೆ ಸಾಥ್ ನೀಡಿದರು
ಕೆಎಲ್ಇ ವಿಧ್ಯಾರ್ಥಿಗಳು ನಗರದಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡುಸಿದ್ದು ವಿಶೇಷವಾಗಿತ್ರು