ಬೆಳಗಾವಿ ಬೆಳಗಾವಿಯಲ್ಲಿ ಕೆಎಲ್ಇ ಶತಮಾನೋತ್ಸವ ಕಾರ್ಯಕ್ರಮ ಹಿನ್ನೆಲೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾದರು
ಚಪ್ಪಾಳೆ ಮೂಲಕ ಸಾವಿರಾರು ವಿದ್ಯಾರ್ಥಿಗಳಿಂದ ಪ್ರಧಾನಿ ಸ್ವಾಗತ
ಪ್ರಧಾನಿಯನ್ನು ಸ್ವಾಗತಿಸಿದ ಕೆಎಲ್ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ್ ಕೋರೆ,
ಕೇಂದ್ರ ಸಚಿವ ಅನಂತಕುಮಾರ್, ಸದಾನಂದಗೌಡ, ರಮೇಶ್ ಜಿಗಜಿಗಣಗಿ,
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಪ್ರಲ್ಹಾದ್ ಜೋಶಿ, ಸುರೇಶ ಅಂಗಡಿ ಭಾಗಿ
ಕೆಎಲ್ಇ ಶತಮಾನೋತ್ಸವ ಕಾರ್ಯಕ್ರಮಕ್ಕೆ ಮೋದಿ ಚಾಲನೆ ನೀಡಿದ ಬಳಿಕ ಮಾತನಾಡಿದರು
ಮೋದಿ ಮಾತು ಆರಂಭಿಸುತ್ತಿದ್ದಂತೆ ಕ್ರೀಡಾಂಗಣದಲ್ಲಿ ಶಿಳ್ಳೆ, ಚಪ್ಪಾಳೆ
ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ
ಬೆಳಗಾವಿಯ ಬಂಧು ಬಗಿಯನಿರೆಗೆ ನಮಸ್ಕಾರ ಎಂದ ನರೇಂದ್ರ ಮೋದಿ ಮಾತು ಆರಂಭಿಸಿದರು
ಆರಂಭದಲ್ಲಿ ಕೆಎಲ್ಇ ಸಂಸ್ಥೆ ನಿರ್ಮಾಣಕ್ಕೆ ಶ್ರಮಿಸಿದ ಸಪ್ತ ರುಷಿಗಳಿಗೆ ನಮನ ಸಲ್ಲಿದರು
100 ವರ್ಷಗಳ ನಂತರವು ಕೆಎಲ್ಇ ಶಿಕ್ಷಣ ಸಂಸ್ಥೆ ಕೀರ್ತಿಗಳಿಸಿದೆ
ಎಷ್ಟೋ ಜನರ ಶ್ರಮದಿಂದ ಕೆಎಲ್ಇ ಸಂಸ್ಥೆ ಹೆಮ್ಮರವಾಗಿ ಬೆಳೆದ ನಿಂತಿದೆ.
ದೇಶದಲ್ಲಿ ಶಿಕ್ಷಣದ ವ್ಯಾಪಾರಿಕರಣ ನಡೆಯುತ್ತಿದೆ
ಇಂತಹ ಜನರಿಗೆ ಸಪ್ತ ರುಷಿಗಳು ಮಾದರಿಯಾಗಬೇಕು
ರಾಜಕೀಯ ಪಕ್ಷ, ಕುಟುಂಬಗಳು ಸಹ ನೂರು ವರ್ಷ ನಡೆಯಲ್ಲ
ನೂರು ವರ್ಷಗಳಿಂದ ಪ್ರಗತಿ ಸಾಧಿಸುವುದು ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದರು
ನಾನು ನಿಮ್ಮಿಂದ ಇವತ್ತು ಎನ್ನನ್ನೋ ಕೇಳುತ್ತೇನೆ ಕೋಡುತ್ತಿರಾ ಎಂದು ಮೋದಿ ಕೇಳಿದರು
ಕೆಎಲ್ಇ 2020ರಲ್ಲಿ ನಡೆಯುವ ಒಲಂಪಿಕ್ ನಲ್ಲಿ ಚಿನ್ನದ ಪದಕ ತಂದು ಕೋಡಿ
ಕೆಎಲ್ಇ ವಿದ್ಯಾರ್ಥಿಗಳಿಂದ ಇದು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು
ದೇಶದಲ್ಲಿ 500, 1000 ಮುಖ ಬೆಲೆಯ ನೋಟು ನಿಷೇಧ ವಿಚಾರ
ಬೆಳಗಾವಿಯಲ್ಲಿ ವಿಷಯ ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ
ಕಪ್ಪು ಹಣ ಸಂಗ್ರಹಿಸಿದವರಿಗೆ 4 ಸಾವಿರಕ್ಕಾಗಿ ಕ್ಯೂ ನಲ್ಲಿ ನಿಲ್ಲಬೇಕಾದ ಸ್ಥಿತಿ ಬಂದಿದೆ
ನಮ್ಮ ಸರ್ಕಾರ ಪ್ರಮಾಣಿಕ ವ್ಯಕ್ತಿಗೆ ಯಾವುದೇ ತೊಂದರೆ ಕೊಡಲ್ಲ
ಅದೇ ರೀತಿ ಕಪ್ಪು ಹಣ ಸಂಗ್ರಹಿಸಿದ ವ್ಯಕ್ತಿಗಳನ್ನು ಬೀಡಲ್ಲ
500,1000ರೂಪಾಯಿ ನೋಟ್ ನಿಷೇಧ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಶ್ನೆ ಮಾಡುತ್ತಿದೆ
ಆದರೇ ಕಾಂಗ್ರೆಸ್ 25 ಪೈಸೆ ಚಲಾವಣೆ ಬಂದ ಮಾಡಿದ್ದ ಆಗ ನಾವೇನು ಕೇಳಲಿಲ್ಲ’
ಕಾಂಗ್ರೆಸ್ ಪಕ್ಷದ ಶಕ್ತಿ ಅಷ್ಟೇ ಇತ್ತು
ನಾನು ದೇಶದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ
ದೇಶದಲ್ಲಿ ಪ್ರಮಾಣಿಕರ ರಕ್ಷಣೆ ಆಗಬೇಕಿದೆ. ಇದಕ್ಕೆ ನಾನು ಬದ್ಧ
ಕಪ್ಪು ಹಣ ಹೊರ ತೆಗೆಯಲು 50 ದಿನಗಳ ತೊಂದರೆ ಸಹಿಸಬೇಕು
ಬೆಳಗಾವಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಲ್ಲಿ ಮನವಿ ಮಾಡಿಕೊಂಡರು
ನ.8ಕ್ಕೆ ದೇಶದ ಪ್ರಮಾಣಿಕ ವ್ಯಕ್ತಿ ಸುಖ ನಿದ್ರೆ ಮಾಡಿದ್ದಾನೆ
ಆದರೇ ಶ್ರೀಮಂತರು ನಿದ್ದೆ ಮಾತ್ರೆ ಖರಿಸಲು ಪೇಠೆಗೆ ಹೋದರೂ ಸಾಧ್ಯವಾಗಲಿಲ್ಲ ಎರಡು ವರ್ಷದ ಹಿಂದೇಯೇ ನಾನು ಯೋಜನೆ ರೂಪಿಸಿದ್ದೆ ಬಡವರಿಗಾಗಿ ಜನಧನ ಖಾತೆಗಳನ್ನು ತೆರೆದಿದ್ದೆ ನೋಟುಗಳನ್ನು ರದ್ದು ಮಾಡುವ ವಿಷಯವನ್ನು ನಿಗೂಢ ವಾಗಿ ನಡೆಸಿದ್ದೆ ಎಂದರು
ದೇಶ ಭ್ರಷ್ಟಾಚಾರದ ವ್ಯವಸ್ಥೆಯಿಂದ ಬೇಸತ್ತು ಹೋಗಿದೆ
ತೊಂದರೆ ಆಗಲಿದೆ ಆದರೇ ಇದರಿಂದ ಜನರಿಗೆ ಹೆಚ್ಚಿನ ಲಾಭವಾಗಲಿದೆ
ದೇಶವನ್ನು 60 ವರ್ಷಗಳಿಂದ ಲೂಟಿ ಮಾಡಲಾಗಿದೆ.
ನನಗೆ 60 ತಿಂಗಳ ಅಧಿಕಾರ ಕೋಡಿ ದೇಶ ಸ್ವಚ್ಛ ಮಾಡುತ್ತೇನೆ
ಮೋದಿ ಎನು ಮಾಡಿದ್ರು ಎಂಬು ತಿಳಿಯಲು ಟಿವಿ ನೋಡಿ
ಪ್ರತಿಪಕ್ಷಗಳಿಗೆ ಪರೋಕ್ಷವಾಗಿ ಟಾಂಕ್ ನೀಡಿದ ಪ್ರಧಾನಿ ನರೇಂದ್ರ ಮೋದಿ
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾತನಾಡಿ ಕೆಎಲ್ಇ ಸಂಸ್ಥೆ ಕಳೆದ ನೂರು ವರ್ಷಗಳಿಂದ ಸಾಮಾಜಿಕ ಸೇವೆ ಮಾಡುತ್ತಿದೆ ಭಾರತದದ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಮಟ್ಟದಲ್ಲಿ ಸಂಚರಿಸಿ ಸದೃಡ ಭಾರತ ನಿರ್ಮಾಣದ ಸಂಕಲ್ಪ ಮಾಡಿರುವ ಅವರು ೫೦೦ ಹಾಗು ೧೦೦೦ ಸಾವಿರ ನೋಟುಗಳನ್ನು ರದ್ದು ಮಾಡಿ ಪಾಕಿಸ್ತಾನ ಹಾಗು ಬಂಗ್ಲಾದಿಂದ ಬರುವ ಖೋಟಾ ನೋಟುಗಳ ಆಕ್ರಮ ಸಾಗಾಣಿಕೆಗೆ ಕಡಿವಾಣ ಹಾಕಿದ್ದಾರೆ ಎಂದರು
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೇಂದ್ರ ಮಂತ್ರಿಗಳಾದ ಅನಂತ ಕುಮಾರ ಸದಾನಂದ ಗೌಡ ಜಗದೀಶ ಶೆಟ್ಟರ ಪ್ರಲ್ಹಾದ ಜೋಶಿ ರಮೇಶ ಜಿಗಜಿಣಗಿ ಸುರೇಶ ಅಂಗಡಿ ಶಿವಾನಂದ ಕೌಜಲಗಿ ಕೆಎಲ್ಇ ದಿಗ್ಗಜ ಪ್ರಭಾಕರ ಕೋರೆ ಮೊದಲಾದವರು ಉಪಸ್ಥಿತರಿದ್ದರು