ಬೆಳಗಾವಿ- ನಗರದಲ್ಲಿ ಶನಿವಾರ ಸಂಜೆ ಲೇಲೇ ಮೈದಾನದಲ್ಲಿ ಕೆಎಲ್ಇ ಸಂಸ್ಥೆಯ ಶತಮಾನದ ಜ್ಯೋತಿ ಬೆಳಗಿತು ಹಾಲಿ ಮಾಜಿ ವಿಧ್ಯಾರ್ಥಿಗಳ ಸಂಗಮದಲ್ಲಿ ಕೆಎಲ್ಇ ಸಂಸ್ಥೆಯ ಸ್ವಾಭಿಮಾನದ ಕಹಳೆ ಮೊಳಗಿತು
ಶತಮಾನೋತ್ಸವದ ಸ್ವಾಭಿಮಾನದ ಜಾಥಾಗೆ ಭಾರತೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಅನುರಾಗ ಠಾಖೂರ ಜಾಥಾಗೆ ಚಾಲನೆ ನೀಡಿದರು ಈ ಸಂಧರ್ಭದಲ್ಲಿ ಮಾತನಾಡಿ ಭಾರತದಲ್ಲಿ ಇರುವಷ್ಟು ಯುವ ಶಕ್ತಿ ಜಗತ್ತಿನ ಯಾವ ರಾಷ್ಟ್ರದಲ್ಲಿಯೂ ಇಲ್ಲ ಪ್ರಧಾನಿ ನರೇಂದ್ರ ಮೋದಿ ಅವರು ಕಾಲ ಕಾಲಕ್ಕೆ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವದರ ಮೂಲಕ ಯುವ ಜನಾಂಗದ ಉಜ್ವಲ ಭವಿಷ್ಯ ರೂಪಿಸುವ ಸಂಕಲ್ಪ ಮಾಡಿದ್ದು ಅದಕ್ಕಾಗಿ ಹಗಲಿರಳು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು
ದೇಶದ ಆರ್ಥಿಕ ನೀತಿ ಸುಧಾರಿಸಲು ಹಾಗು ಕಪ್ಪ ಹಣ ನಿಯಂತ್ರಿಸಲು ೫೦೦, ೧೦೦೦ ಮುಖಬೆಲೆ ನೋಟುಗಳ ಬದಲಾವಣೆ ಅನಿವಾರ್ಯವಾತ್ತು.
ಈ ನಿರ್ಣಯದಿಂದ ವಿದೇಶಿ ವಿನಿಮಯ ಹೇಚ್ಚಳಿದೆ.
ಭಾರತ ದೇಶದ ಶಕ್ತಿ ಯುವಕರು. ಎಂದು ಠಾಖೂರ ಅಭಿಪ್ರಾಯಪಟ್ಟರು
ಹಿರಿಯ ಸಾಹಿತಿ ನಾಡೋಜ ಚನ್ನವೀರ ಕಣವಿ ಅವರು ಶತಮಾನೋತ್ಸವದ ಜ್ಯೋತಿಯನ್ನು ಬೆಳಗಿಸಿದರು ಸಾವಿರಾರು ಜನ ಹಾಲಿ ಮಾಜಿ ವಿದ್ಯಾರ್ಥಿಗಳು ಇದಕ್ಜೆ ಸಾಕ್ಷಿಯಾದರು