ಬೆಳಗಾವಿ- ಕೆಎಲ್ಇ ಇಂಜನಿಯರಿಂಗ್ ಕಾಲೇಜಿನ ಕನ್ನಡ ಬಳಗ ಸದ್ದಿಲ್ಲದೇ ಕನ್ನಡದ ಕಾಯಕ ಮಾಡುತ್ತಿದೆ ಈ ಕನ್ನಡದ ಹುಡುಗರು ಕನ್ನಡದ ಸಂಬ್ರಮದಲ್ಲಿ ಪಾಲ್ಗೊಂಡು ಕನ್ನಡ ನೆಲ ಜಲ ಭಾಷೆಯ ರಕ್ಷಣೆಯಲ್ಲಿ ಕೈ ಜೋಡಿಸುತ್ತಲೇ ಬಂದಿದ್ದಾರೆ
ಇಂದಿನ ಯುವ ಪೀಳಿಗೆಗೆ ಕನ್ನಡದ ಇತಿಹಾಸ ಕನ್ನಡ ಸಂಸ್ಕೃತಿ ಇಲ್ಲಿಯ ಇತಿಹಾಸದ ಗತವೈಭವ ಗೊತ್ತಾಗಬೇಕು ಅದೇ ಅವರಿಗೆ ಸ್ಪೂರ್ತಿ ನೀಡಬೇಕು ಎನ್ನುವ ಉದ್ದೇಶದಿಂದ ಈ. ಹುಡುಗರು ನಾಳೆ ಶುಕ್ರವಾರ ಕೆಎಲ್ಇ ಇಂಜನಿಯರಿಂಗ್ ಕಾಲೇಜಿನಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಚಿತ್ರ ಪ್ರದರ್ಶನ ಮಾಡಲು ನಿರ್ಧರಿಸಿರುವದು ಪ್ರಶಂಸಾರ್ಹ ಸಂಗತಿಯಾಗಿದೆ
ಕನ್ನಡ ಭಾಷಾಭಿಮಾನ ಬೆಳೆಯಬೇಕು ಕನ್ನಡ ನೆಲ ಜಲ ಭಾಷೆಯ ವಿಷಯದಲ್ಲಿ ಯುವ ಸಮುದಾಯ ಪಾಲ್ಗೊಳ್ಳಬೇಕು ಅವರಿಗೆ ನಮ್ಮ ಹೆಮ್ಮೆಯ ನಾಡಿನ ಇತಿಹಾಸ ತಿಳಿಸಬೇಕು ಎನ್ನುವ ಉದ್ದೇಶ ಇಟ್ಕೊಂಡು ಕಾಲೇಜಿನಲ್ಲಿ ಶೂರ ರಾಯಣ್ಣನ ಚಿತ್ರ ಪ್ರದರ್ಶನ ಮಾಡಲು ಹೊರಟಿದ್ದು ಪ್ರತಯೊಬ್ಬ ಕನ್ನಡಿಗ ಮೆಚ್ಚಲೇಬೇಕು
ಈ ಕನ್ನಡ ಹುಡುಗರ ಕನ್ನಡದ ಸೇವೆಗೊಂದು ಬೆಳಗಾವಿ ಸುದ್ಧಿ ಡಾಟ್ ಕಾಮ್ ಬಳಗದ ಸಲಾಂ ಜೈ ತಾಯಿ ಭುವನೇಶ್ವರಿ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ