ಬೆಳಗಾವಿ-
ಬೆಳಗಾವಿಯ ಕೆಎಲ್ಇ ಸಂಸ್ಥೆ ಶಿಕ್ಷಣದ ಗುಣಮಟ್ಟದಿಂದ ಜಾಗತಿಕ ಮಟ್ಟದಲ್ಲಿಯೇ ಫೇಮಸ್ ಆಗಿದೆ ಈಗ ಸ್ವಚ್ಛತೆ ಯಲ್ಲಿಯೂ ಬೆಳಗಾವಿಯ ಕೆಲ್ಇ ಯುನಿವರ್ಸಿಟಿಯ ಕ್ಯಾಂಪಸ್ ದಕ್ಷಿಣ ಭಾರತದಲ್ಲಿ ನಂಬರ್ ಒನ್ ಸ್ಥಾನ ಗಿಟ್ಟಿಸಿಕೊಂಡರೇ ಭಾರತದಲ್ಲಿಯೇ ನಾಲ್ಕನೇಯ ಸ್ಥಾನ ಪಡೆದುಕೊಳ್ಳುವ ಮೂಲಕ ನಾಡಿನ ಕೀರ್ತಿಯನ್ನು ಬೆಳಗಿದೆ
ಭಾರತ ಸರ್ಕಾರ ಸ್ವಚ್ಛತಾ ಅಭಿಯಾನ ದಡಿಯಲ್ಲಿ ದೇಶದ ಕಾಲೇಜು ಹಾಗು ಯುನಿವರ್ಸಿಟಿಗಳಿಂದ ಅರ್ಜಿಗಳನ್ನು ಅಹ್ವಾನಿಸಿತ್ತು ದೇಶದ ಮೂರು ಸಾವಿರಕ್ಕೂ ಹೆಚ್ವು ಕಾಲೇಜು ಹಾಗು ಯುನಿವರ್ಸಿಟಿ ಗಳು ಅರ್ಜಿ ಸಲ್ಲಿಸಿದ್ದವು ಈ ಅರ್ಜಿಗಳನ್ನು ಪರಿಷ್ಕರಿಸಿದ ಕೇಂದ್ರ ಸರ್ಕಾರದ ತಜ್ಞರ ಸಮೀತಿ 174 ಸಂಸ್ಥೆಗಳನ್ನು ಗುರುತಿಸಿ ಪಟ್ಟಿ ತಯಾರಿಸಿ ತಜ್ಞರ ಸಮೀತಿ 174 ಕಾಲೇಜು ಹಾಗು ಯುನಿವರ್ಸಿಟಿಗಳ ಕ್ಯಾಂಪಸ್ ಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಕ್ಯಾಂಪಸ್ ಗಳಲ್ಲಿರುವ ಸ್ವಚ್ಛತೆ, ಹಾಸ್ಟೇಲ್ ಗಳಲ್ಲಿರುವ ವ್ಯೆವಸ್ಥೆಗಳನ್ನು ಪರಶೀಲನೆ ಮಾಡಿತ್ತು
ಸ್ವಚ್ಛತೆಯ ವಿಷಯದಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ದೆಯಲ್ಲಿ ಬೆಳಗಾವಿಯ ಕೆಎಲ್ಇ ಯುನಿವರ್ಸಿಟಿ ಗೌರವಕ್ಕೆ ಭಾಜನವಾಗಿದೆ ಇತ್ತೀಚಿಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಎಲ್ಇ ಸಂಸ್ಥೆಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ
ಪತ್ರಿಕಾಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದ ಸಂಸ್ಥೆಯ ಕಾರ್ಯಾಧ್ಯಕ್ಷ ಜನ ಪ್ರಭಾಕರ ಕೋರೆ ಕೆಲ್ಇ ಯುನಿವರ್ಸಿಟಿಯ ಕ್ಯಾಂಪಸ್ ದೇಶದಲ್ಲಿಯೇ ನಾಲ್ಕನೇಯ ಸ್ಥಾನ ಪಡೆದಿರುವದು ಹೆಮ್ಮೆಯ ಸಂಗತಿ,ಪ್ರಶಸ್ತಿ ಬರಬಹುದು ಸಂಸ್ಥೆ ದೇಶದಲ್ಲಿ ಸ್ವಚ್ಛತೆ ಯಲ್ಲಿಯೂ ಸ್ಥಾನ ಗಿಟ್ಟಿಸಿಕೊಳ್ಳಬಹುದು ಎಂದು ನೀರೀಕ್ಷೆ ಮಾಡಿರಲಿಲ್ಲ ಪ್ರಶಸ್ತಿ ಸಿಕ್ಕಿರುವದಕ್ಕೇ ಅತೀವ ಸಂತೋಷವಾಗಿದೆ ಎಂದು ಕೋರೆ ಹೇಳಿದರು
ವಿಧ್ಯಾರ್ಥಿಗಳಲ್ಲಿ ಸ್ವಚ್ಛತೆ ಕುರಿತು ಅರಿವು ಮೂಡಿಸಲು ಕೆಎಲ್ಇ ಸಂಸ್ಥೆಯ ಎಲ್ಲ ಕಾಲೇಜು ಕ್ಯಾಂಪಸ್ ಗಳ ನಡುವೆ ಸ್ಪರ್ದೆ ಏರ್ಪಡಿಸುತ್ತೇವೆ ಕೇಂದ್ರ ಸರ್ಕಾರ ನಡೆಸಿದ ಮಾದರಿಯಲ್ಲಿಯೇ ಸ್ಪರ್ಧೆ ನಡೆಯುತ್ತದೆ ಎಂದು ಕೋರೆ ತಿಳಿಸಿದರು
ಕ್ಯಾಂಪಸ್ ಸ್ವಚ್ಛತೆ, ಹಸರೀಕರಣ ಅಡುಗೆ ಕೋಣೆಯ ಸ್ವಚ್ಛತೆ, ಡ್ರಿನೇಜ್ ಸಿಸ್ಟಂ ತ್ಯಾಜ್ಯ ವಿಲೇವಾರಿ ಹಾಸ್ಟೇಲ್ ಗಳ ಸ್ವಚಛತೆ,ನೀರಿನ ಲಭ್ಯತೆ,ವಿದ್ಯಾರ್ಥಿಗಳಲ್ಲಿ ಇರುವ ಸ್ವಚ್ಛತೆಯ ಬಗ್ಗೆ ಇರುವ ಪ್ರಜ್ಞೆ ಇವೆಲ್ಲ ಮಾನದಂಡಗಳನ್ನು ಅನುಸರಿಸಿ ಕೇಂದ್ರ ಸರ್ಕಾರ ಬೆಳಗಾವಿಯ ಕೆಎಲ್ಇ ಯುನಿವರ್ಸಿಟಿಯ ಕ್ಯಾಂಪಸ್ ಗೆ ಭಾರತದಲ್ಲಿ ನಾಲ್ಕನೇಯ ಸ್ಥಾನ ದಕ್ಷಿಣ ಭಾರತದಲ್ಲಿಯೇ ಮೊಲನೇಯ ಸ್ಥಾನ ನೀಡಿ ಗೌರವಿಸಿದೆ