ಬೆಳಗಾವಿಯ ಎಂ.ಕೆ. ಹುಬ್ಬಳ್ಳಿಗೆ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ ಭೇಟಿ ನೀಡಿದರು
ಶ್ರೀರಾಮ ವಿದ್ಯಾಸಂಸ್ಥೆಯ ಅನ್ನಪ್ರದಾಸಕ್ಕಾಗಿ ರಾಜ್ಯಾದ್ಯಂತ ದೇಣಿಗೆ ಸಂಗ್ರಹ ಕಾರ್ಯ ಆರಂಭಿಸಿದೆ
ರಾಜ್ಯ ಸರ್ಕಾರ ಏಕಾಏಕಿ ನಮ್ಮ ಸಂಸ್ಥೆಗೆ ನೀಡುತ್ತಿದ್ದ ಅನುದಾನ ನಿಲ್ಲಿಸಿದೆ. ರಾಜ್ಯ ಸರ್ಕಾರ ಧ್ವೇಷ ರಾಜಕೀಯ ಮಾಡುತ್ತಿದೆ. ಕಲ್ಲಡ್ಕ ಪ್ರಭಾಕರ ಭಟ್ ಆರೋಪಿಸಿದರು
ಮಕ್ಕಳ ಅನ್ನ ಪ್ರಸಾದಕ್ಕಾಗಿ ಇದೀಗ ರಾಜ್ಯಾದ್ಯಂತ ದೇಣಿಗೆ ಸಂಗ್ರಹ ಮಾಡಲಾಗುತ್ತಿದೆ ಅಹಿಂದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಿದ್ದಾರೆ. ಏಕಾಏಕಿ ಭೋಜನ ವ್ಯವಸ್ಥೆ ನಿಲ್ಲಿಸಲಾಗಿದೆ. ಸರ್ಕಾರ ನೂರಕ್ಕೆ ನೂರು ದ್ವೇಷ ರಾಜಕಾರಣ ಮಾಡುತ್ತಿದೆ.
ಮದರಸಾ, ಮಸೀದ ನಡೆಸಲು ವಕ್ಫ ಸಂಸ್ಥೆ ಇದೆ. ಹಿಂದುಗಳ ದೇವಾಲಯ ನಡೆಸಲು ಮುಜರಾಯಿ ಇಲಾಖೆ ಯಾಕೆ. ಸರ್ಕಾರ ಇಲಾಖೆಯಲ್ಲಿ ಕೈ ಹಾಕೋದು ಯಾಕೆ. ಹಿಂದು ದೇವಸ್ಥಾನ ನಡೆಸಲು ಹಿಂದು ಬೋರ್ಡ್ ರಚನೆ ಮಾಡಿ. ಧಾರ್ಮಿಕ ಚಟುವಟಿಕೆಯಲ್ಲಿ ರಾಜಕೀಯ ಏಕೆ ಪ್ರವೇಶವಾಗುತ್ತಿದೆ ಎಂದು ಆಕ್ರೋಶ ವ್ಯೆಕ್ತಪಡಿಸಿದ ಅವರು ರಾಜಕೀಯದಲ್ಲಿ ಧರ್ಮ ಇರಬೇಕು. ಹಿಂದುಗಳ ಮೇಲೆ ವಿಶ್ವಾಸವಿಟ್ಟು ಬೋರ್ಡ್ ರಚನೆ ಮಾಡಿ. ಎಂದು ಅವರು ಒತ್ತಾಯ ಮಾಡಿದರು
ಹಿಂದೂಗಳನ್ನು ಸರ್ಕಾರ ನಿಕ್ರುಷ್ಟವಾಗಿ ನೋಡಲಾಗಿತ್ತಿದೆ. ಕಳೆದ ೭೦ ವರ್ಷಗಳಿಂದ ಹಿಂದು ಮೇಲೆ ಡೋಂಬಿ ಸಮಾಜವಾದ ಹೆಸರಲ್ಲಿ ಅನ್ಯಾಯ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತ ತುಷ್ಟಿಕರಣ ಮಾಡುತ್ತಿದೆ. ಎಂ.ಎಂ. ಕಲಬುರಗಿ, ಗೌರಿ ಲಂಕೇಶ್ ಹತ್ಯೆಯನ್ನು ನಾವು ಖಂಡಿಸಿದ್ದೇವೆ. ಆದರೆ ಹಿಂದು ಸಂಘಟನೆಗಳ ಮೇಲೆ ಬೆಟ್ಟು ಮಾಡುವುದು ಅಕ್ಷಮ್ಯ ಅಪರಾಧ. ಹಿಂದುಗಳ ಕಾರ್ಯ ಮಾಡಲು ಇನ್ನೂ ನೂರಾರು ಸಂಘಟನೆಯ ಅವಶ್ಯಕತೆ ಇದೆ ಎಂದು
ಬ ಎಂ.ಕೆ. ಹುಬ್ಬಳ್ಳಿಯಲ್ಲಿ ಕಲ್ಲಡ್ಕ ಪ್ರಭಾಕರ ಭಟ ಹೇಳಿದರು
Check Also
ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??
ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …