ಕೊಲ್ಹಾಪೂರ– ಮಾವನ ಕಡೆಯಿಂದ ಹಟ ಮಾಡಿ, ನೀರಿನ ಟ್ಯಾಂಕ್ ವರದಕ್ಷಣೆ ರೂಪದಲ್ಲಿ ಪಡೆದು ಈ ನೀರಿನ ಟ್ಯಾಂಕ್ ಸಮೇತ ಮೆರವಣಿಗೆ ಮಾಡಿದ,ನವದಂಪತಿಗಳು,
ನೀರಿನ ಸಮಸ್ಯೆ ಬಗೆಯರಿಯುವ ತನಕ ಹನಿಮೂನಗೆ ಹೋಗಲ್ಲ.ಎಂದು ಮಹಾನಗರ ಪಾಲಿಕೆಗೆ ಸವಾಲು ಹಾಕಿದ ಘಟನೆ ಪಕ್ಕದ ಕೊಲ್ಹಾಪೂರದಲ್ಲಿ ನಡೆದಿದೆ.
ನವ ದಂಪತಿಗಳು ಮದುವೆ ಮುಗಿದ ಬಳಿಕ, ಮೆರವಣಿಗೆ ನಡೆಸಿ, ಟ್ಯಾಂಕ್ ಮೇಲೆ , ನೀರಿನ ಸಮಸ್ಯೆ ಬಗೆ ಹರೆಯುವವರೆಗೂ ಹನಿಮೂನ್ ಮಾಡೋಲ್ಲ ಎಂದು ಬರೆದು, ಕೊಲ್ಹಾಪೂರ ಅಷ್ಟೆ ಅಲ್ಲ ಈ ನವದಂಪತಿ ಈಗ ರಾಷ್ಟ್ರದ ಗಮನ ಸೆಳೆದಿದ್ದಾರೆ.
ಈ ನವದಂಪತಿ ಮದುವೆಯಲ್ಲಿ ವರದಕ್ಷಿಣೆ ರೂಪದಲ್ಲಿ ನೀರಿನ ಟ್ಯಾಂಕ್ ಪಡೆದು ಈ ರೀತಿಯಾಗಿ ಪ್ರತಿಭಟಿಸಿದ ಘಟನೆ,ಮಹಾರಾಷ್ಟ್ರ ಕೊಲ್ಹಾಪುರದಲ್ಲಿ ನಡೆದಿದೆನೀರಿನ ಟ್ಯಾಂಕರ್ ಜೊತೆಗೆ ಅದ್ಧೂರಿ ಮೆರವಣಿಗೆ ನಡೆಸಿದ ನವದಂಪತಿ ಗಳುವಿಶಾಲ, ಮತ್ತು ಅಪರ್ಣಾ ನಿನ್ನೆ ಮದುವೆಯಾಗಿದ್ದರು.
ಮಹಾನಗರ ಪಾಲಿಕೆ ವಿರುದ್ಧ ಮದುವೆ ಸಂದರ್ಭದಲ್ಲಿ ಆಕ್ರೋಶ ವ್ಯಕ್ತ ಪಡಿಸಿದ ನವದಂಪತಿಗಳು ಪಾಲಿಕೆ ಅಧಿಕಾರಿಗಳ ಚಳಿ ಬಿಡಿಸಿದ್ದಾರೆ.ಮಂಗಳವಾರ ಪೇಠೆ ಬಡಾವಣೆಯಲ್ಲಿ ನೀರಿನ ಸಮಸ್ಯೆ ಇತ್ತು.
ಕಳೆದ ಆರು ತಿಂಗಳಿಂದ ಸರಿಯಾಗಿ ನೀರು ಸಿಗದ ಕಾರಣ ಇಲ್ಲಿಯ ಜನರು ಪರದಾಡುತ್ತಿದ್ದರು.ಇದೇ ಬಡಾವಣೆಯ ನಿವಾಸಿಯಾದ ಮಧುಮಗ ಮಾವನಿಗೆ ಮದುವೆ ಸಂದರ್ಭದಲ್ಲಿ ನೀರಿನ ಟ್ಯಾಂಕ್ ಕೊಡಿ ಎಂದು ಬೇಡಿಕೆ ಇಟ್ಟಿದ್ದ.ಅಳಿಯನ ಬೇಡಿಕೆಯಂತೆ ನೀರಿನ ಟ್ಯಾಂಕ್ ಮಾವ ಅಳಿಯನಿಗೆ ಗಿಫ್ಟ್ ಕೊಟ್ಟಿದ್ದ.