ಬೆಳಗಾವಿ- ಮಹಾರಾಷ್ಟ್ರದ ವಾರಣಾ ಜಲಾಶಯದ ಪ್ರದೇಶದಲ್ಲಿ ಸೌಮ್ಯ ಭೂಕಂಪವಾಗಿದ್ದು ಕೃಷ್ಣಾ ನದಿ ತೀರದಲ್ಲಿ ಆತಂಕ ಶುರುವಾಗಿದೆ
ವಾರಣಾ ಜಲಾಶಯದಿಂದ ಮೂವತ್ತು ಕಿಮಿ ಅಂತರದಲ್ಲಿರುವ ಚಿಕಲೆ ಗ್ರಾಮದಲ್ಲಿ ,3.1 ರಿಕ್ಟೇರ್ ಸ್ಕೇಲೆ ಭೂಕಂಪನವಾದ ಕುರಿರು ರಿಕ್ಟರ್ ಮಾಪನದಲ್ಲಿ ದಾಖಲಾಗಿದೆ.
ವಾರಣಾ ಪ್ರದೇಶದಲ್ಲಿ ಪ್ರತಿ ವರ್ಷ ಸೌಮ್ಯ ಪ್ರಮಾಣದ ಭೂಕಂಪ ಆಗುತ್ತದೆ ಆದ್ರೆ ಇದಕ್ಕೆ ಆತಂಕ ಪಡುವ ಅಗತ್ಯವಿಲ್ಲ ಎಂದು ಮಹಾರಾಷ್ಟ್ರದ ಜಲತತಜ್ಞರು ಮರಾಠಿ ದೃಶ್ಯ ಮಾದ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ.
ಕೋಯ್ನಾ ಮತ್ತು ವಾರಣಾ ಜಲಾಶಯಗಳು ಭರ್ತಿಯಾಗುವ ಹೊಸ್ತಿಲಲ್ಲಿದ್ದು ಇಂದು ಸಂಭವಿಸಿದ ಭೂಕಂಪನದಿಂದಾಗಿ ಈ ಎರಡೂ ಜಲಾಶಯಗಳಿಂದ ನೀರು ಹರಿದುಬಿಟ್ಟಲ್ಲಿ,ಕೃಷ್ಣೆಗೆ ಮತ್ತೆ ಮಹಾಪೂರ ಬರುವ ಸಾದ್ಯತೆಗಳಿವೆ.