Breaking News

ಗರೀಬಿ ಹಠಾವೋ ಪಕ್ಷದ,ಟಿಕೆಟ್ ಗೆ ಅರ್ಜಿ ಹಾಕಲು ಎರಡು ಲಕ್ಷ ಕೊಡಬೇಕ್ರೀ ಯಪ್ಪಾ…!!

(ಮೆಹಬೂಬ ಮಕಾನದಾರ)

ಬೆಳಗಾವಿ- ನಾನು ಚಿಕ್ಕವನಿದ್ದಾಗ,ಕಾಂಗ್ರೆಸ್ ಪಕ್ಷ ಬಡವರ ಪಕ್ಷ ಎಂದು ಪ್ರಚಾರ ಮಾಡಿದ್ದನ್ನು ಕೇಳಿದ್ದೆ,ಆದ್ರೆ ಈ ಪಕ್ಷ ಈಗ ಬಡವರ ಪಕ್ಷವಾಗಿ ಉಳಿದಿಲ್ಲ ಯಾಕಂದ್ರೆ ಒಬ್ಬ ಪ್ರಾಮಾಣಿಕ,ಬಡ ಕಾಂಗ್ರೆಸ್ ಕಾರ್ಯಕರ್ತ ಕಾಂಗ್ರೆಸ್ ಟಿಕೆಟ್ ಹಾಕಲು ಈ ಪಕ್ಷದಲ್ಲಿ ಅವಕಾಶವೇ ಇಲ್ಲ.

ಹೌದು… ಇದನ್ನು ನಾನು ಹೇಳುತ್ತಿಲ್ಲ,ಯಾರ ಹತ್ತಿರ ಎರಡು ಲಕ್ಷ ರೂ ಇದೆಯೋ ಅವರೇ ಕಾಂಗ್ರೆಸ್ ಪಕ್ಷದ ಟಿಕೆಟ್ ಗಾಗಿ ಅರ್ಜಿ ಹಾಕಬಹುದು ಎನ್ನುವ ಫರ್ಮಾನು ಹೊರಡಿಸಿದ್ದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ.ಇದರಲ್ಲಿಯೂ SC ST ವರ್ಗದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಟಿಕೆಟ್ ಗೆ ಅರ್ಜಿ ಹಾಕಲು ಅವರ ಹತ್ತಿರ ಒಂದು ಲಕ್ಷ ರೂ ಇರಲೇಬೇಕು.ಈಗ ಕಾಂಗ್ರೆಸ್ ಪಕ್ಷದ ಟಿಕೆಟ್ ಗೆ ಅರ್ಜಿ ಹಾಕಿದ ಸಾಮಾನ್ಯ ವರ್ಗದ ಆಕಾಂಕ್ಷಿಗಳು ಎರಡು ಲಕ್ಷ ರೂ ಡಿಡಿ,SC ST ವರ್ಗದ ಆಕಾಂಕ್ಷಿಗಳು ಒಂದು ಲಕ್ಷ ರೂ ಡಿಡಿ ಯ ಜೊತೆಗೆ ಅರ್ಜಿ ಸಲ್ಲಿಸಿದ್ದಾರೆ.

ಪ್ರಸಕ್ತ ವಿಧಾನಸಭೆಯ ಚುನಾವಣೆಗೆ ಸ್ಪರ್ದಿಸುವ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳ ಹತ್ತಿರ ಎರಡು ಲಕ್ಷ ರೂ ಇದ್ದರೆ ಮಾತ್ರ ಕಾಂಗ್ರೆಸ್ ಟಿಕೆಟ್ ಗೆ ಅರ್ಜಿ ಹಾಕಲು ಅವಕಾಶ ಇದೆ. ಹಾಗಾದ್ರೆ ಈ ವಿಚಾರದಲ್ಲಿ,ಪ್ರಾಮಾಣಿಕ,ನಿಷ್ಠಾವಂತ ಬಡ ಕಾರ್ಯಕರ್ತರು ಅರ್ಜಿ ಹಾಕಲು ಕಾಂಗ್ರೆಸ್ ಪಕ್ಷದಲ್ಲಿ ಅವಕಾಶವೇ ಇಲ್ಲ.ಬಡ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಜಯವಾಗಲಿ ಎಂದು ಘೋಷಣೆ ಕೂಗಿ ಮನೆಯಲ್ಲಿ ಕುಳಿತುಕೊಳ್ಳಬೇಕು.

ಬಿಜೆಪಿಯಲ್ಲಿ ಪ್ರಾಮಾಣಿಕ ಬಡ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಅಧಿಕಾರ ನೀಡುವ ಪದ್ದತಿ ಇದೆ,ಹೀಗಾಗಿ ಇದು ಕೇಡರ್ ಬೇಸ್ ಪಾರ್ಟಿಯಾಗಿ ಬೆಳೆದಿದೆ.ಈರಣ್ಣಾ ಕಡಾಡಿಯಂತಹ ಒಬ್ಬ ನಿಷ್ಠಾವಂತ ಅರ್ಜಿ ಹಾಕದಿದ್ದರೂ ಅವರಿಗೆ ರಾಜ್ಯಸಭಾ ಸದಸ್ಯನನ್ನಾಗಿ ಮಾಡಿದ ಉದಾಹರಣೆ ಬಿಜೆಪಿಯಲ್ಲಿ ಇದೆ.

ಆದ್ರೆ ಕೆಪಿಸಿಸಿ ಈ ಬಾರಿಯ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರಿಂದಲೇ ಹಣ ವಸೂಲಿ ಮಾಡುವ ಕೆಟ್ಟ ಪದ್ದತಿಯನ್ನು ಆರಂಭಿಸಿದೆ ಎರಡು ಲಕ್ಷ ರೂ ಇರುವ ಕಾರ್ಯಕರ್ತರು ಮಾತ್ರ ಟಿಕೆಟ್ ಗಾಗಿ ಅರ್ಜಿ ಹಾಕಬಹುದು ಎನ್ನುವ ಮಾನದಂಡವನ್ನು ಅನುಷ್ಠಾನಗೊಳಿಸಿದ್ದು, ಬಡ ಕಾರ್ಯಕರ್ತರಿಗೆ ಕಾಂಗ್ರೆಸ್ ಪಕ್ಷದಲ್ಲಿ ಈಗ ಅವಕಾಶವೇ ಇಲ್ಲದಂತಾಗಿದೆ‌.

ಬಡ ಕಾರ್ಯಕರ್ತರು ಅಧಿಕಾರಕ್ಕೆ ಬರಬಾರ್ದು ಅವರು ಬಡವರಾಗಿಯೇ ಉಳಿಯಬೇಕು, ಶ್ರೀಮಂತರು,ಲಕ್ಷಾಧೀಶ ಕಾರ್ಯಕರ್ತರು ಮಾತ್ರ ಶಾಸಕರಾಗಲು ಅರ್ಹತೆ ಹೊಂದಿದ್ದಾರೆ ಎನ್ನುವ ಸಿದ್ದಾಂತ ಕಾಂಗ್ರೆಸ್ ಪಕ್ಷದ್ದಾಗಿದೆ.ಕಾಂಗ್ರೆಸ್ ಪಕ್ಷದಲ್ಲಿ ಲಕ್ಷಾಧೀಶ ಕಾರ್ಯಕರ್ತರಿಗೆ ಮಾತ್ರ ಭವಿಷ್ಯವಿದ್ದು.ಕಾಂಗ್ರೆಸ್ ಪಕ್ಷ ಬಡವರ ಪಕ್ಷ ಎನ್ನುವ ಮಾತು ಈಗ ಕರ್ನಾಟಕದಲ್ಲಿ ಸುಳ್ಳಾಗಿದೆ.

ಬೆಳಗಾವಿ ಜಿಲ್ಲೆಯ ಹದಿನೆಂಟು ವಿಧಾನಸಭಾ ಕ್ಷೇತ್ರಗಳಲ್ಲಿ ನೂರಾರು ಜನ ಬಡ ಆಕಾಂಕ್ಷಿಗಳಿದ್ದು ಅವರೆಲ್ಲರೂ ಪಕ್ಷದ ಟಿಕೆಟ್ ಗಾಗಿ ಅರ್ಜಿ ಹಾಕಲು ಸಾಧ್ಯವಾಗಿಲ್ಲ.ಯಾರ ಹತ್ತಿರ ಎರಡು ಲಕ್ಷ ರೂ ಇದೆಯೋ ಅವರು ಮಾತ್ರ ಅರ್ಜಿ ಹಾಕಿದ್ದಾರೆ.ಬಡ ಪ್ರಾಮಾಣಿಕ,ನಿಷ್ಠಾವಂತ ಕಾರ್ಯಕರ್ತರು ಆಕಾಂಕ್ಷಿಗಳು ಇದ್ದರೂ ಸಹ ,ಹಣ ಇಲ್ಲದೇ ಇರುವದರಿಂದ ಬೆಂಗಳೂರಿಗೆ ಹೋಗದೇ ಅರ್ಜಿ ಹಾಕದೇ ಬೆಳಗಾವಿಯಲ್ಲೇ ಉಳಿದು ಕೊಂಡಿದ್ದಾರೆ.

ಮುಂದೆ ತಾಲೂಕು ಪಂಚಾಯ್ತಿ ಮತ್ತು ಜಿಲ್ಲಾ ಪಂಚಾಯ್ತಿಗೆ ಸ್ಪರ್ದೆ ಮಾಡಲು ಕಾಂಗ್ರೆಸ್ ಪಕ್ಷದ ಬಿ ಫಾರ್ಮಿಗಾಗಿ ಅರ್ಜಿ ಹಾಕಲು ಇಂತಿಷ್ಟು ದುಡ್ಡು ಪಕ್ಷಕ್ಕೆ ಕೊಡಲೇ ಬೇಕು ಎನ್ನುವ ಫರ್ಮಾನು ಹೊರಬೀಳುವದರಲ್ಲಿ ಸಂದೇಹವೇ ಇಲ್ಲ. ಯಾಕಂದ್ರೆ ಪಕ್ಷ ಶ್ರೀಮಂತವಾಗಲು, ಬಡ ಕಾರ್ಯಕರ್ತರ ಕನಸುಗಳನ್ನು ಕಾಂಗ್ರೆಸ್ ಭಗ್ನಗೊಳಿಸಿದೆ. ದುಡ್ಡು ಇರುವ ಕಾರ್ಯಕರ್ತರಿಗೆ ಮಾತ್ರ ಕಾಂಗ್ರೆಸ್ ಪಕ್ಷದಲ್ಲಿ ಭವಿಷ್ಯ ಇದೆ.ಬಡ ಕಾರ್ಯಕರ್ತರಿಗೆ ಕಾಂಗ್ರೆಸ್ ಪಕ್ಷದಲ್ಲಿ ಭವಿಷ್ಯ ಇಲ್ಲವೇ ಇಲ್ಲ ಎನ್ನುವದು ಸಾಭೀತಾಗಿದೆ.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *