ಬೆಳಗಾವಿ-
ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ ಮಹಾಮೇಳಾವಾ ಖಂಡಿಸಿ ಪ್ರತಿಭಟಿಸುತ್ತಿದ್ದ ಕರವೇ ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ್ದಾರೆ.
ನೂರಕ್ಕೂ ಅಧಿಕ ಕರವೇ ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ್ದು, ಬೆಳಗಾವಿಯ ವಾಕ್ಸಿನ್ ಡಿಪೋದಲ್ಲಿ ಅನುಮತಿ ಇಲ್ಲದೆ ಎಂಇಎಸ ಪುಂಡರು ಮೇಳಾವಾ ನಡೆಸುತ್ತಿದೆ. ಚಳಿಗಾಲ ಅಧಿವೇಶನಕ್ಕೆ ವಿರುದ್ಧವಾಗಿ ಎಂಇಎಸ್ ಮಹಾಮೇಳಾವಾ ನಡೆಸುತ್ತಿರುವುದನ್ನ ವಿರೋಧಿಸಿ ಕರವೇ ಕಾರ್ಯಕರ್ತರು ನಗರದ ಚನ್ನಮ್ಮ ವೃತ್ತದಲ್ಲಿ ರಸ್ತೆ ತಡೆದು ನಡೆಸಿ ಟಾಯರಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ರು.
ಎಂಇಎಸ ಶಾಸಕರಾದ ಸಂಭಾಜಿ ಪಾಟೀಲ ಮತ್ತು ಅರವಿಂದ ಪಾಟೀಲ ಸೇರಿ ಎಂಇಎಸ ಮುಖಂಡರನ್ನ ಗಡಿಪಾರ ಮಾಡಬೇಕು. ಎಂಇಎಸ ಸಂಘಟನೆ ನಿಷೇಧಿಸಬೇಕೆಂದು ಆಗ್ರಹಿಸಿ ಮೇಳಾವದತ್ತ ಹೋಗುತ್ತಿದ್ದ ಕರವೇ ಕಾರ್ಯಕರ್ತರನ್ನ ತಡೆದ ಪೊಲೀಸರು ಬಂಧಿಸಿದ್ರು. ಈ ಸಂದರ್ಭದಲ್ಲಿ
ಕರವೇ ಕಾರ್ಯಕರ್ತರನ್ನ ಬಂಧಿಸಿ ಬಲವಂತವಾಗಿ ಪೊಲೀಸ್ ವಾಹನಕ್ಕೆ ತುಂಬುವಾಗ ಪೊಲೀಸರು ಮತ್ತು ಕರವೇ ಕಾರ್ಯಕರ್ತರ ಮಧ್ಯೆ ತೀವ್ರ ವಾಗ್ವಾದ ನಡೆಯಿತು.
ಕೆಲ ಕಾಲ ಚನ್ನಮ್ಮ ವೃತ್ತದಲ್ಲಿ ಗದ್ದಲದ ವಶತಶವರಣ ನಿರ್ಮಾಣವಾಗಿತ್ತು