ಕರವೇ ಬೆಳಗಾವಿ ಜಿಲ್ಲಾದ್ಯಕ್ಷರಾಗಿ ದೀಪಕ ಗುಡಗನಟ್ಟಿ ನೇಮಕ
ಬೆಳಗಾವಿ-ಕರ್ನಾಟಕ ರಕ್ಷಣಾ ವೇದಿಕೆಯ ಬೆಳಗಾವಿ ಜಿಲ್ಲಾದ್ಯಕ್ಷರನ್ನಾಗಿ ದೀಪಕ ಗುಡಗನಟ್ಟಿ ಅವರನ್ನು ನೇಮಕ ಮಾಡಿ ರಾಜ್ಯಾದ್ಯಕ್ಷ ಟಿ ಎ ನಾರಾಯಣಗೌಡರು ಆದೇಶ ಹೊರಡಿಸಿದ್ದಾರೆ
ಕಳೆದ ಶುಕ್ರವಾರ ಬೆಂಗಳೂರಿನಲ್ಲಿ ಬೆಳಗಾವಿ ಜಿಲ್ಲಾ ಪದಾದಿಕಾರಿಗಳ ಸಭೆ ನಡೆಸಿ ಹೊಸ ಅದ್ಯಕ್ಷರ ನೇಮಕ ಕುರಿತು ಎಲ್ಲ ಪದಾಧಿಕಾರಿಗಳ ಅಭಿಪ್ರಾಯ ಆಲಿಸಿದ್ದ ನಾರಾಯಣಗೌಡರು ಹೊಸ ಅದ್ಯಕ್ಷರ ನೇಮಕದ ಆದೇಶ ಪತ್ರವನ್ನು ರಾಜ್ಯ ಸಂಚಾಲಕ ಮಹಾದೇವ ತಳವಾರ ಅವರ ಮುಖೇನ ತಲುಪಿಸುವದಾಗಿ ತಿಳಿಸಿದ್ದರು
ಇಂದು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾ ಪದಾಧಿಕಾರಿಗಳ ಸಭೆ ನಡೆಸಿದ ರಾಜ್ಯ ಸಂಚಾಲಕ ಮಹಾದೇವ ತಳವಾರ ,ರಾಜ್ಯಾಧ್ಯಕ್ಷರು ದೀಪಕ ಗುಡಗನಟ್ಟಿ ಅವರನ್ನು ಬೆಳಗಾವಿ ಜಿಲ್ಲಾ ಅದ್ಯಕ್ಷರನ್ನಾಗಿ ರಾಜ್ಯ ಸಮೀತಿ ನಿರ್ಧರಿಸಿದೆ ಎಂದು ಸಭೆಯಲ್ಲಿ ಘೋಷಣೆ ಮಾಡಿ ಆದೇಶ ಪತ್ರವನ್ನು ದೀಪಕ ಗುಡಗನಟ್ಟಿ ಅವರಿಗೆ ಹಸ್ತಾಂತರಿಸಿದರು
ಸಭೆಯಲ್ಲಿ ಗಣೇಶ ರೋಕಡೆ,ಸುರೇಶ ಗವಣ್ಣವರ,ಬಾಳು ಜಡಗಿ,ರಾಮಾ ವಣ್ಣೂರ ಹೊಳೆಪ್ಪಾ ಸುಲದಾಳ,ದೇವೇಂದ್ರ ತಳವಾರ ,ರಮೇಶ ತಳವಾರ ,ಕೃಷ್ಣಾ ಖಾನಪ್ಪನವರ ,ಸೇರಿದಂತೆ ಕರವೇ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು
ಬೆಳಗಾವಿ ಸುದ್ಧಿಯ ಜೊತೆ ಮಾತನಾಡಿದ ನೂತನ ಕರವೇ ಜಿಲ್ಲಾದ್ಯಕ್ಷ ದೀಪಕ ಗುಡಗನಟ್ಟಿ ಬೆಳಗಾವಿ ಜಿಲ್ಲೆಯಲ್ಲಿ ಕರವೇ ಸಂಘಟನೆ ಪ್ರಬಲವಾಗಿದ್ದು ಜಿಲ್ಲೆಯ ಪ್ರತಿಯೊಂದು ಗ್ರಾಮದಲ್ಲಿ ಕರವೇ ಕಾರ್ಯಕರ್ತರಿದ್ದು ಎಲ್ಲ ಕರವೇ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತಗೆದುಕೊಂಡು ಜಿಲ್ಲಾ ಪದಾಧಿಕಾರಿಗಳ ಮಾರ್ಗದರ್ಶನ ಪಡೆದು ಬೆಳಗಾವಿ ಜಿಲ್ಲೆಯಲ್ಲಿ ಕರವೇ ಸಂಘಟನೆಯನ್ನು ಬಲಾಡ್ಯಗೊಳಿಸುವದೇ ನನ್ನ ಸಂಕಲ್ಪವಾಗಿದೆ ಎಂದು ಹೇಳಿದರು.
ಮಹಾರಾಷ್ಟ್ರ ಸರ್ಕಾರ ಬೆಳಗಾವಿಯಲ್ಲಿ ಭಾಷಾ ವೈಷಮ್ಯದ ಬೀಜ ಬೀತ್ತಲು ಹತ್ತು ಕೋಟಿ ರೂ ಖರ್ಚು ಮಾಡುತ್ತಿದ್ದು ಮಹಾರಾಷ್ಟ್ರ ಸರ್ಕಾರದ ಚೆಲ್ಲಾಟಕ್ಕೆ ಕರವೇ ಬೆಳಗಾವಿಯಲ್ಲಿ ಆಸ್ಪದ ನೀಡುವದಿಲ್ಲ .ಮುಗ್ದ ಮರಾಠಿಗರನ್ನು ಕನ್ನಡಿಗರ ವಿರುಧ್ದ ,ಕರ್ನಾಟಕ ಸರ್ಕಾರದ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ಮಾಡಿದ್ರೆ ಕನ್ನಡದ ಕರವೇ ಸೇನಾನಿಗಳು ಬೀದಿಗಿಳಿದು ಮಹಾ ಸರ್ಕಾರದ ವಿರುದ್ಧ ಹೋರಾಟ ಮಾಡಲು ಸನ್ನಧ್ಧರಾಗಿದ್ದಾರೆ ಎಂದು ದೀಪಕ ಗುಡಗನಟ್ಟಿ ಎಚ್ಚರಿಕೆ ನೀಡಿದರು .
ಬೆಳಗಾವಿ ಗಡಿ ಗಟ್ಟಿ ಮಾಡಲು ,ಗಡಿಯಲ್ಲಿ ಕನ್ನಡಪರ ವಾತಾವರಣ ನಿರ್ಮಿಸಲು ಹಲವಾರು ಹೋರಾಟ,ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದಾಗಿ ನೂತನ ಅದ್ಯಕ್ಷ ದೀಪಕ ಗುಡಗನಟ್ಟಿ ತಿಳಿಸಿದರು.