ಬೆಳಗಾವಿ- ಕರ್ನಾಟಕ ರಾಜ್ಯೋತ್ಸವದ ದಿನ ನಾಡದ್ರೋಹಿ ಎಂಈಎಸ್ ಕರಾಳ ದಿನ ಆಚರಿಸುವದನ್ನು ಕರ್ನಾಟಕ ರಕ್ಷಣಾ ವೇದಿಕೆ ಗಂಭೀರವಾಗಿ ಪರಗಣಿಸಿದ್ದು ಇದನ್ನು ತಡೆಯಲು ಬೆಂಗಳೂರಿನಲ್ಲಿ ಗುಪ್ತ ಸಭೆ ನಡೆಸಿದೆ ಎಂದು ತಿಳಿದು ಬಂದಿದೆ
ಬೆಂಗಳೂರಿನಲ್ಲಿ ಗುಪ್ತ ಸಭೆ ಕರೆದಿದ್ದ ಕರವೇ ರಾಜ್ಯಾಧ್ಯಕ್ಷ ಟಿಎ ನಾರಾಯಣ ಗೌಡರು ರಾಜ್ಯದ ಎಲ್ಲ ಜಿಲ್ಲೆಗಳ ಪದಾಧಿಕಾರಿಗಳ ಸಭೆ ಕರೆದು ಪ್ರತಿಯೊಂದು ಜಿಲ್ಲೆಯಿಂದ ಕನಿಷ್ಠ ಐದು ಸಾವಿರ ಕನ್ನಡದ ಸೇನಾನಿಗಳನ್ನು ಬೆಳಗಾವಿಗೆ ಕರೆತರುವಂತೆ ಫರ್ಮಾನು ಹೊರಡಿಸಿದ್ದು ಜೀವದ ಹಂಗು ತೊರೆದು ಕರಾಳ ದಿನಾಚರಣೆಗೆ ಭ್ರೆಕ್ ಹಾಕುವಂತೆ ಪದಾಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ ಎಂದು ತಿಳಿದು ಬಂದಿದೆ
ಬೆಂಗಳೂರಿನಲ್ಲಿ ನಡೆದ ಈ ಗುಪ್ತ ಸಭೆಯಲ್ಲಿ ಬೆಳಗಾವಿ ಜಿಲ್ಲಾಧ್ಯಕ್ಷ ಮಹಾದೇವ ತಳವಾರ ಸೇರಿದಂತೆ ಇತರ ಪದಾಧಿಕಾರಿಗಳು ಭಾಗವಹಿಸಿದ್ದರು ಬೆಳಗಾವಿ ಜಿಲ್ಲೆಯ ಪ್ರತಿಯೊಂದು ಹಳ್ಳಿಯಿಂದ ಕಾರ್ಯಕರ್ತರನ್ನು ಬೆಳಗಾವಿಗೆ ಕರೆಯಿಸಿ ಎಂಈಎಸ್ ಕರಾಳ ದಿನಾಚರಣೆ ತಡೆಯಲೇ ಬೇಕು ಎಂದು ಟಿಎ ನಾರಾಯಣಗೌಡ್ರು ಕಟ್ಟುನಿಟ್ಟಿನ ಆದೇಶ ಮಾಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ
ಮುಂದಿನ ವಾರ ಕರವೇ ಮುಖಂಡರ ನಿಯೋಗವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಗೃಹ ಸಚಿವ ಜಿ ಪರಮೇಶ್ವರ ಬಳಿ ಕೊಂಡೊಯ್ದು ಕರಾಳ ದಿನಾಚರಣೆಗೆ ಅನುಮತಿ ನೀಡದಂತೆ ಮನವಿ ಮಾಡಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದ್ದು ಸರ್ಕಾರ ಇದಕ್ಕೆ ಸ್ಪಂದನೆ ಮಾಡದಿದ್ದರೆ ಲಕ್ಷಾಂತರ ಕಾರ್ಯಕರ್ತರೊಂದಿಗೆ ಬೆಳಗಾವಿಗೆ ಮುತ್ತಿಗೆ ಹಾಕಿ ಕರಾಳದಿನವನ್ನು ತಡೆಯಲು ಬೆಂಗಳೂರಿನಲ್ಲಿ ನಡೆದ ಗುಪ್ತ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ
ಕರಾಳ ದಿನದ ಬಗ್ಗೆ ತೆಲೆ ಕೆಡಿಸಿಕೊಂಡಿರುವ ಕರವೇ ಕನ್ನಡಿಗರ ಹಬ್ಬದ ದಿನ ಕರಾಳ ದಿನಾಚರಣೆ ನಡೆಸಲು ಅನುಮತಿ ನೀಡಿದರೆ ಅದರ ವಿರುದ್ಧ ಸಮರ ಸಾರಲು ಕರವೇ ಈಗಿನಿಂದಲೇ ಗುಪ್ತವಾಗಿ ತಯಾರಿ ನಡೆಸಿದೆ