ಬೆಳಗಾವಿ- ರಮೇಶ್ ಜಾರಕಿಹೊಳಿ ಅವರ ಮನೆಯಲ್ಲಿ ರಾಜಕೀಯ ಚಟುವಟಿಕೆಗಳು ನಡೆದಿದ್ದರಿಂದಲೇ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದ್ದಾರೆ
ಬೆಳಗಾವಿಯ ಸರ್ಕ್ಯುಟ್ ಹೌಸ್ ನಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ರಮೇಶ್ ಜಾರಕಿಹೊಳಿ ಅವರು ಅವರನ್ನು ನಂಬಿದವರಿಗೆ ಮಂತ್ರಿ ಸ್ಥಾನ ಕೊಡಿಸಲು ಲಾಭಿ ಮಾಡುವದರಲ್ಲಿ ತಪ್ಪಿಲ್ಲ.ಯೋಗೇಶ್ವರ್ ಗೆ ಮಂತ್ರಿ ಸ್ಥಾನ ನಡೆಸಲು ಅವರು ಪ್ರಯತ್ನ ಮಾಡುವದರಲ್ಲಿ ತಪ್ಪಿಲ್ಲ,ಕೆಲವು ಶಾಸಕರು ಬಿಜೆಪಿಗೆ ಬಂದು ಸರ್ಕಾರ ರಚನೆಗೆ ತ್ಯಾಗ ಮಾಡಿದ್ದಾರೆ,ಅವರೂ ಬಿಜೆಪಿ ಅವರೇ ಅವರ ಋಣ ತೀರೀಸಬೇಕಾಗಿದೆ.ಬಿಜೆಪಿಯಲ್ಲಿ ಗುಂಪುಗಾರಿಕೆ ಇಲ್ಲ.ಗುಂಪುಗಾರಿಕೆ ಇರೋದು ಕಾಂಗ್ರೆಸ್ ನಲ್ಲಿ ಎಂದು ಸಚಿವ ಈಶ್ವರಪ್ಪ ಹೇಳಿದರು
ಕುರುಬ ಸಮುದಾಯವನ್ನು ಎಸ್ ಟಿ ವರ್ಗಕ್ಕೆ ಸೇರಿಸಬೇಕೆಂದು ಹೋರಾಟ ನಡೆಸಿದ್ದೇವೆ.ನಮ್ಮ ಹೋರಾಟಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಮತ ಇದೆ.ಈ ಕುರಿತು ಇಂದು ಬೆಳಗಾವಿಯಲ್ಲಿ ಸಭೆ ಮಾಡುತ್ತೇವೆ.ನಾಳೆ ಬಾಗಲಕೋಟೆಯಲ್ಲಿ ಕುರುಬ ಸಮಾಜದ ವಿಭಾಗ ಮಟ್ಟದ ಸಭೆ ಮಾಡುತ್ತೇವೆ.ಸರ್ಕಾರವೂ ಕುರುಬ ಸಮಾಜವನ್ನು ಎಸ್.ಟಿ ವರ್ಗಕ್ಕೆ ಸೇರಿಸುವದಕ್ಕಾಗಿ ಅಧ್ಯಯನ ಸಮೀತಿ ರಚಿಸಿದೆ. ಸಮೀತಿ ಸರ್ಕಾರಕ್ಕೆ ವರದಿ ಸಲ್ಲಿಸಿದ ಬಳಿಕ ನಿರ್ಧಾರ ಹೊರಬೀಳಲಿದೆ ಎಂದು ಈಶ್ವರಪ್ಪ ಹೇಳಿದ್ರು
ಗ್ರಾಮ ಪಂಚಾಯತಿ ಚುನಾವಣೆಗೆ ವಿಶೇಷ ಆದ್ಯತೆ ಕೊಟ್ಟಿದ್ದೇವೆ ಈ ಚುನಾವಣೆಯಲ್ಲಿ,ನಮ್ಮ ಕಾರ್ಯಕರ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸುತ್ತೇವೆ.ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಕುರಿತು ಡಿಸೆಂಬರ್ 4 ರಂದು ಬಿಜೆಪಿ ಕೋರ್ ಕಮೀಟಿ ಮೀಟೀಂಗ್ ಇದೆ.5 ರಂದು ಬೆಳಗಾವಿಯಲ್ಲೇ ಬಿಜೆಪಿ ರಾಜ್ಯಕಾರ್ಯಕಾರಿಣೆ ಸಭೆ ನಡೆಯಲಿದೆ ,ಸಭೆಯಲ್ಲಿ ಅಭ್ಯರ್ಥಿ ಆಯ್ಕೆಯ ಕುರಿತು ಚರ್ಚೆ ನಡೆಯಲಿದೆ ಎಂದು ಈಶ್ವರಪ್ಪ ಹೇಳಿದ್ರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ