ಬೆಳಗಾವಿ- ಪ್ರಾರಂಭದಲ್ಲಿ ಯಡಿಯೂರಪ್ಪ ಬ್ರಿಗೇಡ್ ಹೊಗಬೇಡಿ ಎಂದು ಹೇಳಿದ್ದು ನಿಜ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯರ್ಶಿ ರಾಮಲಾಲ್ ಸಲಹೆ ಮೇರೆಗೆ ಬಿ ಎಸ್ ವೈ ಚರ್ಚೆ ನಡೆಸಲಾಗಿದೆ. ಪರಿವಾರದ ಹಿರಿಯರ ಸಮ್ಮುಖದಲ್ಲಿ ನಾನು ಬಿ ಎಸ್ ವೈ ಚರ್ಚೆ ಮಾಡಿದ್ದೆವೆ. ಸಂಗೊಳ್ಳಿ ರಾಯಣ್ಣ ಬ್ರೀಗೆಡಗೆ ಈಗ ಯಡಿಯೂರಪ್ಪ ವಿರೋಧವಿಲ್ಲ. ರಾಯಣ್ಣ ಬ್ರಿಗೇಡ್ ಸಂಘಟನೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ಬೆಳಗಾವಿಯಲ್ಲಿ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ
ಬ್ರಿಗೇಡ್ ಮುಂದುವರಿಸಲು ಈಗ ಬಿಜೆಪಿಯ ಸಮ್ಮತಿ ಇದೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಿಂದ ೪೦ ಶಾಸಕರನ್ನು ಗೆಲ್ಲುಸಲು ಅನಕೂಲವಾಗಲಿದೆ. ಕುತ್ತಿಗೆ ಕಟ್ ಮಾಡಿದ್ರು ಬಿಜೆಪಿ ಬಿಟ್ಟು ಹೊಗಲ್ಲ. ಬಿಜೆಪಿಗೆ ದ್ರೋಹ ಮಾಡಿದ್ರೆ ತಾಯಿಗೆ ಮೋಸ ಮಾಡಿದ ಹಾಗೇ. ಬೆಳಗಾವಿಯಲ್ಲಿ ಕೆ.ಎಸ್ ಈಶ್ವರಪ್ಪ ಹೇಳಿದ್ಸಾರೆ
ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಬ್ರೀಗೆಡ್ ವತಿಯಿಂದ ಸುದ್ದಿಗೋಷ್ಠಿ.ನಡೆಸಿದ ಅವರು. ರಾಜ್ಯದಲ್ಲಿ ಹಿಂದುಳಿದ, ದಲಿತರಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪನೆ. ಮಾಡಲಾಗಿದೆ ಈಗಾಗಲೇ ಶಿವಮೊಗ್ಗ, ಗದಗ, ಬಳ್ಳಾರಿ, ಉತ್ತರ ಕನ್ನಡ ಹಾಗೂ ಹಾವೇರಿಯಲ್ಲಿ ಸಮಾವೇಶ ನಡೆದಿವೆ. ಜನ ನಿರೀಕ್ಷೆಗೆ ಮೀರಿ ರಾಯಣ್ಣ ಬ್ರೀಗೆಡಗೆ ಬೆಂಬಲ ನೀಡಿದ್ದಾರೆ. ಕಳೆದ ಎರಡು ತಿಂಗಳಿಂದ ಪ್ರತಿ ವಿಧಾನ ಸಭೆ ಕ್ಷೇತ್ರದಲ್ಲಿ ಸಂಚಾಲಕ ನೇಮಕವಾಗಿದೆ. ಡಿ.೬ ಕ್ಕೆ ನಂದಗಢದಲ್ಲಿ ರಾಜ್ಯದ ಸಂಚಾಲಕರು , ಪದಾಧಿಕಾರಿಗಳಿಗೆ ಪ್ರತಿಜ್ಞೆವಿಧಿ ಕಾರ್ಯಕ್ರಮ. ಪ್ರತಿಜ್ಞವಿಧಿಯನ್ನು ಸ್ವಾಮೀಜಿಗಳು ಭೋದಿಸಲಿದ್ದಾರೆ.ಎಂದು ಈಶ್ವರಪ್ಪ ತಿಳಿಸಿದರು
ಮೂರು ಅಂಶಗಳ ಪ್ರತಿಜ್ಞೆ ವಿಧಿ ಭೋದನೆ. ದೇಶ, ಧರ್ಮ ಹಾಗೂ ಹಿಂದುಳಿದವರಿಗೆ ನ್ಯಾಯ ಒದಗಿಸಲು ಸಂಘಟನೆ ನಿರ್ಮಿಸಿಲು ಪ್ರತಿಜ್ಞೆಯನ್ನು ಪದಾಧಿಕಾರಿಗಳು ಸ್ವೀಕಾರಿಸಲಿದ್ದಾರೆ. ೩ ಸಾವಿರ ಜನ ಸಂಚಾಲಕರು ನಂದಗಢ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಈಶ್ವರಪ್ಪ ತಿಳಿಸಿದರು